ಸಮಗ್ರ ಕೃಷಿ ಪದ್ಧತಿ ಉತ್ತೇಜನಕ್ಕಾಗಿ ಪ್ರೋ. ಜಿ.ಕೆ ವೀರೇಶ್ ಎಂಡೋಮೆಂಟ್ ಫಂಡ್: ಅರ್ಜಿ ಆಹ್ವಾನ

ಉಡುಪಿ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ಸ್ಥಾಪಕ ಅಧ್ಯಕ್ಷರು
ಅಲ್ಯುಮಿನಿ ಅಸೋಸಿಯೇಷನ್ ಸ್ಥಾಪಕ ಅಧ್ಯಕ್ಷ ಪ್ರೊ. ಜಿ.ಕೆ ವೀರೇಶ್ ರವರು 15 ಲಕ್ಷ ರೂ. ಗಳನ್ನು ರಾಜ್ಯದ ಸಮಗ್ರ ಕೃಷಿ ಪದ್ಧತಿ ಉತ್ತೇಜನಕ್ಕಾಗಿ ಅಲ್ಯುಮಿನಿ ಅಸೋಸಿಯೇಷನ್‌ಗೆ ದಾನ ನೀಡಿದ್ದು, ಈ ವಿಷಯವಾಗಿ ವಾರ್ಷಿಕ ಉತ್ತರ, ದಕ್ಷಿಣ ಹಾಗೂ ಕರಾವಳಿ ಅಥವಾ ಮಲೆನಾಡು ಭಾಗಗಳಿಂದ ಕೃಷಿ ವಿಶ್ವವಿದ್ಯಾಲಯಗಳ ವಿಸ್ತರಣಾ ನಿರ್ದೇಶಕರು, ಹಿರಿಯ ವಿಜ್ಞಾನಿಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಸಂಬಂಧಿತ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರಿಂದ ನಾನು ನಿರ್ದೇಶಿತ ಪ್ರತ್ಯೇಕ ವಿಭಾಗದ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡ ಮೂರು ರೈತರಿಗೆ ತಲಾ 25000 ರೂ. ಮೊತ್ತದ ನಗದು ಬಹುಮಾನ ಹಾಗೂ ಪಾರಿತೋಷಕ ನೀಡಲಾಗುತ್ತಿದ್ದು, ವಿಜೇತ ರೈತರನ್ನು ಸಂಪನ್ಮೂಲ ರೈತರಾಗಿ ಪರಿಗಣಿಸಲಾಗುವುದು.

ಆಯಾ ವಿಭಾಗದಿಂದ ನಾಮನಿರ್ದೇಶಿತ ರೈತರನ್ನು ಅಲ್ಯುಮಿನಿ ಆಸೋಸಿಯೇಷನ್‌ನಿಂದ ರಚಿಸಲಾದ ತಂಡವು ರೈತರ ತಾಕುಗಳಿಗೆ ಭೇಟಿ ನೀಡಿ, ಸಮಗ್ರ ಕೃಷಿ ಪದ್ಮತಿಗೆ ಅವರ ಕೊಡುಗೆ ಹಾಗೂ ವೈಯಕ್ತಿಕ ಮಾಹಿತಿ ನಮೂನೆಯ ಪರಿಶೀಲನೆ ಆಧಾರದ ಮೇಲೆ ವಿಜೇತರನ್ನು ಆಯ್ಕೆ ಮಾಡಿ, ವಿಜೇತ ರೈತರನ್ನು ಬೆಂಗಳೂರಿನಲ್ಲಿ ನಡೆಯುವ ವಿಶೇಷ ಕಾರ್ಯಕ್ರಮ ಹಾಗೂ ಸಮಗ್ರ ಕೃಷಿ ಪದ್ಧತಿ ಬಗೆಗಿನ ಒಂದು ದಿನದ ಕಾರ್ಯಾಗಾರದಲ್ಲಿ ಗೌರವಿಸಲಾಗುವುದು.

ಆದ್ದರಿಂದ ಜಿಲ್ಲೆಗೆ ಸಂಬಂಧಿಸಿದಂತೆ ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡ ಆಸಕ್ತ ರೈತರು ಅರ್ಜಿ ಸಲ್ಲಿಸಲು ಅಕ್ಟೋಬರ್ 10 ಕೊನೆಯ ದಿನವಾಗಿದ್ದು, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.