ಕಾಪು ಸಮೀಪದ ಕಳತ್ತೂರು ಚಂದ್ರನಗರದಲ್ಲಿರುವ ಬಟರ್ ಫ್ಲೈ ಗೆಸ್ಟ್ ಹೌಸ್‌ಗೆ ಬೆಂಗಳೂರಿನ ಕನ್ನಡ ಚಿತ್ರರಂಗದ ತಂಡದವರು ಭೇಟಿ ನೀಡಿ ಶುಭಹಾರೈಸಿದರು.
ಕನ್ನಡ ಚಿತ್ರದ ಚಿತ್ರೀಕರಣಕ್ಕೆ ಬಂದವರು ಕಳತ್ತೂರಿನ ಚಂದ್ರನಗರದ ಬಟರ್ ಫ್ಲೈ ಗೆಸ್ಟ್ ಹೌಸ್‌ಗೆ ಭೇಟಿ ನೀಡಿದರು.
ಈ ಚಿತ್ರ ತಂಡದಲ್ಲಿ ಚಿತ್ರದ ನಾಯಕ ಶ್ರೀನಗರ ಕಿಟ್ಟಿ, ಕಥಾ ನಾಯಕಿ ಮೇಘನಾ ರಾಜ್, ಗುರು ಪ್ರಸಾದ್ ಹೆಗ್ಡೆ ಬೆಂಗಳೂರು, ಅರುಣ್ ಸಾಗರ್ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜನಸಂಪರ್ಕ್ ಜನಸೇವಾ ವೇದಿಕೆ ಅಧ್ಯಕ್ಷ ದಿವಾಕರ.ಬಿ.ಶೆಟ್ಟಿ ಹಾಗೂ ಬಟರ್ ಫ್ಲೈ ಗೆಸ್ಟ್ ಹೌಸ್ ಆಡಳಿತ ನಿರ್ದೇಶಕ ಮೊಹಮ್ಮದ್ ಫಾರೂಕ್ ಚಂದ್ರನಗರ ಸ್ವಾಗತಿಸಿ ತಂಡದ ಸದಸ್ಯರನ್ನು ಅಭಿನಂದಿಸಿದರು.