ಕುಂದಾಪುರ: ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮೋವಾಡಿಯಲ್ಲಿ ಅಕ್ರಮ ಮರಳುಗಾರಿಕೆ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಕಾರ್ಮಿಕರನ್ನು ಬಂಧಿಸಿದ್ದಾರೆ. ಸೆ.12ರಂದು ಮೋವಾಡಿ ಪ್ರದೇಶದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಅಡ್ಡೆಯ ಮೇಲೆ ಗಂಗೊಳ್ಳಿ ಠಾಣೆ ಪಿ.ಎಸ್.ಐ ಹರೀಶ್ ಆರ್. ಹಾಗೂ ಸಿಬ್ಬಂದಿ ತಂಡ ಈ ದಾಳಿ ನಡೆಸಿದೆ.
ದಾಳಿಯಲ್ಲಿ ಉತ್ತರಪ್ರದೇಶದ ಮೈನೇಜರ್ (30), ಗುದ್ದು ಕುಮಾರ (20), ಜಿತೇಂದ್ರ ಕುಮಾರ್ (25), ದಿನೇಶ (22), ಮತ್ತು ಸ್ಥಳೀಯ ನಿವಾಸಿ ಆಲ್ಬನ್ (42) ಎಂಬವರನ್ನು ಬಂಧಿಸಲಾಗಿದೆ.
ವಶಕ್ಕೆ ಪಡೆದವರಿಂದ ಕೃತ್ಯಕ್ಕೆ ಬಳಿಸಿದ ಅಂದಾಜು ತಲಾ 2 ಲಕ್ಷ ರೂಪಾಯಿ ಮೌಲ್ಯದ ಪ್ಲೈವುಡ್ ನ ಪೈಬರ್ ಕೋಟ್ ದೋಣಿ – 2, ಅಂದಾಜು 2,000 ರೂ ಮೌಲ್ಯದ ಪ್ಲಾಸ್ಟಿಕ್ ಬುಟ್ಟಿ -8, ಅಂದಾಜು 1,800 ರೂ ಮೌಲ್ಯದ ಕಬ್ಬಿಣದ ಬಕೆಟ್ – 6, ಅಂದಾಜು 200 ರೂ ಮೌಲ್ಯದ ಮರದ ಹಲಗೆ-2, ಅಂದಾಜು 6,000 ರೂ ಮೌಲ್ಯದ ಕಬ್ಬಿಣದ ಸ್ಟ್ಯಾಂಡ್ -1 ಮತ್ತು ಅಂದಾಜು 3,500-ರೂ ಮೌಲ್ಯದ ಒಂದು ಯುನಿಟ್ ಮರಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.