ಯುಎಸ್ ಓಪನ್‌: 24 ನೇ ಗ್ರ್ಯಾನ್‌ಸ್ಲಾಮ್ ಗೆದ್ದು ಇತಿಹಾಸ ರಚಿಸಿದ ನೊವಾಕ್ ಜೊಕೊವಿಕ್

2008 ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ನೊವಾಕ್ ಜೊಕೊವಿಕ್ ಅವರ ಮೊದಲ ಗ್ರ್ಯಾಂಡ್ ಸ್ಲಾಮ್ ವಿಜಯ ಹದಿನೈದು ವರ್ಷಗಳ ಬಳಿಕವೂ ಹತ್ತಾರು ಆಟಗಾರರ ಸವಾಲುಗಳ ಮಧ್ಯೆಯೂ ಈ ಆಟದಲ್ಲಿ ತಮ್ಮ ಹಿಡಿತವನ್ನು ಸಡಿಲಗೊಳಿಸುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.

ಡೇನಿಯಲ್ ಮೆಡ್ವೆಡೆವ್ ಅವರನ್ನು ಮಣಿಸಿದ 36 ವರ್ಷದ ನೊವಾಕ್ ಯುಎಸ್ ಓಪನ್ ನಲ್ಲಿ ತನ್ನ 24ನೇ ಗ್ರ್ಯಾಂಡ್ ಸ್ಲಾಮ್ ಗೆದ್ದು ಇತಿಹಾಸ ರಚಿಸಿದ್ದಾರೆ. ನೋವಾಕ್ ಯುವ ಪೀಳಿಗೆಯ ಎದುರಾಳಿಗಳೊಂದಿಗೆ ದೈಹಿಕವಾಗಿ ಸೆಣಸಾಡಿದ್ದಾರೆ ಮಾತ್ರವಲ್ಲದೆ ಯುದ್ಧತಂತ್ರದಿಂದ ಅವರನ್ನು ಸಂಪೂರ್ಣವಾಗಿ ಸೋಲಿಸಿದ್ದಾರೆ. ಅವರು ಮೆಡ್ವೆಡೆವ್ ಅವರನ್ನು 6-3, 7-6 (5), 6-3 ರಿಂದ ಸೋಲಿಸಿ 24 ನೇ ಪುರುಷರ ಸಿಂಗಲ್ಸ್ ಮೇಜರ್ ಚಾಂಪಿಯನ್‌ಶಿಪ್ ಮತ್ತು ನಾಲ್ಕನೇ ಯುಎಸ್ ಓಪನ್ ಪ್ರಶಸ್ತಿ ಬಾಚಿಕೊಂಡಿದ್ದಾರೆ.

ಅವರು US ಓಪನ್ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದ ಓಪನ್ ಯುಗದ ಅತ್ಯಂತ ಹಿರಿಯ ವ್ಯಕ್ತಿ ಮತ್ತು ಒಂದು ವರ್ಷದ ನಾಲ್ಕು ಪ್ರತ್ಯೇಕ ಸಂದರ್ಭಗಳಲ್ಲಿ ನಾಲ್ಕು ಮೇಜರ್‌ಗಳಲ್ಲಿ ಮೂರನ್ನು ಗೆದ್ದ ಮೊದಲ ವ್ಯಕ್ತಿಯಾಗಿದ್ದಾರೆ. ಸೋಮವಾರ ಅವರು ಶ್ರೇಯಾಂಕದಲ್ಲಿ ವಿಶ್ವ ನಂ.1 ಸ್ಥಾನಕ್ಕೆ ಮರಳಲಿದ್ದಾರೆ.