​ ಕ್ರಿಕೆಟ್​ನಲ್ಲಿ ಶತಕ ಸಿಡಿಸಿದ ಕರುಣ್​ ನಾಯರ್​: ಕೌಂಟಿ ಚಾಂಪಿಯನ್‌ಶಿಪ್

ಲಂಡನ್​: ಇಲ್ಲಿನ ಓವಲ್‌ನಲ್ಲಿ ನಡೆದ ಕೌಂಟಿ ಚಾಂಪಿಯನ್‌ಶಿಪ್ ಡಿವಿಷನ್ ಒನ್ ಕ್ರಿಕೆಟ್​ ಪಂದ್ಯದಲ್ಲಿ ಕನ್ನಡಿಗ ಕರುಣ್ ನಾಯರ್ ಸರ್ರೆ ವಿರುದ್ಧದ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿದರು. ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್‌ಶಿಪ್ ಡಿವಿಷನ್ ಒನ್ ಕ್ರಿಕೆಟ್​ನಲ್ಲಿ ಕರುಣ್​ ನಾಯರ್​ ಶತಕದಾಟವಾಡಿದರು.

ಕ್ರೀಸ್​ಗಿಳಿದ ನಾಯರ್,​ ಟಾಮ್ ಟೇಲರ್ ಅವರೊಂದಿಗೆ 114 ರನ್​ಗಳ ಆಕರ್ಷಕ ಜೊತೆಯಾಟವಾಡಿ ತಂಡದ ಮೊತ್ತ ಹೆಚ್ಚಿಸತೊಡಗಿದರು. 66 ರನ್​ಗಳಿಸಿದ ಟಾಮ್​ ಓವರ್‌ಟನ್ ಅವರು ಟೇಲರ್​ಎಸೆತದಲ್ಲಿ ವಿಕೆಟ್​ ಒಪ್ಪಿಸಿ ಹೊರನಡೆದರು. ಸಮಯೋಚಿತ ಆಟ ಮುಂದುವರೆಸಿದ ನಾಯರ್​​ ಸೊಗಸಾದ ಶತಕ ಪೂರೈಸುವ ಮೂಲಕ ತಂಡದ ಸ್ಕೋರ್​ ಅನ್ನು 351ಕ್ಕೆ ಕೊಂಡೊಯ್ದರು. ಆ ಬಳಿಕ ಮಳೆಯಿಂದಾಗಿ ಎರಡನೇ ದಿನದಾಟ ನಿಲ್ಲಿಸಲಾಯಿತು. ಬುಧವಾರ ಎರಡನೇ ದಿನದಾಟವನ್ನು 51 ರನ್​ಗಳಿಂದ ಪುನರಾರಂಭಿಸಿದ ನಾಯರ್​ 238 ಎಸೆತಗಳಲ್ಲಿ 22 ಬೌಂಡರಿ ಮತ್ತು ಎರಡು ಸಿಕ್ಸರ್‌ಸಮೇತ 144 ರನ್ ಕಲೆಹಾಕಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ನಾಯರ್​ ಬ್ಯಾಟಿಂಗ್​ಗೆ ಆಗಮಿಸಿದ ವೇಳೆ ನಾರ್ಥಾಂಪ್ಟನ್‌ಶೈರ್‌ 151 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು

ಇಂಗ್ಲೆಂಡ್​ ವಿರುದ್ಧ ನಾಯರ್​ ‘ಟ್ರಿಪಲ್​ ಸೆಂಚ್ಯುರಿ’: ಕರುಣ್ ನಾಯರ್ ಭಾರತ ಪರ ಈವರೆಗೆ ಆರು ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. 2016ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ತ್ರಿಶತಕ (303*) ಸಿಡಿಸಿ ಅಬ್ಬರಿಸಿದ್ದರು. ತಮ್ಮ ಕೊನೆಯ ಟೆಸ್ಟ್ 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ್ದರು. ನಂತರ ಕಳಪೆ ಪ್ರದರ್ಶನದಿಂದಾಗಿ ಟೀಂ ಇಂಡಿಯಾದಲ್ಲಿ ಅವಕಾಶ ಪಡೆಯವಲ್ಲಿ ವಿಫಲರಾದರು. ಎರಡು ಏಕದಿನ ಪಂದ್ಯವಾಡಿರುವ ನಾಯರ್​ ಗರಿಷ್ಠ ಸ್ಕೋರ್‌ 39 ರನ್ ಆಗಿದೆ.​ 76 ಐಪಿಎಲ್​ ಪಂದ್ಯಗಳನ್ನು ಆಡಿರುವ ನಾಯರ್ 1,496 ರನ್​ಗಳನ್ನು ಕಲೆಹಾಕಿದ್ದಾರೆ. 83 ಇವರ ಹೈಸ್ಕೋರ್​ ಆಗಿದೆ. ಇತ್ತೀಚೆಗೆ ನಡೆದ ಮಹಾರಾಜ ಟ್ರೋಫಿಯಲ್ಲೂ ನಾಯರ್​ ಉತ್ತಮ ಪ್ರದರ್ಶನ ತೋರುವ ಮೂಲಕ ತಾವು ಫಾರ್ಮ್​ಗೆ ಕಮ್‌ಬ್ಯಾಕ್​ ಮಾಡಿರುವುದಾಗಿ ತೋರಿಸಿದ್ದಾರೆ.

ಸದ್ಯ ತಂಡ 9 ವಿಕೆಟ್​ ನಷ್ಟಕ್ಕೆ 351 ರನ್​ ಪೇರಿಸಿದೆ. ಕಳೆದ ವಾರ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ವಾರ್ವಿಕ್‌ಷೈರ್ ವಿರುದ್ಧ ಪಂದ್ಯದಲ್ಲಿ 31ರ ಹರೆಯದ ನಾಯರ್​ ಅರ್ಧಶತಕ ಸಿಡಿಸಿ ಮಿಂಚಿದ್ದರು. ಈ ಪಂದ್ಯದಲ್ಲಿ​ ಒಟ್ಟು 78 ರನ್​ಗಳನ್ನು ಅವರು ಕಲೆ ಹಾಕಿದ್ದರು