ಉಡುಪಿ: ಮುಂಬೈಯಿಂದ ರಾತ್ರಿ ವೇಳೆ ಬಂದ ವ್ಯಕ್ತಿಯೊಬ್ಬರು ಮನೆಯ ಹೊರಗಡೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಅಂಬಾಗಿಲು ಪೆರಂಪಳ್ಳಿಯ ಕಕ್ಕಿಂಜೆ ದೇವಿನಗರ ಎಂಬಲ್ಲಿ ನಡೆದಿದೆ.
ಮೃತರನ್ನು ದೇವಿನಗರದ ಸುಕೇಶ್ ಶೆಟ್ಟಿ(51) ಎಂದು ಗುರುತಿಸಲಾಗಿದೆ.
ಮುಂಬೈಯಲ್ಲಿ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ ಇವರು, ರಾತ್ರಿ ಹೊತ್ತಿನಲ್ಲಿ ಮುಂಬೈಯಿಂದ ಆಗಮಿಸಿದ್ದು ಮನೆಯ ಹೊರಗಡೆ ಇರುವ ಬಟ್ಟೆ ಒಗೆಯುವ ಸ್ಥಳದಲ್ಲಿ ಕಬ್ಬಿಣದ ಪೈಪಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಸಮಾಜ ಸೇವಕ ನಿತ್ಯಾನಂದ ಒಳಕಾಡು ಶವವನ್ನು ಸಾಗಿಸಲು ಸಹಕರಿಸಿದ್ದಾರೆ. ಸ್ಥಳಕ್ಕೆ ಮಣಿಪಾಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.















