ರೋಹಿತ್​ ಬಿರುಗಾಳಿ ಶತಕ, ವಿರಾಟ್​ ಕ್ಲಾಸ್​ ಬ್ಯಾಟಿಂಗ್​ಗೆ ಮಂಡಿಯೂರಿದ ಅಫ್ಘಾನಿಸ್ತಾನ​ : ಭಾರತಕ್ಕೆ 2ನೇ ಗೆಲುವು

ನವದೆಹಲಿ: ಹಿಟ್​ಮ್ಯಾನ್​ ರೋಹಿತ್​ ಶರ್ಮಾ ಬಿರುಗಾಳಿ ಶತಕ, ಚೇಸಿಂಗ್​ ಮಾಸ್ಟರ್​ ವಿರಾಟ್​ ಕೊಹ್ಲಿ ಅರ್ಧಶತಕದ ನೆರವಿನಿಂದ ಅಫ್ಘಾನಿಸ್ತಾನ ವಿರುದ್ಧ ಭಾರತ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು.ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಅಫ್ಘಾನಿಸ್ತಾನ ನಾಯಕ ಹಸ್ಮತುಲ್ಲಾ ಶಾಹಿದಿ, ಅಜ್ಮತುತ್ತಾ ಒಮರ್​ಜಾಯಿ ಅರ್ಧಶತಕಗಳ ನೆರವಿನಿಂದ ನಿಗದಿತ 50 ಓವರ್​ಗಳಲ್ಲಿ 272 ರನ್​ಗಳ ಸಾಧಾರಣ ಮೊತ್ತ ಪೇರಿಸಿತು.

ಈ ಗುರಿ ಬೆನ್ನಟ್ಟಿದ ಭಾರತ ಸೊಗಸಾದ ಆಟವಾಡಿ 35 ಓವರ್​ಗಳಲ್ಲಿ 2 ವಿಕೆಟ್​ಗೆ 272 ರನ್​ ಗಳಿಸಿತು.ಅರುಣ್​ ಜೇಟ್ಲಿ ಮೈದಾನದಲ್ಲಿಂದು ನಡೆದ ಪಂದ್ಯದಲ್ಲಿ ಸಾಂಘಿಕ ಪ್ರದರ್ಶನ ನೀಡಿದ ಟೀಂ ಇಂಡಿಯಾ ವಿಶ್ವಕಪ್​ ಫೇವರೆಟ್​ ತಂಡ ಯಾಕೆ ಎಂಬುದನ್ನು ಸಾಬೀತುಪಡಿಸಿತು. ಪಾಯಿಂಟ್​ ಪಟ್ಟಿಯಲ್ಲಿ ಸತತ ಎರಡು ಗೆಲುವಿನೊಂದಿಗೆ 2 ನೇ ಸ್ಥಾನ ಪಡೆಯಿತು. ಏಕದಿನ ವಿಶ್ವಕಪ್​ನಲ್ಲಿ ಇಂದು ಭಾರತ ಸತತ ಎರಡನೇ ಗೆಲುವು ದಾಖಲಿಸಿತು. ಪಾಯಿಂಟ್​ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಸತತ 2ನೇ ಸೋಲಿನೊಂದಿಗೆ ಅಫ್ಘನ್​ ಪಡೆ ಕೊನೆಯ ಸ್ಥಾನಕ್ಕೆ ಜಾರಿತು.

ಅಫ್ಘನ್​ ನಾಯಕನ ಹೋರಾಟ: ಬಲಿಷ್ಠ ಭಾರತದೆದುರು ಗೆಲ್ಲುವುದು ಸುಲಭವಲ್ಲವೆಂದು ತಿಳಿದಿದ್ದರೂ, ಅದ್ಭುತವಾಗಿ ಬ್ಯಾಟ್​ ಮಾಡಿದ ಅಫ್ಘನ್​ ನಾಯಕ ಹಸ್ಮತುಲ್ಲಾ ಶಾಹಿದಿ (80), ಅಜ್ಮತುಲ್ಲಾ ಒಮರ್​ಝಾಯಿ (62) ಅರ್ಧಶತಕ ಗಳಿಸಿದರು. ಇಬ್ಬರನ್ನು ಬಿಟ್ಟು ಬೇರೆ ಯಾವ ಬ್ಯಾಟರ್​ಗಳು ಪರಿಣಾಮಕಾರಿ ಎನಿಸಲಿಲ್ಲ. ಆರಂಭಿಕರಾದ ಗುರ್ಬಾಜ್​ (21), ಇಬ್ರಾಹಿಂ ಝದ್ರಾನ್​ 22 ರನ್​​ ಗಳಿಸಿದರು. ಹೀಗಾಗಿ ತಂಡ ಬ್ಯಾಟಿಂಗ್ ವೈಫಲ್ಯದಿಂದ 272 ರನ್​ ಗಳಿಸಿತು.

