ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯ ಯಶಸ್ಸಿನಲೆಯಲ್ಲಿ ತೇಲುತ್ತಿರುವ ಬಾಲಿವುಡ್ ಬಹುಬೇಡಿಕೆ ನಟಿ ಆಲಿಯಾ ಭಟ್ ನಟನೆಯ ಮುಂದಿನ ಸಿನಿಮಾ ಮೇಲೆ ಪ್ರೇಕ್ಷಕರು ಸಾಕಷ್ಟು ಕುತೂಹಲ ವ್ಯಕ್ತಪಡಿಸಿದ್ದರು.
ನಟಿ ಆಲಿಯಾ ಭಟ್ ಅವರ ಮುಂದಿನ ಸಿನಿಮಾ ಘೋಷಣೆ ಆಗಿದೆ. ಜಿಗ್ರಾ ಸಿನಿಮಾದಲ್ಲಿ ನಟಿಸೋ ಜೊತೆ ನಿರ್ಮಾಪಕಿಯಾಗಿಯೂ ಕಾರ್ಯ ನಿರ್ವಹಿಸಲಿದ್ದಾರೆ.
ಅದರಂತೆ ಹೊಸ ಸಿನಿಮಾ ಅನೌನ್ಸ್ ಆಗಿದೆ.2023ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಲಿರುವ ನಟಿ ಆಲಿಯಾ ಭಟ್ ಅವರ ಮುಂದಿನ ಸಿನಿಮಾ ಘೋಷಣೆ ಆಗಿದೆ.
ಸಿನಿಮಾ ಅನೌನ್ಸ್ಮೆಂಟ್ ವಿಡಿಯೋ ಹಂಚಿಕೊಂಡಿರುವ ಧರ್ಮ ಪ್ರೊಡಕ್ಷನ್ಸ್ ಬ್ಯಾನರ್, ”ಧೈರ್ಯಶಾಲಿ ಹೋರಾಟಕ್ಕಾಗಿ ನಟಿ ಆಲಿಯಾ ಭಟ್ ಮರಳಿದ್ದಾರೆ. ಜಿಗ್ರಾ… ವಾಸನ್ ಬಾಲಾ ನಿರ್ದೇಶನದ ಜಿಗ್ರಾ 2024ರ ಸೆಪ್ಟೆಂಬರ್ 27ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ” ಎಂದು ಬರೆದುಕೊಂಡಿದೆ.
ವಾಸನ್ ಬಾಲಾ ನಿರ್ದೇಶನದಲ್ಲಿ ಜಿಗ್ರಾ ಸಿನಿಮಾ ಮೂಡಿ ಬರಲಿದೆ. ಆಲಿಯಾ ಭಟ್ ನಟಿಸೋ ಜೊತೆಗೆ ನಿರ್ಮಾಣವನ್ನೂ ಮಾಡಲಿದ್ದಾರೆ. ಧರ್ಮ ಪ್ರೊಡಕ್ಷನ್ಸ್ ಮತ್ತು ಎಟರ್ನಲ್ ಸನ್‌ಶೈನ್ ಪ್ರೊಡಕ್ಷನ್ಸ್ನ ಬೆಂಬಲದೊಂದಿಗೆ ಆಲಿಯಾ ಭಟ್ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಸಿನಿಮಾ ಮುಂದಿನ ವರ್ಷ ಅಂದರೆ 2024ರ ಸೆಪ್ಟೆಂಬರ್ 27ರಂದು ತೆರೆಗಪ್ಪಳಿಸಲಿದೆ. ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ತನ್ನ ಅಧಿಕೃತ X (ಹಿಂದಿನ ಟ್ವಿಟರ್) ಖಾತೆಯಲ್ಲಿ ಚಲನಚಿತ್ರ ಘೋಷಣೆ ಆಗಿದೆ. ನಟಿ ಆಲಿಯಾ ಭಟ್ ಕೂಡ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಸಿನಿಮಾ ಅನೌನ್ಸ್ಮೆಂಟ್ ವಿಡಿಯೋ ಶೇರ್ ಮಾಡಿದ್ದಾರೆ.