ಕುಂದಾಪುರ: ಸಪ್ತಸ್ವರ ವಿವಿಧೋದ್ದೇಶ ಸಹಕಾರಿ ಸಂಘದ ಮಹಾಸಭೆ: ಶೇ.14 ಡಿವಿಡೆಂಟ್ ಘೋಷಣೆ

ಕುಂದಾಪುರ: ಸಪ್ತಸ್ವರ ವಿವಿಧೋದ್ದೇಶ ಸಹಕಾರಿ ಸಂಘದ 2022-23 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ತಲ್ಲೂರಿನ ಜೈ ದುರ್ಗಾಮಾತ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಎಂ. ಸಂಜೀವ ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು 100 ಕೋ.ರೂ.ಗೂಅಧಿಕ ವಹಿವಾಟು ನಡೆಸಿದ್ದು, 17.61 ಕೋ.ರೂ.ಗೆ. ಸಾಲ ನೀಡಿದೆ. 25.45 ಲಕ್ಷ ರೂ. ಲಾಭ ಗಳಿಸಿದೆ. ಸದಸ್ಯರಿಗೆ ಶೇ.14 ಡಿವಿಡೆಂಟ್ ನೀಡಲು ನಿರ್ಧರಿಸಲಾಗಿದೆ. 200ಕ್ಕೂ ಮಿಕ್ಕಿ ಸ್ವಸಹಾಯ ಸಂಘ ರಚಿಸಿದ್ದು, ಮುಂದಿನ ದಿನಗಳಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.

ಸಂಘದ ಉಪಾಧ್ಯಕ್ಷ ಚಂದ್ರಶೇಖರ ದೇವಾಡಿಗ ನಾಡ, ನಿರ್ದೇಶಕರಾದ ಬಸವ ದೇವಾಡಿಗ ಉಪ್ಪಿನಕುದ್ರು, ಚಂದ್ರ ದೇವಾಡಿಗ ಹರ್ಕೂರು, ಕುಷ್ಟ ದೇವಾಡಿಗ ಹಟ್ಟಿಯಂಗಡಿ, ರಾಜೇಶ್ ದೇವಾಡಿಗ ತ್ರಾಸಿ, ಬಾಬು ದೇವಾಡಿಗ ಹೆಮ್ಮಾಡಿ, ಶಾರದಾ ದೇವಾಡಿಗ ನಾಗೂರು, ಶೀಲಾವತಿ ದೇವಾಡಿಗ ಪಡುಕೋಣೆ, ಜಯಂತಿ ದೇವಾಡಿಗ ಬಡಾಕೆರೆ, ಸುಮಾ ದೇವಾಡಿಗ ಹೆಮ್ಮಾಡಿ ಉಪಸ್ಥಿತರಿದ್ದರು.

ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಲಹರಿ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು.

ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶಾಲ ದೇವಾಡಿಗ ಲೆಕ್ಕಪತ್ರ ಮಂಡಿಸಿದರು. ನಾಗೂರು ಶಾಖಾ ವ್ಯವಸ್ಥಾಪಕ ಕರುಣಾಕರ ದೇವಾಡಿಗ ಸ್ವಾಗತಿಸಿ, ಲೆಕ್ಕಿಗೆ ಸುಶೀಲಾ ದೇವಾಡಿಗ ವಂದಿಸಿದರು. ಚಿತ್ತೂರು ಶಾಖಾ ವ್ಯವಸ್ಥಾಪಕ ಸತೀಶ್ ದೇವಾಡಿಗ, ಗುಮಾಸ್ತೆ ದೀಪಿಕಾ ಎಂ. ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.