ಚಂದ್ರಯಾನ-3, ರಾಮ ಮಂದಿರ, G-20, ಕರೆನ್ಸಿ ಗಣಪ… ದೇಶದ ಮೂಲೆ ಮೂಲೆಯಲ್ಲೂ ಗಣೇಶ ಹಬ್ಬದ ಸಂಭ್ರಮ!!

ನವದೆಹಲಿ: ಕಳೆದ ತಿಂಗಳಷ್ಟೇ ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಅನ್ನು ಯಶಸ್ವಿಯಾಗಿ ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿತ್ತು. ಚಂದ್ರಯಾನ-3 ವಿಶ್ವದಲ್ಲೇ ಅತ್ಯಂತ ಕುತೂಹಲ ಮತ್ತು ಹರ್ಷವನ್ನುಂಟು ಮಾಡಿದ್ದು, ಭಾರತದಲ್ಲಂತೂ ಚಂದ್ರಯಾನ-3 ರ ಯಶಸ್ಸಿನ ಗುಂಗು ತಿಂಗಳು ಕಳೆದರೂ ಮಾಸಿಲ್ಲ.

ಇದೀಗ ದೇಶದ ಮೂಲೆ ಮೂಲೆಯ ಗಣೇಶ ಪಂಡಾಲ್ ನಲ್ಲಿ ಚಂದ್ರಯಾನ-3 ರ ಥೀಮ್ ಆಕರ್ಷಣೆ ಮತ್ತು ಜನ ಮನ್ನಣೆ ಪಡೆದಿದೆ.

ತಮಿಳುನಾಡು, ಕೊಲ್ಕತ್ತಾ, ಒಡಿಶಾ, ಹೈದರಾಬಾದ್, ಗುವಾಹಟಿ ಮುಂತಾದೆಡೆ ಚಂದ್ರಯಾನ-3 ರ ಪಂಡಾಲುಗಳು ರಾರಾಜಿಸುತ್ತಿವೆ. ಇದರ ಜೊತೆಗೆ ರಾಮಮಂದಿರದ ಪಂಡಾಲು, G-20 ಪಂಡಾಲುಗಳು ಕೂಡಾ ಜನಾಕರ್ಷಣೆಯ ಕೇಂದ್ರವಾಗಿದೆ.

ಬೆಂಗಳೂರಿನ ಶ್ರೀ ಸತ್ಯ ಗಣಪತಿ ದೇವಸ್ಥಾನವೊಂದು ತನ್ನ ಆವರಣವನ್ನು ಸುಮಾರು 3 ಕೋಟಿ ರೂ ಮೌಲ್ಯದ ನಾಣ್ಯಗಳು ಮತ್ತು ಕರೆನ್ಸಿ ನೋಟುಗಳಿಂದ ಅಲಂಕರಿಸಿದೆ.

ದೇಶ ಗಣೇಶ ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದು ಎಲ್ಲೆಡೆ ಸಂಭ್ರಮ ತುಂಬಿದೆ.

Sri Sathya Sai Ganapathy temple decorated with coins and notes/ PTI