ಉಡುಪಿ: ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉಡುಪಿ, ಲಯನ್ಸ್ ಜಿಲ್ಲೆ 317 ಸಿ ಮತ್ತು ಲಿಯೋ ಕ್ಲಬ್ 317 ಸಿ, ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಉಡುಪಿ ಇಂದ್ರಾಳಿ, ಆಶಾ ನಿಲಯ ವಿಶೇಷ ಮಕ್ಕಳ ವಸತಿ ಶಾಲೆ ಮತ್ತು ತರಬೇತಿ ಕೇಂದ್ರ, ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರರ ಸಂಘ ಉಡುಪಿ ಜಿಲ್ಲೆಇದರ ಸಹಭಾಗಿತ್ವದಲ್ಲಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಮಂಗಳವಾರದಂದು ಆಶಾನಿಲಯದಲ್ಲಿ ಆಚರಿಸಲಾಯಿತು. ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ದೀಪ ಬೆಳಗಿಸಿ ಚಾಲನೆ ನೀಡಿ ವಿಶೇಷ ಮಕ್ಕಳ ಸೇವೆ ನೀಡುತ್ತಿರುವ ಶಿಕ್ಷಕಿಯರನ್ನು ಗೌರವಿಸುವ ಕಾರ್ಯ ಶ್ರೇಷ್ಠವಾಗಿದೆ. ಸರಕಾರ ಮಾಡಬೇಕಾದ ಕೆಲಸವನ್ನು ಸಂಘ ಸಂಸ್ಥೆ ಮಾಡಿರುವುದು ಹೆಮ್ಮೆಯ ಸಂಗತಿ ಮುಂದಿನ ದಿನಗಳಲ್ಲಿ ಈ ಕಾರ್ಯ ಸರಕಾರದ ವತಿಯಿಂದ ನಡೆಸುವ ಬಗ್ಗೆ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಪ್ರಥಮ ಬಾರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳನ್ನು ಗೌರವಿಸಲಾಯಿತು. ವಿಶೇಷ ಸೇವೆ ನೀಡುತ್ತಿರುವ ಶಿಕ್ಷಕರನ್ನು ಗೌರವಿಸಲಾಯಿತು. ಕರ್ನಾಟಕ ಸದರ್ನ್ ಡಯಾಸಿಸ್ ಧರ್ಮಾಧ್ಯಕ್ಷ ರೈಟ್ ರೆ. ಹೇಮಚಂದ್ರ ಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ವಿಶೇಷ ಮಕ್ಕಳ ಸೇವೆ ದೇವರ ಸೇವೆಗೆ ಸಮನಾದದ್ದು. ಮಕ್ಕಳ ಪಾಲನೆಯಲ್ಲಿ ಸೇವೆ ನೀಡಿದ ಶಿಕ್ಷಕಿಯರನ್ನು ಗುರುತಿಸಿ ಗೌರವ ನೀಡುತ್ತಿರುವ ಸಂಘ ಸಂಸ್ಥೆಯನ್ನು ಅಭಿನಂದಿಸಿದರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಜಯಕರ್ ಶೆಟ್ಟಿ ಇಂದ್ರಾಳಿ , ಲಯನ್ಸ್ ಜಿಲ್ಲಾ ಗೌವರ್ನರ್ ನೇರಿ ಕರ್ನೆಲಿಯೋ, ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ರಾಜೇಶ ಶೇರಿಗಾರ್ , ಕರ್ನಾಟಕ ಸದರ್ನ್ ಡಯಾಸಿಸ್ ಉಪಾಧ್ಯಕ್ಷರಾದ ವಿಕ್ಟರ್ , ವಿಲಿಯಂ ಕೇರಿ, ಸಿ ಎಸ್ ಐ ಜುಬಿಲಿ ಸಭಾಪಾಲಕಕಿಶೋರ್ , ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರರ ಸಂಘದ ರಾಜ್ಯಾಧ್ಯಕ್ಷ ಡಾ. ಕಾಂತಿ ಹರೀಶ್ , , ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರರ ಸಂಘದ ಗೌರವಾಧ್ಯಕ್ಷೆ ಆಗ್ನೆಸ್ ಕುಂದರ್ , ಅಧ್ಯಕ್ಷ ರವೀಂದ್ರ, ಕಾರ್ಯದರ್ಶಿ ಶಶಿಕಲಾ, ಲಿಯೋ ಆದಿತ್ಯ ಶೇಟ್ , ಲಯನ್ಸ್ ರಂಜಿತ್ ಶೇಟ್ , ಲಯನ್ಸ್ ಸಾಧನಾ ಕಿಣಿ, ಉಡುಪಿ ಜಿಲ್ಲೆಯ 14 ವಿವಿಧ ಭಾಗದ ಶಾಲೆಯ ನೂರಾರು ಶಿಕ್ಷಿಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮನೋರಂಜನಾ ಕಾರ್ಯಕ್ರಮ ಆಟೋಟ ಸ್ಫರ್ಧೆ ನಡೆಸಿ ಬಹುಮಾನ ವಿತರಣೆ ಮಾಡಲಾಯಿತು.