ಶ್ರೀಹರಿಕೋಟಾ: ISRO ಶನಿವಾರ ಶ್ರೀಹರಿಕೋಟಾದಿಂದ ಭಾರತದ ಮೊದಲ ಸೌರ ಮಿಷನ್ ಆದಿತ್ಯ-ಎಲ್ 1 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು. ಆದಿತ್ಯ-ಎಲ್ 1 ಸೂರ್ಯನನ್ನು ಅಧ್ಯಯನ ಮಾಡುವ ಮೊದಲ ಬಾಹ್ಯಾಕಾಶ ಆಧಾರಿತ ವೀಕ್ಷಣಾಲಯವಾಗಿದೆ ಮತ್ತು ಇಸ್ರೋದ ವಿಶ್ವಾಸಾರ್ಹ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ಬಳಸಿ ಬೆಳಿಗ್ಗೆ 11.50 ಕ್ಕೆ ರಾಕೆಟ್ ಅನ್ನು ಹಾರಿಸಲಾಯಿತು.
ಬಾಹ್ಯಾಕಾಶ ನೌಕೆಯು ಭೂಮಿಯಿಂದ 125 ದಿನಗಳಲ್ಲಿ ಸುಮಾರು 1.5 ಮಿಲಿಯನ್ ಕಿಮೀ ಪ್ರಯಾಣಿಸಿದ ನಂತರ, ಸೂರ್ಯನಿಗೆ ಹತ್ತಿರವಿರುವ ಲಗ್ರಾಂಜಿಯನ್ ಪಾಯಿಂಟ್ L1 ಸುತ್ತ ಹಾಲೋ ಕಕ್ಷೆಯಲ್ಲಿ ಇರಿಸಲಾಗುವುದು.
ಪಿಎಸ್‌ಎಲ್‌ವಿ-ಎಕ್ಸ್‌ಎಲ್ರಾಕೆಟ್ 1,480.7 ಕೆಜಿ ತೂಕದ ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯನ್ನು ಸೌರ ಚಟುವಟಿಕೆಗಳನ್ನು ಅಧ್ಯಯನ ಮಾಡಲು ಒಯ್ಯಿತು. 44.4 ಮೀಟರ್ ಎತ್ತರದ ಪಿಎಸ್‌ಎಲ್‌ವಿ-ಸಿ57 ರಾಕೆಟ್ 321 ಟನ್ ತೂಕದ ಆದಿತ್ಯ-ಎಲ್1 ಅನ್ನು ಹೊತ್ತೊಯ್ದಿದ್ದು, ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ (ಎಸ್‌ಡಿಎಸ್‌ಸಿ) ಎರಡನೇ ಉಡಾವಣಾ ಕೇಂದ್ರದಿಂದ ಬೆಳಗ್ಗೆ 11.50ಕ್ಕೆ ಆಕಾಶಕ್ಕೆ ನೆಗೆದಿದೆ.
ಮಿಷನ್‌ನ ಪ್ರಮುಖ ಉದ್ದೇಶಗಳು ಕರೋನಲ್ ಹೀಟಿಂಗ್ ಮತ್ತು ಸೌರ ಮಾರುತದ ವೇಗವರ್ಧನೆ, ಕರೋನಲ್ ಮಾಸ್ ಎಜೆಕ್ಷನ್‌ನ ಪ್ರಾರಂಭ ಮತ್ತು ಭೂಮಿಯ ಸಮೀಪವಿರುವ ಬಾಹ್ಯಾಕಾಶ ಹವಾಮಾನ ಮತ್ತು ಸೌರ ಮಾರುತ ವಿತರಣೆಯನ್ನು ಅರ್ಥಮಾಡಿಕೊಳ್ಳುವುದು ಆಗಿದೆ.












