ಕನ್ನರ್ಪಾಡಿ: ಸೆ.19 ರಿಂದ 24 ರವರೆಗೆ 18 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

ಕನ್ನರ್ಪಾಡಿ: ಕನ್ನರ್ಪಾಡಿ-ಕಿನ್ನಿಮೂಲ್ಕಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 18 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಸೆ.19 ರಿಂದ 24 ರವರೆಗೆ ಕಿನ್ನಿಮೂಲ್ಕಿ ಸ್ವಾಗತ ಗೋಪುರದ ಬಳಿಯ ಗಣಪತಿ ಮೈದಾನದಲ್ಲಿ ನಡೆಯಲಿದೆ.

ಸೆ.19 ರ ಸಂಜೆ 7 ಗಂಟೆಗೆ ಸಭಾಕಾರ್ಯಕ್ರಮ ನಡೆಯಲಿದ್ದು, ಕನ್ನರ್ಪಾಡಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಮುರಳೀಧರ ಬಲ್ಲಾಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೆ. ನಾರಾಯಣ್ ರಾವ್ ವಹಿಸಲಿದ್ದಾರೆ.

ಗ್ರ. ಪಂ. ಉಪಾಧ್ಯಕ್ಷ ನವೀನ್ ಶೆಟ್ಟಿ, ಗಿರಿಜಾ ಹೆಲ್ತ್ ಕೇರ್ ಸೆಂಟರ್ ನ ರವೀಂದ್ರ ಶೆಟ್ಟಿ ಎಲ್.ಐ.ಸಿ ನಿವೃತ್ತ ಆಡಳಿತಾಧಿಕಾರಿ ಸುಧಾಕರ್, ಪ್ರಸಾದ್ ನೇತ್ರಾಲಯದ ಎಂಡಿ ಡಾ. ಕೃಷ್ಣ ಪ್ರಸಾದ್ ಭಾಗವಹಿಸಲಿದ್ದಾರೆ.

ಸೆ.23 ರಂದು ಸಂಜೆ 7 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ನಗರಸಭೆ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಲಿದ್ದು, ಕಡೆಕಾರು ಗ್ರಾ.ಪಂ ಅಧ್ಯಕ್ಷ ಜಯಕರ ಶೇರಿಗಾರ್, ಸಾಫಲ್ಯ ಟ್ರಸ್ಟ್ ಅಧ್ಯಕ್ಷೆ ನಿರುಪಮಾ ಪ್ರಸಾದ್ ಶೆಟ್ಟಿ ಸಿವಿಲ್ ಕಾಂಟ್ಯ್ರಾಕ್ಟರ್ ರಾಘವ ಸನಿಲ್ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಅಂಗವಾಗಿ ಸಾಧಕರಿಗೆ ಸನ್ಮಾನ, ವಿದ್ಯಾರ್ಥಿ ವೇತನ ವಿತರಣೆ, ಬಹುಮಾನ ವಿತರಣೆ, ದಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಸಮಿತಿ ಅಧ್ಯಕ್ಷ ನಾರಾಯಣ್ ರಾವ್ ಅಹಾಗೂ ಕಾರ್ಯದರ್ಶಿ ಕೆ. ಕೃಷ್ಣಮೂರ್ತಿ ಆಚಾರ್ಯ ತಿಳಿಸಿದ್ದಾರೆ.