ಮಂಗಳೂರು: ಸೆ. 25 ರಂದು ANTI DRUG MONTH ವ್ಯಸನ ಜಾಗೃತಿ ನಡಿಗೆ

ಮಂಗಳೂರು: ಮಂಗಳೂರು ಕಥೊಲಿಕ ಧರ್ಮಪ್ರಾಂತ್ಯದ ಬಿಷಪ್ ಅತೀ ವಂದನೀಯ ಪೀಟರ್ ಪೌಲ್ ಸಲ್ಡಾನ್ಹಾ ಇವರ ಕನಸಿನ ವ್ಯಸನ ಮುಕ್ತ ಸಮಾಜ “ANTI DRUG MONTH (ಸೆ 1-30) ಹಾಗೂ ಮಂಗಳೂರು ಕಮಿಷನರ್ ಇವರ “ನಶೆ ಮುಕ್ತ ಮಂಗಳೂರು” ಧ್ಯೇಯದೊಂದಿಗೆ ಪಾದುವಾ ನಂತೂರು ಮಹಾವಿದ್ಯಾಲಯದಿಂದ ಬೆಂದುರ್ ಚರ್ಚ್/ಸಂತ ಆಗ್ನೇಸ್ ಕಾಲೇಜ್‌ನವರೆಗೆ “ವ್ಯಸನ ಜಾಗೃತಿ ನಡಿಗೆ”ಯು ಬೆಂದುರ್ ಚರ್ಚ್, ವಂದನೀಯ ವಿನ್ಸೆಂಟ್ ಮೊಂತೇರೊ ಸಿಒಡಿಪಿ/ಬಾಂಧವ್ಯ, ವಂದನೀಯ ವಿನ್ಸೆಂಟ್ ಡಿ ಸೋಜ ಪಾದುವಾ ಮಹಾವಿದ್ಯಾಲಯ ಯುವರೆಡ್ ಕ್ರೋಸ್, ವಂದನೀಯ ಅರುಣ್ ವಿಲ್ಸನ್ ಲೋಬೊ ವೈಟ್‌ಡಾವ್ಸ್, ಕೊರಿನ್ ರಸ್ಕೀನಾ ಸಹಜೀವನ ಒಕ್ಕೂಟ, ಕಾಸ್ಮೀರ್ ಡಿ ಸೋಜ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ (ರಿ), ಓಲ್ವಿನ್ ಡಿ ಸೋಜ ಸಂತ ಆಗ್ನೇಸ್ ಕಾಲೆಜ್ ಮಂಗಳೂರು, ಸಿ| ವೆನಿಸ್ಸಾ ಇವರುಗಳ ನೇತೃತ್ವದಲ್ಲಿ ಮಂಗಳೂರು ನಗರದ ಸಾರ್ವಜನಿಕರಿಗೆ ಮತ್ತು ಯುವಕ ಯುವತಿಯರಿಗೆ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವ ಕನಸಿನೊಂದಿಗೆ ಸೆಪ್ಟೆಂಬರ್ 25 ರಂದು ಮಧ್ಯಾಹ್ನ 3 ಘಂಟೆಯಿಂದ 4.30 ರವರೆಗೆ ಸಂತ ಸೆಬೆಸ್ಟಿಯನ್/ಸಂತ ಆಗ್ನೇಸ್ ಕಾಲೆಜ್ ಆವರಣದಲ್ಲಿ ಸಂಪನ್ನಗೊಳ್ಳುವುದು.

ಆರಕ್ಷಕ ಉನ್ನತಾಧಿಕಾರಿಗಳು, ವೈದ್ಯರಿಂದ ಬೆಂದುರ್ ಚರ್ಚ್ ಆವಾರದಲ್ಲಿ ಮಾದಕ ಜೌಷಧಿಗಳ ಮತ್ತು ಮನೋಪರಿಣಾಮಕ ವಸ್ತುಗಳ ಅಧಿನಿಯಮ, 1985 ಕಾಯ್ದೆಯ ವಿವರಣೆ ಹಾಗೂ ಮಾದಕ ವಸ್ತುಗಳನ್ನು ಉಪಯೋಗಿಸುವವರಲ್ಲಿ ಉಂಟಾಗುವ ವೈದ್ಯಕೀಯ ದುಷ್ಪಾರಿಣಾಮಗಳ ಬಗ್ಗೆ ಜಾಗೃತಿ ಮಾಹಿತಿ ನೀಡಲಾಗುವುದು.

ಈ ಕಾಲ್ನಡಿಗೆಯಲ್ಲಿ ಮೇಲೆ ತಿಳಿಸಿದ ಸಂಸ್ಥೆಗಳ ಮುಖ್ಯಸ್ಥರು, ಸುಮಾರು 400 ಸಿಬ್ಬಂದಿಯವರು/ವಿದ್ಯಾರ್ಥಿಗಳು ಪಾಲ್ಗೊಳ್ಳುವರು ಮತ್ತು ಯುವಕ ಯುವತಿಯಿಂದ, ಸಮಾಜ ಸೇವಕರಿಂದ ವ್ಯಸನ ಮುಕ್ತ ಉದ್ಘೋಷಗಳು, ಘೋಷಣೆಗಳಿಂದ ಜಾಗೃತಿಯನ್ನು ಮೂಡಿಸಲಾಗುವುದು.