ಉಡುಪಿ: ರಾಜ್ಯ ಸರ್ಕಾರದ ಹೊಸ ನಿಯಮದ ಪ್ರಕಾರ ಮೆಟ್ರಿಕ್ ಟನ್ ಆಧಾರದಲ್ಲಿ ಲೈಫ್ ಟ್ಯಾಕ್ಸ್ ಪಾವತಿ, ಕಡ್ಡಾಯ ಜಿ.ಪಿ.ಎಸ್. ಅಳವಡಿಕೆಗೆ ನಿರ್ಧಾರವನ್ನು ಪುನರ್ ಪರಿಶೀಲನೆ ನಡೆಸುವಂತೆ ಹಾಗೂ ಲಾರಿ ಮಾಲೀಕರ ಸಮಸ್ಯೆ ಹಾಗೂ ಬೇಡಿಕೆಗಳ ಸಾಧಕ ಬಾಧಕಗಳ ಬಗ್ಗೆ ಸಂಘದ ಪದಾಧಿಕಾರಿಗಳ ಸಭೆ ಕರೆದು ಚರ್ಚಿಸುವಂತೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಯವರಿಗೆ ಶಾಸಕ ಯಶ್ ಪಾಲ್ ಸುವರ್ಣ ಮನವಿ ಸಲ್ಲಿಸಿದರು.
ಉಡುಪಿ ಜಿಲ್ಲೆಯ ಆರ್. ಟಿ. ಓ. ಕಚೇರಿಯಲ್ಲಿ ದೈನಂದಿನ ಚಟವಟಿಕೆಗೆ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದು, ತಕ್ಷಣ ಜಿಲ್ಲೆಯ ಕಟ್ಟಡ ಸಾಮಗ್ರಿ ಸಾಗಾಟ ಮಾಡುವ ಲಾರಿ, ಟೆಂಪೋ ಮಾಲೀಕರು ಎದುರಿಸುತ್ತಿರುವ ಸಮಸ್ಯೆಗಳಾದ ರಾಜ್ಯ ಸರ್ಕಾರದ ಉಚಿತ ಮಹಿಳಾ ಬಸ್ ಪ್ರಯಾಣದ ಶಕ್ತಿ ಯೋಜನೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ನರ್ಮ್ ಬಸ್ ಸೇವೆ ಹೆಚ್ಚಳ ಮತ್ತು
ಹೊಸ ಬಸ್ ಮಂಜೂರು ಮಾಡುವ ತನಕ ಜಿಲ್ಲೆಯಲ್ಲಿ ಖಾಸಗಿ ಬಸ್ ಸೇವೆಯನ್ನು ಮಹಿಳೆಯರು ಹೆಚ್ಚಾಗಿ ಅವಲಂಬಿಸಿರುವ ಹಿನ್ನೆಲೆಯಲ್ಲಿ ಶಕ್ತಿ ಯೋಜನೆಯನ್ನು ಖಾಸಗಿ ಬಸ್ ಗಳಿಗೂ ವಿಸ್ತರಣೆ ಕುರಿತು ಮಾತನಾಡಿದರು.