ಖುಷಿ ನಟ ವಿಜಯ್​ ದೇವರಕೊಂಡ ವಿಶಾಖಪಟ್ಟಣಂನ ಸಿಂಹಾಚಲಂ ದೇವಸ್ಥಾನಕ್ಕೆ ಭೇಟಿ

ದಕ್ಷಿಣ ಚಿತ್ರರಂಗದ ಬಹುಬೇಡಿಕೆ ನಟರಾದ ಸಮಂತಾ ರುತ್​ ಪ್ರಭು ಮತ್ತು ವಿಜಯ್​ ದೇವರಕೊಂಡ ಜೋಡಿಯ ‘ಖುಷಿ’ ಸಿನಿಮಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ.ಖುಷಿ ಸಕ್ಸಸ್ ಸಂಭ್ರಮದಲ್ಲಿರುವ ನಟ ವಿಜಯ್​ ದೇವರಕೊಂಡ ಸಿಂಹಾಚಲಂನ ಶ್ರೀ ವರಾಹ ಲಕ್ಷ್ಮಿ ನರಸಿಂಹ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ‘ಖುಷಿ’ ಗೆದ್ದ ಖುಷಿಯಲ್ಲಿ ದೇವಸ್ಥಾನಗಳ ಭೇಟಿ ಮುಂದುವರಿಸಿರುವ ಅರ್ಜುನ್​ ರೆಡ್ಡಿ ಸ್ಟಾರ್​ ವಿಜಯ್​ ದೇವರಕೊಂಡ ಇಂದು ವಿಶಾಖಪಟ್ಟಣಂನ ಸಿಂಹಾಚಲಂ ದೇವಸ್ಥಾನದಲ್ಲಿ ಕಾಣಿಸಿಕೊಂಡರು.

‘ಖುಷಿ’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಯೋಗ್ಯ ಅಂಕಿ ಅಂಶ ಹೊಂದಿದೆ. ಈ ಹಿನ್ನೆಲೆ ನಟ ಸೇರಿದಂತೆ ಹಲವರು ಪ್ರಸಿದ್ಧ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದಾರೆ. ಇಂದು ಸಿಂಹಾಚಲಂನ ಶ್ರೀ ವರಾಹ ಲಕ್ಷ್ಮಿ ನರಸಿಂಹ ದೇವಾಲಯಕ್ಕೆ ಚಿತ್ರತಂಡ ಭೇಟಿ ಕೊಟ್ಟು ಪೂಜೆ, ಪ್ರಾರ್ಥನೆ ಸಲ್ಲಿಸಿದೆ.ರಿಲೀಸ್​ಗೂ ಮುನ್ನ ಸಖತ್​ ಸದ್ದು ಮಾಡಿದ್ದ ‘ಖುಷಿ’ ಸಿನಿಮಾ ಸೆಪ್ಟೆಂಬರ್​ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಸಿನಿಮಾಗೆ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಖುಷಿ ಯಶಸ್ಸಿನಲ್ಲಿ ಸಮಂತಾ ರುತ್​ ಪ್ರಭು ಮತ್ತು ವಿಜಯ್​ ದೇವರಕೊಂಡ ತೇಲುತ್ತಿದ್ದಾರೆ. ನಿನ್ನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಖುಷಿ ಸಕ್ಸಸ್​ ಸೆಲೆಬ್ರೇಶನ್​ ಹಮ್ಮಿಕೊಳ್ಳಲಾಗಿತ್ತು. ನಾಯಕ ನಟ ವಿಜಯ್​ ದೇವರಕೊಂಡ ಸೇರಿದಂತೆ ಚಿತ್ರತಂಡ ಈ ಅದ್ಧೂರಿ ಈವೆಂಟ್​ನಲ್ಲಿ ಭಾಗಿಯಾಗಿತ್ತು. ಇಂದು ವಿಶಾಖಪಟ್ಟಣಂನ ಸಿಂಹಾಚಲಂ ದೇವಸ್ಥಾನಕ್ಕೆ ವಿಜಯ್​ ದೇವರಕೊಂಡ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ.