ಮಂಗಳೂರು: ಕೆನರಾ ಚೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿ ಇದರ 83 ನೇ ವಾರ್ಷಿಕ ಸಭೆಯಲ್ಲಿ ಚೇಂಬರ್ ನ ಅಧ್ಯಕ್ಷರಾಗಿ ಅನಂತೇಶ್ ವಿ ಪ್ರಭು ಅವರನ್ನು ಆಯ್ಕೆ ಮಾಡಲಾಯಿತು.
ವಾಣಿಜ್ಯ ಸಂಸ್ಥೆಯ ಉಪಾಧ್ಯಕ್ಷರಾಗಿ ಆನಂದ್ ಪೈ ಗಣಪತಿ ಮತ್ತು ಖಜಾಂಚಿಯಾಗಿ ಅಬ್ದುರ್ ರಹಮಾನ್ ಮುಸ್ಬಾ ಆಯ್ಕೆಯಾದರು.
2023-24ನೇ ಸಾಲಿನ ಮಂಡಳಿಯ ಇತರ ಪದಾಧಿಕಾರಿಗಳು ಮತ್ತು ನಿರ್ದೇಶಕರು:
ಗೌರವ ಕಾರ್ಯದರ್ಶಿಗಳು: ಪಿಬಿ ಅಹಮದ್ ಮುದಸ್ಸರ್ ಮತ್ತು ಅಶ್ವಿನ್ ಪೈ ಮರೂರು
ನಿರ್ದೇಶಕರಾಗಿ: ನಿಟ್ಟೆ ಯತಿರಾಜ್ ಶೆಟ್ಟಿ, ಅಮಿತ್ ರಾಮಚಂದ್ರ, ದಿವಾಕರ್ ಪೈ ಕೊಚಿಕಾರ್, ಅಶ್ವಿತ್ ಬಿ ಹೆಗ್ಡೆ, ನಿಸ್ಸಾರ್ ಫಕೀರ್ ಮೊಹಮ್ಮದ್, ಬಿ.ಎ ನಝೀರ್, ಆತ್ಮಿಕಾ ಅಮೀನ್, ಆದಿತ್ಯ ಪದ್ಮನಾಭ ಪೈ, ವಿನ್ಸೆಂಟ್ ಕುಟಿನ್ಹಾ, ನಂದಗೋಪಾಲ ಶೆಣೈ, ಜೀತನ್ ಆಲನ್ ಸಿಕ್ವೇರಾ ಮತ್ತು ಸುಜಿರ್ ಪ್ರಸಾದ್ ನಾಯಕ್












