ಶುಕ್ರವಾರ ತಡರಾತ್ರಿ ಮೊರಾಕೊದ ಅಟ್ಲಾಸ್ ಪರ್ವತ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದ ನಂತರ 2,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು ಹಲವಾರು ಕಟ್ಟಡಗಳು ಧರಾಶಾಯಿಯಾಗಿದ್ದು ಜನರು ತಮ್ಮ ಮನೆಗಳಿಂದ ಪಲಾಯನಗೈದಿದ್ದಾರೆ. ಸುಮಾರು 2,000 ಜನರು ಗಾಯಗೊಂಡಿದ್ದಾರೆ. ಮರಕೆಚ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಮೊರಾಕೊಗೆ ಸಾಧ್ಯವಾದ ಎಲ್ಲಾ ನೆರವು ನೀಡುವ ಭರವಸೆ ನೀಡಿದ್ದಾರೆ.
ನಗರದ ಅತ್ಯಂತ ಪ್ರಸಿದ್ಧ ಹೆಗ್ಗುರುತುಗಳಲ್ಲಿ ಒಂದಾದ ಮರಕೆಚ್‌ನಲ್ಲಿರುವ 12 ನೇ ಶತಮಾನದ ಕೌಟೌಬಿಯಾ ಮಸೀದಿಯು ಹಾನಿಗೊಳಗಾಗಿದೆ ಎಂದು ಮೊರಕನ್ ಮಾಧ್ಯಮವು ವರದಿ ಮಾಡಿದೆ. ಮಸೀದಿಯ 69-ಮೀಟರ್ (226-ಅಡಿ) ಗೋಪುರವನ್ನು “ಮಾರಕೆಚ್ ಛಾವಣಿ” ಎಂದು ಕರೆಯಲಾಗುತ್ತದೆ. ಹಾನಿಯ ಅಂದಾಜು ಸ್ಪಷ್ಟವಾಗಿಲ್ಲ ಎಂದು ಮಾಧ್ಯಮ ತಿಳಿಸಿದೆ.
ಮನೆ ಮಠ ಮತ್ತು ತಮ್ಮವರನ್ನು ಕಳೆದುಕೊಂಡಿರುವವರ ಆಕ್ರಂದನ ಮುಗಿಲು ಮುಟ್ಟಿದೆ. ರಕ್ಷಣಾ ಕಾರ್ಯಗಳು ಸಾಗಿವೆ.