ಉಡುಪಿ: ರಾಷ್ಟ್ರಪತಿ ದೌಪದಿ ಮುರ್ಮು ಅವರಿಗೆ ಭಾವೀ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಪ್ರಧಾನ ಯೋಜನೆಯಾದ ಕೋಟಿಗೀತಾ ಲೇಖನ ಯಜ್ಞದ ಅಭಿಯಾನದ ಮಹತ್ವವನ್ನು ವಿವರಿಸಿ, ಭಗವದ್ಗೀತೆ ಪುಸ್ತಕದೊಂದಿಗೆ ಶ್ರೀಕೃಷ್ಣ ಪ್ರಸಾದವಿತ್ತು ಪರ್ಯಾಯ ಮಹೋತ್ಸವಕ್ಕೆ ಉಡುಪಿಗೆ ಆಗಮಿಸುವಂತೆ ಮನವಿ ಮಾಡಲಾಯಿತು.
ವಿದ್ವಾಂಸರ ಲೋಕಭಾಷಾ ಪ್ರಚಾರ ಮಿತಿಯ ರಾಷ್ಟ್ರಾಧ್ಯಕ್ಷ ಪ್ರೊ. ಸದಾನಂದ ದೀಕ್ಷಿತ್, ಸಂಸ್ಕೃತ ವಿದ್ವಾಂಸ ಒಡಿಶಾದ ಡಾ. ಬಿಪಿನ ವಿಹಾರಿ ಶತಪತಿ, ರಾಜಸ್ಥಾನದ ಡಾ. ನಿರಂಜನ್ ಸಾಹು, ಅಸ್ಸಾಂನ ಡಾ. ಕುಶಲ ಕಲಿತಾ, ಉತ್ತರ ಪ್ರದೇಶದ ಡಾ. ರೀತಾ ತ್ರಿವಾರಿ, ಹೊಸದಿಲ್ಲಿಯ ಡಾ. ಶ್ರೀವತ್ಸ ಶಾಸ್ತ್ರಿ ಉಪಸ್ಥಿತರಿದ್ದರು.