ಹಾಕಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

ಹ್ಯಾಂಗ್‌ಝೌ (ಚೀನಾ): 19ನೇ ಏಷ್ಯನ್ ಗೇಮ್ಸ್ 2023ರಲ್ಲಿ ಭಾರತೀಯ ಪುರುಷರ ಹಾಕಿ ತಂಡವು ತನ್ನ ನೆರೆಯ ಎದುರಾಳಿ ಪಾಕಿಸ್ತಾನದ ವಿರುದ್ಧ 10-2 ಅಂತರದ ಭರ್ಜರಿ ಜಯ ಸಾಧಿಸಿ ಟೂರ್ನಿಯಲ್ಲಿ ಗೆಲುವಿನ ಓಟವನ್ನು ಮುಂದುವರಿಸಿದೆ.ಈ ಪಂದ್ಯದಲ್ಲಿ ಭಾರತದ ಫಾರ್ವರ್ಡ್ ಆಟಗಾರ ಲಲಿತ್ ಕುಮಾರ್ ಉಪಾಧ್ಯಾಯ ತಮ್ಮ 150ನೇ ಅಂತಾರಾಷ್ಟ್ರೀಯ ಕ್ಯಾಪ್ ಧರಿಸಿದರು. ನಡೆಯುತ್ತಿರುವ 19ನೇ ಏಷ್ಯನ್​ ಗೇಮ್ಸ್​ನಲ್ಲಿ ಭಾರತ 10 ಚಿನ್ನ, 14 ಬೆಳ್ಳಿ ಮತ್ತು 14 ಕಂಚು ಗೆದ್ದು, ಒಟ್ಟು 38 ಪದಕದಿಂದ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಅಲಂಕರಿಸಿದೆ.

8ನೇ ನಿಮಿಷದಲ್ಲಿ ಭಾರತದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಮಂದೀಪ್ ಸಿಂಗ್ ಅವರ ಉತ್ತಮ ಆಟದ ಪರಿಣಾಮ ಮೊದಲ ಗೋಲ್​ (8′) ಭಾರತದ್ದಾಯಿತು. ಪಾಕಿಸ್ತಾನವು ಆರಂಭಿಕ ಪೆನಾಲ್ಟಿ ಕಾರ್ನರ್ ಅನ್ನು ಗಳಿಸಿತು ಆದರೆ ಅದನ್ನು ಗೋಲ್‌ಕೀಪರ್ ಕ್ರಿಶನ್ ಬಹದ್ದೂರ್ ಪಾಠಕ್ ತಡೆಯುವಲ್ಲಿ ಯಶಸ್ವಿ ಆದರು. ಆದರೆ ಹರ್ಮನ್‌ಪ್ರೀತ್ ಸಿಂಗ್ (11′) ಭಾರತಕ್ಕೆ ಸಿಕ್ಕ ಪೆನಾಲ್ಟಿ ಸ್ಟ್ರೋಕ್ ಅನ್ನು ಯಶಸ್ವಿಯಾಗಿ ಗೋಲ್​ ಆಗಿ ಪರಿವರ್ತಿಸುವ ಮೂಲಕ ಭಾರತಕ್ಕೆ ಮೊದಲ ಕ್ವಾರ್ಟರ್ ಅನ್ನು 2-0 ರಿಂದ ಮುಕ್ತಾಯಗೊಳಿಸಿದರು.

ಹರ್ಮನ್‌ಪ್ರೀತ್ ಸಿಂಗ್ (11′, 17′, 33′, 34′) ನಾಲ್ಕು ಗೋಲು ಗಳಿಸಿದರೆ, ವರುಣ್ ಕುಮಾರ್ (41′, 54′) ಎರಡು ಗೋಲು ಗಳಿಸಿದರು. ಮಂದೀಪ್ ಸಿಂಗ್ (8′), ಸುಮಿತ್ (30′), ಶಂಶೇರ್ ಸಿಂಗ್ (46′), ಮತ್ತು ಲಲಿತ್ ಕುಮಾರ್ ಉಪಾಧ್ಯಾಯ (49′) ಕೂಡ ತಲಾ ಒಂದು ಗೋಲು ಗಳಿಸಿ ಭಾರತಕ್ಕೆ ಜಯ ತಂದುಕೊಟ್ಟರು. ಪಾಕಿಸ್ತಾನ ಪರ ಮುಹಮ್ಮದ್ ಖಾನ್ (38′), ಅಬ್ದುಲ್ ರಾಣಾ (45′) ಗೋಲು ಗಳಿಸಿದರು.

