ಹಿಂದೂಜಾ ಲೇಲ್ಯಾಂಡ್ ಫೈನಾನ್ಸ್ ಅಧ್ಯಕ್ಷರಿಂದ ಕೃಷ್ಣ ಮಠ ಭೇಟಿ

ಉಡುಪಿ: ಹಿಂದೂಜಾ ಲೇಲ್ಯಾಂಡ್ ಫೈನಾನ್ಸ್ ನ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಪಿಳ್ಳೈ ಶ್ರೀಕೃಷ್ಣ ಮಠಕ್ಕಾಗಮಿಸಿ ದೇವರ ದರ್ಶನ ಪಡೆದುಕೊಂಡು ಪರ್ಯಾಯ ಮಠದ ದಿವಾನರಾದ ವರದರಾಜ ಭಟ್ ಇವರಿಂದ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಸ್ವಾಗತ ಸಮಿತಿ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ ಮೊದಲಾದವರು ಉಪಸ್ಥಿತರಿದ್ದರು.