ಕಂಪನಿ ಸೆಕ್ರೆಟರಿ ಪರೀಕ್ಷೆಯಲ್ಲಿ ರ‍್ಯಾಂಕ್ ಗಳಿಸಿದ ವಿದ್ಯಾರ್ಥಿನಿಯರಿಗೆ ಸನ್ಮಾನ

ಉಡುಪಿ: ಶ್ರೀ ಲಕ್ಷ್ಮೀ ವೆಂಕಟೇಶ ದೇವಳದ ಎದುರುಗಡೆ ಇರುವ ತೆಂಕಪೇಟೆ ಗೆಳೆಯರ ಬಳಗ ವತಿಯಿಂದ ಶನಿವಾರದಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಇವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.

ಬಳಿಕ ಕಂಪನಿ ಸೆಕ್ರೆಟರಿ ಪರೀಕ್ಷೆಯಲ್ಲಿ ರ‍್ಯಾಂಕ್ ಗಳಿಸಿದ ಮೂವರು ವಿದ್ಯಾರ್ಥಿಗಳಾದ ಕುಮಾರಿ ಕೆ. ಪ್ರತೀಕ್ಷಾ ಪೈ, ಕುಮಾರಿ ಎಮ್. ಪದ್ಮಶ್ರೀ ಪೈ, ಕುಮಾರಿ ಸಹನಾ ಕಾಮತ್ ಇವರನ್ನು ಶಾಸಕ ಯಶ್ ಪಾಲ್ ಸುವರ್ಣ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.

ಮುಖ್ಯ ಅತಿಥಿ ಕೆ. ಅಶೋಕ್ ಕಾಮತ್, ಕೆ. ರಾಜಾರಾಂ ಪ್ಯೆ, ಸುಧೀರ್ ಭಟ್, ಎಮ್. ದೇವದಾಸ್ ಪೈ, ಮಾಜಿ ನಗರಸಭಾ ಸದಸ್ಯ ಪಿ. ಶ್ಯಾಂ ಪ್ರಸಾದ್ ಕುಡ್ವ, ರಾಮದಾಸ್ ಪಿ. ಪೈ, ಕೆ‌. ಜಯರಾಂ ಕಾಮತ್, ಸಂಜಯ್ ನಾಯಕ್ , ಜಿ. ಸತೀಶ್ ನಾಯಕ್, ಪಿ. ಮಹೇಶ್ ಕುಡ್ವ, ಕೆ. ರಮೇಶ್ ನಾಯಕ್, ಟಿ. ಗಣೇಶ್ ಶೆಣೈ, ಯು. ಅಜಿತ್ ಶೆಣೈ, ಕೆ. ದೀಪಕ್ ಶಾನುಭಾಗ್, ಎ. ರಮೇಶ್ ನಾಯಕ್, ರೋಹಿದಾಸ್ ಪೈ, ಯು. ಪ್ರಶಾಂತ್ ರಾವ್, ಕೆ. ಶ್ರೀನಿವಾಸ ಶೆಣೈ, ಎಸ್. ಶ್ರೀಕಾಂತ್ ಪೈ, ಕೆ. ಪುಂಡಲೀಕ ಪ್ರಭು, ಪಿ. ಸದಾನಂದ ಶೆಣೈ, ವಿನಾಯಕ ಬಾಳಿಗಾ, ಮಹಿಳಾ ಪ್ರಮುಖರಾದ ಎ. ಪುಷ್ಪಾ ಭಟ್, ಯು. ಶಕುಂತಲಾ ಶೆಣೈ, ಎ. ಸ್ಯೌಜನ್ಯ ಕಿಣಿ, ಕರುಣಾ ಎಸ್.ಪೈ ಮತ್ತು ವಿದ್ಯಾರ್ಥಿನಿಯರ ಪೋಷಕರು ಉಪಸ್ಥಿತರಿದ್ದರು.