ಮಂಗಳೂರು: ಕಚ್ಚೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ (ಲಿ.) ಇದರ 2022-23 ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ 17 ರಂದು ಮಂಗಳೂರಿನ ಸೆಬಾಸ್ಟಿಯನ್ ಕಮ್ಯೂನಿಟಿ ಹಾಲ್, ಬೆಂದೂರ್ ಇಲ್ಲಿ ಜರುಗಿತು.
2022-23 ನೇ ಸಾಲಿನ ವಾರ್ಷಿಕ ವರದಿಯನ್ನು ಹಾಗೂ ಲೆಕ್ಕಪತ್ರ ಹಾಗೂ ಬಜೆಟನ್ನು ಪ್ರಧಾನ ವ್ಯವಸ್ಥಾಪಕ ಪದ್ಮನಾಭ.ಎಂ ಮಂಡಿಸಿದರು, ನೋಟಿಸನ್ನು ನಿರ್ದೇಶಕ ಅಶೋಕ್.ಜಿ, ಲಾಭ ವಿಂಗಡಣೆಯನ್ನು ಭಾಸ್ಕರ್.ಕೆ.ಅಡ್ವಕೇಟ್, ಹಿಂದಿನ ಮಹಾಸಭೆಯ ನಿರ್ಣಯವನ್ನು ದಿವಾಕರ ಶಂಭೂರು 2023-24 ರ ಕಾರ್ಯ ಚಟುವಟಿಕೆಯನ್ನು ಹರೀಶ್.ಪಿ.ಭಂಡಾರಿ ಸಭೆಗೆ ಮಂಡಿಸಿದ ಮೇರೆಗೆ ದಾಖಲಿಸಲ್ಪಟ್ಟವು. ಸೊಸೈಟಿಯ ಬೈಲಾಕ್ಕೆ ಸಂಬಂಧಪಟ್ಟಂತೆ ತಿದ್ದುಪಡಿಯ ವಿವರವನ್ನು ನಿರ್ದೇಶಕ ಕುಮಾರ್ ಭಂಡಾರಿ ಸಭೆಗೆ ಮಂಡಿಸಿದ ಮೇರೆಗೆ ಅಂಗೀಕರಿಸಲಾಯಿತು.
ತಿದ್ದುಪಡಿಯ ಪ್ರಕಾರ ಹಾಲಿ ಕಾರ್ಯಕ್ಷೇತ್ರವನ್ನು ದ.ಕ ಹಾಗೂ ಉಡುಪಿ ಜಿಲ್ಲೆಯ ಜೊತೆಗೆ ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು ನಗರ ವ್ಯಾಪ್ತಿಗೆ ವಿಸ್ತರಿಸಿ ಅನುಮೋದನೆಗೆ ಸರ್ಕಾರವನ್ನು ಕೋರಲು ತೀರ್ಮಾನಿಸಲಾಯಿತು.
ಸೊಸೈಟಿಯು ಪ್ರತಿ ವರ್ಷ ಲಾಭಗಳಿಕೆ, ಸರ್ಕಾರದ ಆಡಿಟ್ ವರ್ಗಿಕರಣದಲ್ಲಿ “ಎ” ವರ್ಗ ಸತತ ಪಡೆದ ಸಾಧನೆ ಮಾಡಿರುವುದರ ಜೊತೆಗೆ ಕಳೆದ 3 ವರ್ಷಗಳಿಂದ ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ “ಸಾಧನ ಪ್ರಶಸ್ತಿ” ಪಡೆದಿರುವುದಲ್ಲದೆ ಮಂಗಳೂರು, ಉಡುಪಿ, ಸುರತ್ಕಲ್, ಬಂಟ್ವಾಳ ಇಲ್ಲಿನ ಎಲ್ಲಾ ಶಾಖೆಗಳು ಲಾಭ ಗಳಿಸಿರುವುದರೊಂದಿಗೆ ಎಲ್ಲಾ ಶಾಖೆಗಳು ಕಂಪ್ಯೂಟರೀಕೃತ ಲೆಕ್ಕಪತ್ರ ಅಳವಡಿಸಲಾಗಿರುತ್ತದೆ. ಸೊಸೈಟಿಯ ಅಭಿವೃದ್ಧಿ ಹಾಗೆಯೇ ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ “ಸಾಧನ ಪ್ರಶಸ್ತಿ” ಪಡೆದಿರುವುದನ್ನು ಹಾಗೂ ಸೊಸೈಟಿಯ ಉತ್ತಮ ಅಭಿವೃದ್ಧಿಯ ಬಗ್ಗೆ ಮಹಾಸಭೆಯಲ್ಲಿ ಸದಸ್ಯರು ಪ್ರಶಂಸಿದರು.
ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿಯಲ್ಲಿ ಅಧಿಕ ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು. ಲಾಭವನ್ನು ವಿಂಗಡಿಸಿ ಶೇ 20% ಡಿವಿಡೆಂಡ್ ಘೋಷಿಸಲಾಯಿತು. ಸಭೆಯಲ್ಲಿ ನಿರ್ದೇಶಕ ರಘುವೀರ ಭಂಡಾರಿ, ಭಾಸ್ಕರ ಭಂಡಾರಿ ಸುರತ್ಕಲ್, ಸುಂದರ ಭಂಡಾರಿ ರಾಯಿ, ರಾಜಾ ಬಂಟ್ವಾಳ, ರವೀಂದ್ರನಾಥ್ ಉಳ್ಳಾಲ, ಬಿ.ಎಸ್.ಭಂಡಾರಿ, ಶೇಖರ್.ಎಚ್. ಉಪಸ್ಥಿತರಿದ್ದರು.
ಶೃತಿ, ಸ್ವಾತಿ ಹಾಗೂ ಸೌಮ್ಯ ಪ್ರಾರ್ಥಿಸಿದರು. ಸೊಸೈಟಿಯ ಅಧ್ಯಕ್ಷ ಚಂದ್ರಶೇಖರ್.ಕೆ ಸ್ವಾಗತಿಸಿದರು. ನಿರ್ದೇಶಕ ಶಶಿಧರ್ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು, ಉಪಾಧ್ಯಕ್ಷ ರಾಮ ಭಂಡಾರಿ.ಎಚ್ ವಂದಿಸಿದರು.