ಚೆಕ್ ಅಮ್ಯಾನ ಪ್ರಕರಣ: ಆರೋಪಿಗೆ ನ್ಯಾಯಾಂಗ ಬಂಧನ

ಉಡುಪಿ: ಉಡುಪಿ ಜಿಲ್ಲೆಯ ಹೆಗ್ಗುಂಜೆ ಗ್ರಾಮದ ಮಂದರ್ತಿ ನಿವಾಸಿ ಆರೋಪಿ ಉದಯ ಮರಕಾಲರವರ ವಿರುದ್ದ 2017ರ ಚೆಕ್‌ಬೌಸ್ ಪ್ರಕರಣದಲ್ಲಿ ತಲೆಮರೆಸಿಕೊಂಡ ಹಿನ್ನೆಲೆಯಲ್ಲಿ ವಾರಂಟ್ ನೀಡಿದ ಕಾರಣ ಸೆ.16 ರಂದು ಶನಿವಾರ ಬ್ರಹ್ಮಾವರ ಪೊಲೀಸ್ ದಸ್ತಗಿರಿ ಮಾಡಿ ನ್ಯಾಯಲಯಕ್ಕೆ ಹಾಜರು ಪಡಿಸಿದ್ದರು. ಉಡುಪಿ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಧೀಶ ವಿನಾಯಕ್ ಇವರು ಆರೋಪಿಗೆ ಸೆ.19 ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದ್ದಾರೆ. ಪಿರ್ಯಾದಿದಾರ ಶಿರಿಯಾರ ಗ್ರಾಮದ ಖಾಯಂ ನಿವಾಸಿ ಸುರೇಂದ್ರ ಶೆಟ್ಟಿ ಪರ ಉಡುಪಿ ಹಿರಿಯ ನ್ಯಾಯವಾದಿ ಮತ್ತು ನೋಟರಿ ಶಿರಿಯಾರ ಕಲ್ಮರ್ಗಿ ಪ್ರಭಾಕರ ನಾಯಕ್ ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಪಿರ್ಯಾದಿದಾರ ಶಿರಿಯಾರ ಗ್ರಾಮದ ಖಾಯಂ ನಿವಾಸಿ ಸುರೇಂದ್ರ ಶೆಟ್ಟಿ ಎಂಬವರಿಗೆ ಆರೋಪಿ ಉದಯ ಮರಕಾಲ ಎಂಬವರು ಹಣ ಪಾವತಿಗೆ ಚೆಕ್ ನೀಡಿದ್ದು, ಚೆಕ್ ಅಮ್ಯಾನವಾಗಿ ಬ್ಯಾಂಕ್ ಖಾತೆಯಲ್ಲಿ ಬೌನ್ಸ್ ಆಗಿದ್ದು 2017ರಲ್ಲಿ ಪಕರಣ ದಾಖಲಾಗಿದ್ದು, ಇವತ್ತಿನವರಗೆ ಪಿರ್ಯಾದಿದಾರ ಸುರೇಂದ್ರ ಶೆಟ್ಟಿಯವರಿಗೆ ಹಣ ಪಾವತಿಯಾಗಿಲ್ಲ. ಆ ಪ್ರಕಾರ ೧೩೮ ಅನ್ ಐ ಕಲ೦ ಪ್ರಕಾರ ಕ್ರಿಮಿನಲ್ ಕೇಸ್ ದಾಖಲಾಗಿತ್ತು. ಆರೋಪಿ ನ್ಯಾಯಲಯಕ್ಕೆ ಸರಿಯಾಗಿ ಹಾಜರಾಗದೇ ತಲೆಮರೆಸಿಕೊಂಡ ಹಿನ್ನೆಲೆಯಲ್ಲಿ ವಾರಂಟ್ ಹೊರಡಿಸಲಾಗಿತ್ತು. ಸೆ.16 ರಂದು ಶನಿವಾರ ಬೆಳಿಗ್ಗೆ ಬ್ರಹ್ಮಾವರ ಪೊಲೀಸರು ಸಾಬರಕಟ್ಟೆಯಲ್ಲಿ ದಸ್ತಗಿರಿ ಮಾಡಿ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಉಡುಪಿ ನ್ಯಾಯಲಯಕ್ಕೆ ಹಾಜರು ಪಡಿಸಿದ್ದರು.