ಜಸ್ಪ್ರೀತ್​ ಬೂಮ್ರಾ ಅಟ್ಯಾಕ್​: ಭಾರತ ಯಾರ್ಕರ್​ ಸ್ಪೆಷಲಿಸ್ಟ್​ ಜಸ್ಪ್ರೀತ್​ ಬೂಮ್ರಾ ಮಾರಕ ದಾಳಿಗೆ ಅಫ್ಘನ್​ ಪಡೆ ರನ್​ ಗಳಿಸಲು ಪರದಾಡಿತು. ತಮ್ಮ ಕೋಟಾದ 10 ಓವರ್​ಗಳಲ್ಲಿ 39 ರನ್​ ನೀಡಿದ ಬೂಮ್ರಾ ಇಬ್ರಾಹಿಂ ಝದ್ರಾನ್​, ಮಹಮದ್​ ನಬಿ, ನಜೀಬುಲ್ಲಾ ಝದ್ರಾನ್​, ರಶೀದ್​ ಖಾನ್​ ವಿಕೆಟ್​ ಕಿತ್ತರು. ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ 2 ವಿಕೆಟ್​ ಪಡೆದರು. ಭರವಸೆಯ ಬೌಲರ್​ ಮೊಹಮದ್​ ಸಿರಾಜ್​ 9 ಓವರ್​ಗಳಲ್ಲಿ 76 ರನ್​ ಚಚ್ಚಿಸಿಕೊಂಡು ದುಬಾರಿಯಾದರು.ಕಿಶನ್ ಫಿಫ್ಟಿ ಮಿಸ್​, ಕೊಹ್ಲಿ ಪಾಸ್​: ಉತ್ತಮವಾಗಿ ಆಡುತ್ತಿದ್ದ ಇಶಾನ್​ ಕಿಶನ್​ (47) ಅರ್ಧಶತಕದ ಅಂಚಿನಲ್ಲಿ ಸ್ವೀಪ್​ ಮಾಡಲು ಹೋಗಿ ಸ್ಪಿನ್ನರ್​ ರಶೀದ್​ ಖಾನ್​ಗೆ ವಿಕೆಟ್​ ನೀಡಿದರು. ಬಳಿಕ ಬಂದ ಚೇಸ್​ ಮಾಸ್ಟರ್​ ವಿರಾಟ್​ ಕೊಹ್ಲಿ 55 ರನ್​ ಸಿಡಿಸಿ ವೃತ್ತಿ ಜೀವನದ 67ನೇ ಅರ್ಧಶತಕ ಬಾರಿಸಿದರು.

