ಸೋಶಿಯಲ್ ಮೀಡಿಯಾದಲ್ಲಿ ‘ನಾನು ನಂದಿನಿ’ ಹವಾ: ಕಂಟೆಂಟ್ ಕ್ರಿಯೇಟರ್ ವಿಕಾಸ್ ಸಾಂಗ್ ಗೆ ಮನಸೋತ ನೆಟ್ಟಿಗರು

90ರ ದಶಕದ ಸೂಪರ್ ಹಿಟ್ ಸಾಂಗ್ ಐಮ್ ಅ ಬಾರ್ಬಿ ಗರ್ಲ್, ಇನ್ ಅ ಬಾರ್ಬಿ ವರ್ಲ್ಡ್ ನಿಂದ ಸ್ಪೂರ್ತಿ ಪಡಿದು ರಚಿಸಿರುವ ನಾನು ನಂದಿನಿ ಬೆಂಗಳೂರಿಗ್ ಬಂದೀನಿ ಸಾಂಗ್ ಕೂಡಾ ಸೂಪರ್ ಹಿಟ್ ಆಗಿದೆ. ಬೆಂಗಳೂರಿನ ಐಟಿ ಜಗತ್ತಿನಲ್ಲಿ ಉದ್ಯೋಗದಲ್ಲಿರುವ ಯುವತಿಯ ಕಥೆಯನ್ನು ಹೇಳುವ ಈ ಸಾಂಗ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ.

ಸೋಶಿಯಲ್ ಮೀಡಿಯಾ ಇನ್ಪ್ಲುಯೆನ್ಸರ್ ವಿಕಾಸ್(ವಿಕಿಪೀಡಿಯಾ_007) ಈ ಪದ್ಯದ ರಚನಾಕಾರರಾಗಿದ್ದಾರೆ. ಪದ್ಯ ಅಪ್ಲೋಡ್ ಆದಾಗಿಂದ Instagram ನಲ್ಲಿ 16M+ ವೀಕ್ಷಣೆಗಳು ಮತ್ತು 1M+ ಲೈಕ್ ಗಳನ್ನು ಪಡೆದಿದೆ.

https://www.youtube.com/watch?v=e2axr6a1ysE

ನಾನು ನಂದಿನಿ – ಬೆಂಗಳೂರಿಗೆ ಬಂದೀನಿ.. ಪಿಜಿ ಲಿ ಇರ್ತಿನಿ – ಐಟಿ ಕೆಲ್ಸ ಮಾಡ್ತೀನಿ… ಊಟ ಸರಿ ಇಲ್ಲಾ, ಅದ್ರೂನು ತಿಂತೀನಿ
ಬಂದಿದ್ ದುಡ್ಡ್ ಎಲ್ಲ ಮನೆಗ್ ಕಳುಸ್ತಿನಿ… ಈ ರೀತಿಯಾದ ಲಿರಿಕ್ಸ್ ಹೊಂದಿರುವ ಈ ಪದ್ಯ ಐಟಿ ವಲಯದಲ್ಲಿರುವವರ ಕಥೆ ವ್ಯಥೆಗಳನ್ನು ಬಣ್ಣಿಸುತ್ತದೆ.

ವಿಕಾಸ್ ತನ್ನ ಕಾಮಿಡಿ ಕಂಟೆಂಟ್ ಗೆ ಹೆಸರುವಾಸಿಯಾಗಿದ್ದು ಈ ಕಂಟೆಂಟ್ ಕೂಡಾ ಜನರಿಗೆ ಇಷ್ಟವಾಗಿದೆ. ದಿನದಿಂದ ದಿನಕ್ಕೆ ಈ ಹಾಡಿನ ಜನಪ್ರಿಯತೆ ಹೆಚ್ಚುತ್ತಲೇ ಇದೆ. ಅದರ ಸಾಪೇಕ್ಷ ಸಾಹಿತ್ಯ ಮತ್ತು ವಿಕಾಸ್ ಅವರ ಆಕರ್ಷಕ ಅಭಿನಯವು ಪ್ರೇಕ್ಷಕರನ್ನು ಆಕರ್ಷಿಸುತ್ತದೆ.

ಈ ಹಾಡಿನ ಸಂಗೀತ ನಿರ್ಮಾಪಕ ಸಚಿತ್ ಕ್ಲೇರ್, ಇದು ಶೀಘ್ರದಲ್ಲೇ Spotify ನಲ್ಲಿ ಲಭ್ಯವಾಗಲಿದೆ ಎಂದು ಖಚಿತಪಡಿಸಿದ್ದಾರೆ. ಹೆಚ್ಚುವರಿಯಾಗಿ, ನೃತ್ಯ ಸಂಯೋಜಕ ಅಮಿತ್ ಚಿಟ್ಟೆ, ಹಾಡಿಗೆ ಸಂಪೂರ್ಣವಾಗಿ ಪೂರಕವಾಗಿರುವ ಉಲ್ಲಾಸದ ಮತ್ತು ಮನರಂಜನೆಯ ನೃತ್ಯ ಸಂಯೋಜನೆಗಾಗಿ ಪ್ರಶಂಸೆಗೆ ಅರ್ಹರಾಗಿದ್ದಾರೆ.