ಮಂಗಳೂರು: ಕೊಂಕಣಿ ನಾಟಕ ಸಭಾ (ರಿ) ಮಂಗಳೂರು, ಇದರ 80ನೇ ವಾರ್ಷಿಕೋತ್ಸವವು ಡಾನ್ ಬಾಸ್ಕೊ ಹಾಲ್ ನಲ್ಲಿ ಸೆ. 24 ರಂದು ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕೊ. ನಾ. ಸಭಾದ ಅಧ್ಯಕ್ಷ ವಂ| ಡೊ| ರೊಕಿ ಡಿಕುನ್ಹಾ ಕಾಪುಚಿನ್ ವಹಿಸಿದ್ದರು.
ಮಂಗಳೂರು ಕಥೊಲಿಕ್ ಧರ್ಮಪ್ರಾಂತದ ನಿವೃತ್ತ ಧರ್ಮಾಧ್ಯಕ್ಷ ಪರಮ ಪೂಜ್ಯ ಎಲೋಶಿಯಸ್ ಪಾವ್ಲ್ ಡಿಸೊಜಾ ಸಮಾರಂಭದ ಮುಖ್ಯ ಅತಿಥಿಯಾಗಿದ್ದರು.
ಕೊ. ನಾ. ಸಭಾದ ನಿಕಟಪೂರ್ವ ಅಧ್ಯಕ್ಷ ಹಾಗೂ ಮೈಸೂರಿನ ಕೃಪಾಲಯದ ರೆಕ್ಟರ್ ವಂ| ಡೊ| ಪಾವ್ಲ್ ಮೆಲ್ವಿನ್ ಡಿಸೊಜಾ ಕಾಪುಚಿನ್, ಅನಿವಾಸಿ ಉದ್ಯಮಿ ಕ್ಲೇವಿ ಲಿಯೊ ರೊಡ್ರಿಗಸ್, ದಾಯ್ಜಿವರ್ಲ್ದ್ ಮೀಡಿಯಾದ ವಾಲ್ಟರ್ ನಂದಳಿಕೆ ಮತ್ತು ಉದ್ಯಮಿ ಸಂತೋಷ್ ಸಿಕ್ವೇರಾ ಅತಿಥಿಗಳಾಗಿ ಭಾಗವಹಿಸಿದ್ದರು.
ಸಹಾಯಕ ಕಾರ್ಯಾದರ್ಶಿ ಕ್ಲೀಟಸ್ ಲೋಬೊರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
2023 ವರ್ಷದ ಕಲಾಕಾರ್ ಪುರಾಸ್ಕರವನ್ನು ಜೆಪ್ಪು ಸೆಮಿನರಿಯ ವಂ| ಡೊ| ರೊನಾಲ್ಡ್ ಸೆರಾವೊ, ಖ್ಯಾತ ನಾಟಕಕಾರ ಪ್ರಾನ್ಸಿಸ್ ಫೆರ್ನಾಂಡಿಸ್ ಮತ್ತು ಸಂಗೀತಗಾರ ಹಾಗೂ ನಟ ಪ್ರೇಮ್ ಕುಮಾರ್, ನಂದಿಗುಡ್ಡಾ ಇವರಿಗೆ ಪ್ರಧಾನ ಮಾಡಲಾಯಿತು.
ಕೊ. ನಾ. ಸಭೆಗಾಗಿ ದೀರ್ಘ ಸೇವೆ ಸಲ್ಲಿಸಿದ್ದ ಎಂಟು ಜನರನ್ನು ಸನ್ಮಾನಿಸಲಾಯಿತು.
ಕೊ. ನಾ. ಸಭಾದ ಉಪಾಧ್ಯಕ್ಷ ಲಿಸ್ಟನ್ ಡಿಸೊಜಾ ಸ್ವಾಗತಿಸಿದರು. ಸಭಾದ ಕಾರ್ಯಾದರ್ಶಿ ಫ್ಲಾಯ್ಡ್ ಡಿಮೆಲ್ಲೊ ವರದಿ ವಾಚಿಸಿ, ಕೋಶಾಧಿಕಾರಿ ಜೆರಾಲ್ಡ್ ಕೊನ್ಸೆಸೊ ವಂದಿಸಿದರು.