ಹೊಸದಿಲ್ಲಿ: ಜೂನ್ನಲ್ಲಿ ನಡೆದ ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕನ ಹತ್ಯೆಗೆ ಭಾರತದ “ಸಂಭಾವ್ಯ” ಸಂಬಂಧವನ್ನು ಉಲ್ಲೇಖಿಸಿ ಕೆನಡಾ ತನ್ನ ದೇಶವನ್ನು ತೊರೆಯುವಂತೆ ಭಾರತೀಯ ಅಧಿಕಾರಿಯನ್ನು ಕೆನಡಾ ಕೇಳಿದ ಕೆಲವೇ ಗಂಟೆಗಳ ನಂತರ ಕೆನಡಾದ ರಾಜತಾಂತ್ರಿಕರನ್ನು ದೇಶದಿಂದ ಹೊರಹಾಕುವುದಾಗಿ ಭಾರತ ಘೋಷಿಸಿದೆ.
ಭಾರತದಲ್ಲಿರುವ ಕೆನಡಾದ ಹೈಕಮಿಷನರ್ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ (MEA) ಕರೆಸಲಾಯಿತು ಮತ್ತು ಹಿರಿಯ ಕೆನಡಾದ ರಾಜತಾಂತ್ರಿಕರನ್ನು ಹೊರಹಾಕುವ ನಿರ್ಧಾರದ ಬಗ್ಗೆ ತಿಳಿಸಲಾಯಿತು.
ಜೂನ್ನಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂಬ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪವನ್ನು ಭಾರತ ತಿರಸ್ಕರಿಸಿದೆ. ಇದನ್ನು “ಅಸಂಬದ್ಧ” ಮತ್ತು “ಪ್ರೇರಿತ” ಎಂದು ಬಣ್ಣಿಸಿದೆ.
ಭಾರತವು ವಾಂಟೆಡ್ ಭಯೋತ್ಪಾದಕ ಎಂದು ಘೋಷಿಸಿದ್ದ ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೂ ಭಾರತೀಯ ಏಜೆಂಟ್ಗಳಿಗೂ ಸಂಬಂಧವಿರಬಹುದು ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ತನ್ನ ಸರ್ಕಾರವು “ವಿಶ್ವಾಸಾರ್ಹ ಆರೋಪಗಳನ್ನು” ಹೊಂದಿದೆ ಎಂದು ಸೋಮವಾರ ಹೇಳಿದ್ದರು. ಜೂನ್ 18 ರಂದು ಸರ್ರೆಯಲ್ಲಿ ನಿಜ್ಜರ್ ಕೊಲ್ಲಲ್ಪಟ್ಟಿದ್ದ. ಈ ಹಿನ್ನೆಲೆಯಲ್ಲಿ ಕೆನಡಾದಲ್ಲಿದ್ದ ಭಾರತೀಯ ಅಧಿಕಾರಿಗಳನ್ನು ದೇಶ ತೊರೆಯುವಂತೆ ಕೆನಡಾ ಹೇಳಿದೆ.
ಏಟಿಗೆ ಎದಿರೇಟು ನೀಡಿದ ಭಾರತವು ಕೆನಡಾದ ರಾಜತಾಂತ್ರಿಕ ಅಧಿಕಾರಿ ಕ್ಯಾಮೆರಾನ್ ಮ್ಯಾಕೆ, ಐದು ದಿನಗಳೊಳಗಾಗಿ ದೇಶ ಬಿಟ್ಟು ಹೊರಟು ಹೋಗುವಂತೆ ತಾಕೀತು ಮಾಡಿದೆ.