ಪಾಕಿಸ್ತಾನದ ದ್ವಿತೀಯಾರ್ಧದಲ್ಲಿ ರಕ್ಷಣಾ ವಿಭಾಗದಲ್ಲಿನ ಆರಂಭಿಕ ದೋಷವು ಭಾರತಕ್ಕೆ ಎರಡನೇ ಪೆನಾಲ್ಟಿ ಸ್ಟ್ರೋಕ್ ಗಳಿಸಲು ಕಾರಣವಾಯಿತು ಮತ್ತು ಹರ್ಮನ್‌ಪ್ರೀತ್ ಸಿಂಗ್ (33′) ತಮ್ಮ ಹ್ಯಾಟ್ರಿಕ್ ಅನ್ನು ಪೂರ್ಣಗೊಳಿಸಲು ಪಕ್ಚರ್​-ಪರ್ಫೆಕ್ಟ್ ಸ್ಕೂಪ್‌ ಆಗಿ ಪರಿವರ್ತಿಸಿದರು. ಒಂದು ನಿಮಿಷದ ನಂತರ, ಭಾರತದ ನಾಯಕ ಹರ್ಮನ್‌ಪ್ರೀತ್ (34′) ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ 6-0 ಗೆ ತನ್ನ ತಂಡವನ್ನು ಗಳಿಸಿದರು.

ಎರಡನೇ ಕ್ವಾರ್ಟರ್‌ನ ಆರಂಭದಲ್ಲಿ ಭಾರತವು ಆರಂಭಿಕ ಪೆನಾಲ್ಟಿ ಕಾರ್ನರ್ ಅನ್ನು ಗಳಿಸಿತು ಮತ್ತು ಹರ್ಮನ್‌ಪ್ರೀತ್ ಸಿಂಗ್ (17′) ಪ್ರಬಲ ಡ್ರ್ಯಾಗ್-ಫ್ಲಿಕ್‌ನೊಂದಿಗೆ ತನ್ನ ತಂಡಕ್ಕೆ ಮೂರನೇ ಗೋಲು ಗಳಿಸಿದರು. ಸುಮಿತ್ ರಕ್ಷಣಾ ವಿಭಾಗದಲ್ಲಿ ಜಾಗರೂಕರಾಗಿದ್ದರು ಮತ್ತು ಪಾಕಿಸ್ತಾನವು ತಮ್ಮ ಮೊದಲ ಗೋಲಿನ ಹುಡುಕಾಟದಲ್ಲೇ ಇತ್ತು. ಪಾಕಿಸ್ತಾನ ತಂಡದಲ್ಲಿ ಉಂಟಾದ ಒತ್ತಡವನ್ನು ಟೀಮ್​ ಇಂಡಿಯಾದ ಆಟಗಾರರು ಬಳಸಿಕೊಂಡು ಇನ್ನಷ್ಟೂ ಗೋಲ್​ಗಳನ್ನು ಮಾಡಿದರು. ಭಾರತದ ಅನುಭವಿ ಗೋಲ್‌ಕೀಪರ್ ಪಿಆರ್ ಶ್ರೀಜೇಶ್ ಅವರು ತಮ್ಮ ಎಡಗಾಲಿನಿಂದ ನಿರ್ಣಾಯಕ ಸೇವ್ ಮಾಡಿದ ನಂತರ ಪಾಕಿಸ್ತಾನ ತಡವಾಗಿ ಪೆನಾಲ್ಟಿ ಕಾರ್ನರ್ ಗಳಿಸಿದರು. ವಿರಾಮದ ವೇಳೆಗೆ ಭಾರತ 4-0 ಮುನ್ನಡೆ ಸಾಧಿಸಿದರು.

