ಉಡುಪಿ: ಶ್ರೀ ದುರ್ಗಾಪರಮೇಶ್ವರೀ ಯಜ್ಞಶಾಲಾ(ರಿ.) ಪಂಚನಬೆಟ್ಟು ಇದರ ನೂತನ ಟ್ರಸ್ಟ್ ನ ಉದ್ಘಾಟನೆಯನ್ನು ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ನೆರವೇರಿಸಿ ಮಾತನಾಡಿ, ಲೌಕಿಕ ಜೀವನದಲ್ಲಿ ಅಲೌಕಿಕವಾದ ಜೀವನ ನಡೆಸುವುದು ಅತ್ಯಂತ ಮಹತ್ತರವಾದದ್ದು, ಜೀವನದಲ್ಲಿ ಸಮಾಜದ ಉನ್ನತಿಗೋಸ್ಕರ ಶ್ರಮಿಸಬೇಕು ಎಂದರು.
ಮುಖ್ಯ ಅತಿಥಿ ಶಶಿಕಲಾ ಪ್ರಭಾಕರ ಆಚಾರ್ಯ ಅಲೆಯೂರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ನಮ್ಮ ದೇಶದಲ್ಲಿ ಎರಡು ಅಂಶಗಳು ಅತ್ಯಂತ ಶ್ರೇಷ್ಠವಾದದ್ದು: ಒಂದು ಸಂಸ್ಕೃತ ಭಾಷೆ; ಇನ್ನೊಂದು ಸಂಸ್ಕೃತಿ. ಇವು ಒಂದೇ ನಾಣ್ಯದ ಎರಡು ಮುಖಗಳು. ಈ ಸಂಸ್ಕಾರಗಳು ಜೀವನದ ಉನ್ನತಿಗೆ ಕಾರಣ ಎಂದರು.
ಈ ಕಾರ್ಯಕ್ರಮದಲ್ಲಿ ಗುರುಗಳಾದ ವಿದ್ವಾನ್ ಶ್ರೀಧರಭಟ್, ಎ. ನರಸಿಂಹ ಪಂಚನಬೆಟ್ಟು, ಹಾಗೂ ಮಾತೃ ಶ್ರೀಗಳಾದ ಲೀಲಾ ಆಚಾರ್ಯ, ಗ್ರಾಮದ ಹಿರಿಯರಾದ ಮನೋರಮಾ ಶೆಟ್ಟಿ. ಹರೀಶ್ ಸಾಲಿಯಾನ್. ಶ್ರೀ ದುರ್ಗಾಪರಮೇಶ್ವರೀ ಯಜ್ಞಶಾಲಾ(ರಿ.) ಈ ಟ್ರಸ್ಟಿನ ಅಧ್ಯಕ್ಷ ಜ್ಯೋರ್ತಿ ವಿದ್ವಾನ್ ಅಜಿತ್ ಆಚಾರ್ಯ ಉಪಸ್ಥಿತರಿದ್ದರು.
ಎನ್.ಆರ್. ದಾಮೋದರ ಶರ್ಮಾ ಶುಭಾಂಶಸೆಗೈದರು. ಪ್ರಾಸ್ತಾವಿಕ ನುಡಿಗಳಲ್ಲಿ ವಿದ್ವಾನ್ ಚಂದ್ರಕಾಂತ ಪುರೋಹಿತತ್ ಟ್ರಸ್ಟ್ ನ ಧ್ಯೇಯೋದ್ದೇಶಗಳನ್ನು ತಿಳಿಸಿದರು. ಅಶೋಕ್ ಆಚಾರ್ಯ ಸ್ವಾಗತಿಸಿ ಸಂದೇಶ್ ವಂದಿಸಿ, ಯಶವಂತ ಎಂ.ಜಿ. ನಿರೂಪಿಸಿದರು.