ಆಸೀಸ್​ ವಿರುದ್ಧ ಸಂಕಷ್ಟದ ಸ್ಥಿತಿಯನ್ನು ಅರಿಯದೇ ಬ್ಯಾಟ್ ಮಾಡಿ ಔಟಾಗಿ ಟೀಕೆಗೆ ಗುರಿಯಾಗಿದ್ದ ಶ್ರೇಯಸ್​ ಅಯ್ಯರ್​ 25 ರನ್​ ಗಳಿಸಿ ಗೆಲುವಿನಲ್ಲಿ ಭಾಗಿಯಾದರು.ಕಿಶನ್ ಫಿಫ್ಟಿ ಮಿಸ್​, ಕೊಹ್ಲಿ ಪಾಸ್​: ಉತ್ತಮವಾಗಿ ಆಡುತ್ತಿದ್ದ ಇಶಾನ್​ ಕಿಶನ್​ (47) ಅರ್ಧಶತಕದ ಅಂಚಿನಲ್ಲಿ ಸ್ವೀಪ್​ ಮಾಡಲು ಹೋಗಿ ಸ್ಪಿನ್ನರ್​ ರಶೀದ್​ ಖಾನ್​ಗೆ ವಿಕೆಟ್​ ನೀಡಿದರು. ಬಳಿಕ ಬಂದ ಚೇಸ್​ ಮಾಸ್ಟರ್​ ವಿರಾಟ್​ ಕೊಹ್ಲಿ 55 ರನ್​ ಸಿಡಿಸಿ ವೃತ್ತಿ ಜೀವನದ 67ನೇ ಅರ್ಧಶತಕ ಬಾರಿಸಿದರು. ಆಸೀಸ್​ ವಿರುದ್ಧ ಸಂಕಷ್ಟದ ಸ್ಥಿತಿಯನ್ನು ಅರಿಯದೇ ಬ್ಯಾಟ್ ಮಾಡಿ ಔಟಾಗಿ ಟೀಕೆಗೆ ಗುರಿಯಾಗಿದ್ದ ಶ್ರೇಯಸ್​ ಅಯ್ಯರ್​ 25 ರನ್​ ಗಳಿಸಿ ಗೆಲುವಿನಲ್ಲಿ ಭಾಗಿಯಾದರು.ಸಿಕ್ಸರ್​, ಬೌಂಡರಿಗಳನ್ನು ಸಿಡಿಸಿದ ರೋಹಿತ್​ ಶರ್ಮಾ 2019 ರ ವಿಶ್ವಕಪ್​ ಆಟದ ಸೊಬಗು ಮರುಕಳಿಸುವಂತೆ ಮಾಡಿದರು.

ರೋಹಿತ್​ ಬ್ಯಾಟ್​ ಎಷ್ಟು ಸದ್ದು ಮಾಡುತ್ತಿತ್ತೆಂದರೆ, ಒಂದು ಹಂತದಲ್ಲಿ ಕಿಶನ್ 17 ರನ್​ ಮಾಡಿದ್ದರೆ, ರೋಹಿತ್ 75 ರನ್​ ಚಚ್ಚಿದ್ದರು. ಅರ್ಧಶತಕದ ಬಳಿಕ ಮತ್ತಷ್ಟು ಆಕ್ರಮಣಕಾರಿಯಾದ ಶರ್ಮಾ 84 ಎಸೆತಗಳಲ್ಲಿ 131 ರನ್​ ಗಳಿಸಿದರು. ಇದು ವಿಶ್ವಕಪ್​ನಲ್ಲಿ ದಾಖಲಾದ 7 ನೇ ಶತಕವಾಗಿದೆ. ಈ ಮೂಲಕ ಸಚಿನ್​ ತೆಂಡೂಲ್ಕರ್​(6)ದಾಖಲೆಯನ್ನು ರೋಹಿತ್​ ಮುರಿದರು.’ಪವರ್​’ಫುಲ್​ ಪ್ಲೇ: ಸಾಧಾರಣ ಗುರಿ ಬೆನ್ನತ್ತಿದ ಭಾರತಕ್ಕೆ ಇಶಾನ್​ ಕಿಶನ್​ ಮತ್ತು ನಾಯಕ ರೋಹಿತ್​ ಶರ್ಮಾ ಬಿರುಸಿನ ಆರಂಭ ನೀಡಿದರು. ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದ ಇಬ್ಬರೂ ಆಟಗಾರರು ಅಫ್ಘನ್​ ವಿರುದ್ಧ ಲೀಲಾಜಾಲವಾಗಿ ಬ್ಯಾಟ್​ ಬೀಸಿದರು. ಮೊದಲ ಹತ್ತು ಓವರ್​ಗಳ ಪವರ್​ಪ್ಲೇನಲ್ಲಿ 94 ರನ್​ ಕಲೆ ಹಾಕಿ ಬ್ಯಾಟಿಂಗ್​ ತಾಕತ್ತು ತೋರಿಸಿದರು.