ಎಷ್ಯಾಡ್​ನಲ್ಲಿ 7ನೇ ದಿನದ ಅಂತ್ಯಕ್ಕೆ ಭಾರತ 38 ಪದಕಗಳನ್ನು ಗೆದ್ದು 4ನೇ ಸ್ಥಾನದಲ್ಲಿದೆ. ಇಂದು ಟೆನಿಸ್​ ಮತ್ತು ಸ್ಕ್ವಾಪ್​ನಲ್ಲಿ ಗೆದ್ದ ಎರಡು ಚಿನ್ನ ಸೇರಿಸಿ ಒಟ್ಟು 10 ಬಂಗಾರದ ಪದಕಗಳು ಭಾರತದ್ದಾಗಿದೆ. 14 ಬೆಳ್ಳಿ ಮತ್ತು 14 ಕಂಚು ಸೇರಿವೆ.ಪಾಕಿಸ್ತಾನವು ಅಂತಿಮವಾಗಿ ಪೆನಾಲ್ಟಿ ಕಾರ್ನರ್‌ನಿಂದ ಮುಹಮ್ಮದ್ ಖಾನ್ (38′) ಗೋಲು ಗಳಿಸುವುದರೊಂದಿಗೆ ಬೋರ್ಡ್ ಮೇಲೆ ಅಂಕ ಪಡೆಯಿತು. ಸುಖಜೀತ್ ಸಿಂಗ್ ನೀಡಿದ ಪಾಸ್ ಪಡೆದ ವರುಣ್ ಕುಮಾರ್ (41′) ಚೆಂಡನ್ನು ನೆಟ್‌ಗೆ ಹೊಡೆದು ಭಾರತವನ್ನು 7-1 ರಿಂದ ಮುನ್ನಡೆಸಿದರು. ಆದರೆ ಅಬ್ದುಲ್ ರಾಣಾ (45′) ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿದ ಕಾರಣ ಪಾಕಿಸ್ತಾನ ಮತ್ತೊಂದು ಗೋಲು ಪಡೆದುಕೊಂಡಿತು. ಭಾರತ 7-2 ಮುನ್ನಡೆಯೊಂದಿಗೆ ಅಂತಿಮ ಕ್ವಾರ್ಟರ್‌ಗೆ ಪ್ರವೇಶಿಸಿತು.

ನಾಲ್ಕನೇ ಕ್ವಾರ್ಟರ್ ಶಂಶೇರ್ ಸಿಂಗ್ (46′) ಗೋಲ್​​ ಮಾಡಿ ಭಾರತಕ್ಕೆ 8-2 ಮುನ್ನಡೆ ಪಡೆದರು. ಪಾಕಿಸ್ತಾನವು ಲಲಿತ್ ಕುಮಾರ್ ಉಪಾಧ್ಯಾಯ (49′) ಅವರಿಗೆ ಸಾಕಷ್ಟು ಸ್ಥಳಾವಕಾಶವನ್ನು ನೀಡಿತು ಮತ್ತು ಭಾರತದ ಫಾರ್ವರ್ಡ್ ಆಟಗಾರನು ಅವರ ತಂಡಕ್ಕೆ 9 ನೇ ಗೋಲು ಹೊಡೆದರು. ವರುಣ್ ಕುಮಾರ್ (54′) ಪೆನಾಲ್ಟಿ ಕಾರ್ನರ್‌ನಿಂದ ಪಂದ್ಯದ ತಮ್ಮ ಎರಡನೇ ಗೋಲು ಗಳಿಸಿ ಭಾರತದ ಗೋಲುಗಳ ಸಂಖ್ಯೆಯನ್ನು ಎರಡಂಕಿಗೆ ತಲುಪಿಸಿದರು.