ಇತಿಹಾಸ ಸೃಷ್ಟಿಸಿದ ಭಾರತದ ಓಟಗಾರ್ತಿ: ಮಹಿಳೆಯರ 5000 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದ ಪಾರುಲ್ ಚೌಧರಿ

ನವದೆಹಲಿ: ಭಾರತದ ಸ್ಟಾರ್ ಅಥ್ಲೀಟ್‌ಗಳಲ್ಲಿ ಒಬ್ಬರಾದ ಪಾರುಲ್ ಚೌಧರಿ ಚೀನಾದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಏಷ್ಯನ್ ಗೇಮ್ಸ್ 2023 ರ ಮಹಿಳೆಯರ 5000 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಹೆಮ್ಮೆ ತಂದಿದ್ದಾರೆ. ಕೊನೆಯ 30 ಸೆಕೆಂಡುಗಳಲ್ಲಿ ಆಟವನ್ನು ತಿರುಗಿಸಿದ ಪಾರುಲ್ ಚಿನ್ನದ ಪದಕ ಗೆದ್ದಿದ್ದಾರೆ.

ಮೊದಮೊದಲು ಹಿಂದಿದ್ದ ಪಾರುಲ್ 15 ನಿಮಿಷ ಮತ್ತು 14.75 ಸೆಕೆಂಡುಗಳ ಸಮಯವನ್ನು ತೆಗೆದುಕೊಂಡು ಓಟ ಮುಗಿಸಿ ಚಿನ್ನ ಗೆದ್ದಿದ್ದಾರೆ. ಸೋಮವಾರ ನಡೆದ ಮಹಿಳೆಯರ 3000 ಮೀಟರ್ ಓಟದಲ್ಲಿ ಪಾರುಲ್ ಬೆಳ್ಳಿ ಪದಕ ಪಡೆದಿದ್ದರು. ಪಾರುಲ್ ಅವರ ಈ ಚಿನ್ನದ ಪದಕವನ್ನು ಸೇರಿಸಿದರೆ, ಇಲ್ಲಿಯವರೆಗೆ ಭಾರತ ತನ್ನ ಖಾತೆಯಲ್ಲಿ ಒಟ್ಟು 14 ಚಿನ್ನದ ಪದಕಗಳನ್ನು ಹೊಂದಿದೆ.

ಜಪಾನ್‌ನ ರಿರಿಕಾ ಹಿರೋನಾಕಾ ಎರಡನೇ ಸ್ಥಾನ ಗಳಿಸಿದರೆ, ಕಜಕಿಸ್ತಾನ್‌ನ ಕ್ಯಾರೋಲಿನ್ ಚೆಪ್‌ಕೋಚ್ ಕಿಪ್ಕಿರುಯಿ ಕಂಚಿನ ಪದಕ ಪಡೆದಿದ್ದಾರೆ.