ಉಡುಪಿ: ಮೀನುಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮೋಟಾರೀಕೃತ ಮೀನುಗಾರಿಕೆ ದೋಣಿಗಳಿಗೆ 2 ತಿಂಗಳ ನಿಷೇಧಿತ ಅವಧಿಯನ್ನು ಹೊರತುಪಡಿಸಿ, ವಾರ್ಷಿಕ 10 ತಿಂಗಳ ಅವಧಿಗೆ ಮಾಸಿಕ ಪ್ರತಿ ದೋಣಿಗೆ 300 ಲೀ. ನಂತೆ ಸೀಮೆಎಣ್ಣೆ ವಿತರಿಸಲು ಸರ್ಕಾರವು ಆದೇಶಿಸಿರುವ ಹಿನ್ನೆಲೆ, ಮೋಟಾರೀಕೃತ ಮೀನುಗಾರಿಕೆ ದೋಣಿಗಳಿಗೆ ಸೀಮೆಎಣ್ಣೆ ಪಡೆಯಲು ಪರ್ಮಿಟ್ಗಾಗಿ ದೋಣಿ ಮಾಲಕರು ಅರ್ಜಿ ಸಲ್ಲಿಸುವ ಮೊದಲು ಇಲಾಖೆಯಿಂದ ದೋಣಿಗಳನ್ನು ಭೌತಿಕ ಪರಿಶೀಲನೆ ಮಾಡಿ ನಂತರ ಪರವಾನಿಗೆ ಹಾಗೂ
ಸೀಮೆಎಣ್ಣೆ ರಹದಾರಿಯನ್ನು ದೋಣಿ ಮಾಲಕರಿಗೆ ನೀಡಲಾಗುವುದು.
ಆ ಪ್ರಯುಕ್ತ ಸೆಪ್ಟಂಬರ್ 4 ರಂದು ಬೈಂದೂರು ತಾಲೂಕಿನ ಅಳ್ವೆಗದ್ದೆಯ ಮೀನುಗಾರಿಕೆ ಜೆಟ್ಟಿ, ಕಳಿಹಿತ್ಲುವಿನ ಮೀನುಗಾರಿಕೆ ಹರಾಜು ಪ್ರಾಂಗಣ, ಮಡಿಕಲ್ನ ಮಹೇಶ್ವರ ದೇವಸ್ಥಾನ, ಪಡುವರಿ/ತಾರಾಪತಿಯ ಶ್ರೀ ರಾಮ ಮಂದಿರ, ಕೊಡೇರಿ/ಕಿರಿಮಂಜೇಶ್ವರದ ಕೊಡೇರಿ ಬಂದರು, ಮರವಂತೆ ಬಂದರು, ಕಂಚುಕೋಡು ಮಡಿ, ಗಂಗೊಳ್ಳಿ ಲೈಟ್ಹೌಸ್, ಗಂಗೊಳ್ಳಿ ಬಂದರು, ಕುಂದಾಪುರ, ಕೋಟೇಶ್ವರ ಮತ್ತು ತೆಕ್ಕಟ್ಟೆಯ ಕೋಡಿ ಕಿನಾರೆಯಲ್ಲಿ ಹಾಗೂ ಸೆಪ್ಟಂಬರ್ 5 ರಂದು ರಂದು ಉಡುಪಿ ತಾಲೂಕಿನ ಹೆಜಮಾಡಿ/ಪಡುಬಿದ್ರಿಯ ಪಲಿಮಾರು ಮೀನುಗಾರರ ಸಭಾ ಭವನದ ಬಳಿ, ಉಚ್ಚಿಲದ ಸುಬಾಷ್ ರೋಡ್ ಬೀಚ್ ಹತ್ತಿರ, ಮಲ್ಪೆ-ಪಡುಕೆರೆಯ ಬೋಟ್ ಕಚ್ಚೇರಿ ಹತ್ತಿರ, ಮಲ್ಪೆ-ಕೊಳ ಇಲ್ಲಿನ ಹನುಮಾನ್ ವಿಠೋಭ ಮಂದಿರ ಮುಂಭಾಗದಲ್ಲಿ, ಸಾಸ್ತಾನ-ಕೋಡಿಕನ್ಯಾನ (ಸಾಸ್ತಾನ ಕೋಡಿ ಜೆಟ್ಟಿ), ಕಾಪು ಲೈಟ್ಹೌಸ್, ಎರ್ಮಾಳ್ (ಉಚ್ಚಿಲ ಅಥವಾ ಕಾಪು) ಹಾಗೂ ಹಂಗಾರಕಟ್ಟೆ/ಬೆಂಗ್ರೆ (ಕೋಡಿಬೆಂಗ್ರೆ) ಸ್ಥಳಗಳಲ್ಲಿ ದೋಣಿಗಳ ಭೌತಿಕ ಪರಿಶೀಲನೆ ನಡೆಸಲಿದ್ದು, ದೋಣಿ ಮಾಲಿಕರು ಖುದ್ದಾಗಿ ಮೀನುಗಾರಿಕಾ ದೋಣಿಗಳನ್ನು ತಪಾಸಣೆಗೆ ಹಾಜರುಪಡಿಸಬಹುದಾಗಿದೆ ಎಂದು
ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.