ಉಡುಪಿ: ಜಿಲ್ಲೆಯ ಕೊಡವೂರು ವಾರ್ಡಿನ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ನೀಡಬೇಕು ಎನ್ನುವ ನಿಟ್ಟಿನಲ್ಲಿ ವಿಜಯ್ ಕೊಡವೂರು ಅವರ ಯೋಚನೆ ಹಾಗೂ ಯೋಜನೆಯ ಮಾದರಿಯ ಕಾರ್ಯವು ಕೊಡವೂರು ವಾರ್ಡಿನಲ್ಲಿ ನಡೆಯುತ್ತಿದ್ದು ಈ ಮೂಲಕ ನರೇಂದ್ರ ಮೋದಿಯವರ ಕಲ್ಪನೆಯನ್ನು ಪ್ರತಿಯೊಂದು ಮನೆಗೂ ತಲುಪಿಸಿರುವುದು ಮಾದರಿ ಕಾರ್ಯ. ಈ ಸೇವಾ ಕಾರ್ಯವನ್ನು ಗಮನಿಸಿ ಅಯ್ಯಪ್ಪ ಸೇವಾ ಸಮಿತಿಯ ರಾಜ್ಯ ಸಮ್ಮೇಳನದಲ್ಲಿ ನಗರಸಭಾ ಸದಸ್ಯ ವಿಜಯ್ ಕೊಡವೂರು ಅವರನ್ನು ಗುರುತಿಸಿ ಗೌರವಿಸುವ ಕಾರ್ಯ ನಡೆಯಿತು.
ಉಡುಪಿ ಜಿಲ್ಲಾ ಅಯ್ಯಪ್ಪ ಸೇವಾ ಸಮಿತಿಯ ಉಪಾಧ್ಯಕ್ಷ ವಿಜಯ್ ಕೊಡವೂರು ಮಾತನಾಡಿ, ಕೊಡವೂರು ವಾರ್ಡಿನಲ್ಲಿ ಎಲ್ಲಾ ಕಾರ್ಯಕರ್ತರ ಮತ್ತು ನಾಗರಿಕರ ಶ್ರಮದಲ್ಲಿ ಸೇವಾ ಕಾರ್ಯ ನಡೆಯುತ್ತಿದ್ದು, ಇದನ್ನು ಗುರುತಿಸುವ ಕಾರ್ಯ ಅಯ್ಯಪ್ಪ ಸೇವಾ ಸಮಿತಿಯ ಹಿರಿಯರ ಮೂಲಕ ಆಗಿದ್ದು ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವಾ ಕಾರ್ಯ ಮಾಡೋಣ ಎಂದರು.
ಈ ಸಂಧರ್ಭದಲ್ಲಿ ಅಯ್ಯಪ್ಪ ಸೇವಾ ಸಮಿತಿಯ ರಾಜ್ಯಾಧ್ಯಕ್ಷ ಜಯರಾಮ್ ಜಿ, ಉಡುಪಿ ಜಿಲ್ಲಾಧ್ಯಕ್ಷರಾಧಾಕೃಷ್ಣ ಮೆಂಡನ್, ರಂಜಿತ್ , ಗೋಪಾಲ್ ಗುರು ಸ್ವಾಮಿ ಕಾಪು, ಸುಂದರ್, ಗುರು ಸ್ವಾಮಿ, ಗಣೇಶ್ ಕೋಟ, ಸಂಘಟನಾ ಕಾರ್ಯದರ್ಶಿ ರಂಜಿತ್ ಹಾವಂಜೆ ಮತ್ತಿತರರು ಹಾಜರಿದ್ದರು.