ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ: 8% ಡಿವಿಡೆಂಡ್ ಘೋಷಣೆ

ಉಡುಪಿ: ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘ ಉಡುಪಿ ಇದರ 9ನೇ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ದಿನೇಶ ಸಿ ನಾಯ್ಕ್ ಇವರ ಅಧ್ಯಕ್ಷತೆಯಲ್ಲಿ ನೈವೇದ್ಯ ಹೋಟೇಲಿನ ಅನುಗ್ರಹ ಸಭಾಂಗಣದಲ್ಲಿ ಜರುಗಿತು.

ಸಂಘವು 9 ನೇ ವರ್ಷಕ್ಕೆ ಪಾದಾರ್ಪಣೆಗೊಂಡಿದ್ದು 3408 ಸದಸ್ಯರನ್ನು ಹೊಂದಿದೆ. ಸದಸ್ಯರಿಗೆ ವಿವಿಧ ರೀತಿಯ ಸಾಲಗಳನ್ನು ನೀಡಿ ಶೇ.95.36 ಸಾಲ ವಸೂಲಾತಿ ನಡೆಸಿದೆ. ಸಂಘವು ಪ್ರಸಕ್ತ ಸಾಲಿನಲ್ಲಿ ಒಟ್ಟು 36.8 ಕೋಟಿ ವ್ಯವಹಾರ ನಡೆದಿದ್ದು ಸಂಘವನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಮುಂದಿನ ವರ್ಷಗಳಲ್ಲಿ ನಾಲ್ಕು ಸಾವಿರ ಸದಸ್ಯರನ್ನು ಹೊಂದಿ 50 ಲಕ್ಷ ಶೇರು ಬಂಡವಾಳ ಹೊಂದಿ ಕಡಿಮೆ ಬಡ್ಡಿ ದರದಲ್ಲಿ ಗುಂಪು ಸಾಲ,ಚಿನ್ನಾಭರಣ ಸಾಲ,ವಾಹನ ಸಾಲ ನೀಡಲಿದ್ದೇವೆ. ಈಗಾಗಲೇ ಸಾಲ ನೀಡಿರುವ ಸಾಲಗಳಲ್ಲಿ ವಸೂಲಾತಿ ತೃಪ್ತಿಕರವಾಗಿದೆ, ಸಂಘವು ಈಗ ಬಾಡಿಗೆ ಕಟ್ಟಡದಲ್ಲಿ ಹವಾನಿಯಂತ್ರಿತ ಕಚೇರಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಮುಂದಿನ ಸಾಲಿನಲ್ಲಿ ಸಂಘವು ಸ್ವಂತ ಕಟ್ಟಡ ಹೊಂದುವ ಯೋಜನೆ ಹಾಕಿದ್ದು, ಪ್ರಸ್ತುತ ವರ್ಷದಲ್ಲಿ ಲಾಭದಲ್ಲಿ 8% ಪಾಲು ಮುನಾಫೆಯನ್ನು ಘೋಷಿಸಿ ಮುಂದಿನ ಸಾಲಿನಲ್ಲಿ 10 ಲಕ್ಷ ಲಾಭ ಬರುವ ಗುರಿ ಇದೆ ಎಂದು ಅಧ್ಯಕ್ಷರು ತಿಳಿಸಿದರು.

ಸಹಕಾರ ಸಂಘಗಳು ಉತ್ತಮ ರೀತಿಯಲ್ಲಿ ಬೆಳೆಯಬೇಕೆಂದರೆ ಆ ಸಹಕಾರ ಸಂಘದಲ್ಲಿರುವ ಸಿಬ್ಬಂದಿಗಳ ಕಾರ್ಯವೈಖರಿ ಸಿಬ್ಬಂದಿಗಳ ನಗುಮುಖದ ಸೇವೆಯಿಂದಲೇ ಸಂಘ ಉತ್ತಮ ರೀತಿಯಲ್ಲಿ ಬೆಳಯಬಹುದೆಂಬುದಕ್ಕೆ ಮಾದರಿ ಸಂಘ ಇದಾಗಿದ್ದು, ಕೇವಲ 9 ವರ್ಷದಲ್ಲಿ ಪ್ರಗತಿದಾಯಕವಾಗಿಸಂಘ ಬೆಳೆಯತ್ತಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಮಹಾಮಂಡಳ ನಿ.ಬೆಂಗಳೂರು ಇದರ ನಿರ್ದೇಶಕರಾದ ಮತ್ತು ಸಂಘದ ಕಾನೂನು ಸಲಹೆಗಾರರಾದ ಮಂಜುನಾಥ ಎಸ್,ಕೆ ಹೇಳಿದರು.

ಮಹಾಸಭೆಯಲ್ಲಿ ಏಕಶೃಂಗಾ ಸ್ವಸಹಾಯ ಗುಂಪು ನೀರಜೆಡ್ಡು ಹೆಗ್ಗುಂಜೆ ಅತೀ ಹೆಚ್ಚು ವ್ಯವಹಾರ ಶೀಘ್ರ ರೀತಿಯಲ್ಲಿ ಆಂತರಿಕ ಸಾಲ ಹಾಗೂ ಬ್ಯಾಂಕ್ ಸಾಲ ಪಡೆದು ಸೂಕ್ತ ಮರುಪಾವತಿಯ ವ್ಯವಹಾರವನ್ನು ಗಮನಿಸಿ ಸಂಘದ ಅಧ್ಯಕ್ಷ ಸತೀಶ ನಾಯ್ಕ್ ಹಾಗೂ ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಂಘದ ಸದಸ್ಯರ ಮಕ್ಕಳಾದ ತನುಶ್ರೀ, ಶ್ರಾವ್ಯ ಎಸ್ ನಾಯ್ಕ್, ಅಂಕಿತಾ, ಪಲ್ಲವಿ ಎಚ್ ನಾಯ್ಕ್ ಇವರಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.

ಉಪಾಧ್ಯಕ್ಷ ಲಕ್ಷ್ಮಣ ನಾಯ್ಕ್, ಆರ್.ಸಿ.ನಾಯ್ಕ್, ಗಣೇಶ, ಸತೀಶ ನಾಯ್ಕ್, ಚಂದ್ರ ಎಚ್ ನಾಯ್ಕ್, ಕೃಷ್ಣ ನಾಯ್ಕ್, ಕರುಣಾಕರ ಕಾಂಚನ್, ಎನ್.ಸುರೇಶ ಅಮೀನ್, ರಘುನಾಥ ನಾಯ್ಕ್, ಕುಮಾರಿ ಸ್ವಾತಿ ಹಾಗೂ ಅನೇಕ ಸಹಕಾರಿಯ ಸಿ.ಇ.ಓ ಗಳು ಉಪಸ್ಥಿತರಿದ್ದರು.

ಸಹಕಾರಿಯ ಎಲ್ಲಾ ಸದಸ್ಯರಿಗೆ ಕೊಚ್ಚಿಗೆ ಅಕ್ಕಿ ಯನ್ನು ವಿತರಣೆ ಮಾಡಲಾಯಿತು.

ಅಶ್ವಿನಿ ಪ್ರಾರ್ಥಿಸಿದರು, ಶಾಂತಿ ಸ್ವಾಗತಿಸಿ, ಸಿ.ಇ.ಓ ಪ್ರಶಾಂತ್ ಶಿರೂರ್ ವಾರ್ಷಿಕ ವರದಿ ವಾಚಿಸಿ ವಂದಿಸಿದರು.