ಉಡುಪಿ ವಕೀಲರ ಸಂಘದ ಚುನಾವಣೆಗೆ ಶಿರಿಯಾರ ಪ್ರಭಾಕರ್ ನಾಯಕ್ ನಾಮಪತ್ರ ಸಲ್ಲಿಕೆ

ಉಡುಪಿ: ಬ್ರಹ್ಮಾವರ ತಾಲೂಕಿನ ಕೋಟ ಹೋಬಳಿ ವ್ಯಾಪ್ತಿಯ ಶಿರಿಯಾರ ಗ್ರಾ.ಪಂ ನಿವಾಸಿ ಉಡುಪಿ ವಕೀಲರ ಸಂಘದ ಸದಸ್ಯ ಶಿರಿಯಾರ ಪ್ರಭಾಕರ್ ನಾಯಕ್ ಈ ಬಾರಿಯ ಉಡುಪಿ ವಕೀಲರ ಸಂಘದ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ.

ಉಡುಪಿ, ಕುಂದಾಪುರ, ಕಾರ್ಕಳ ಮುಂತಾದ ಕೋರ್ಟ್ ಗಳಲ್ಲಿ ಕಳೆದ ೨೩ ವರ್ಷಗಳಿಂದ ವಕೀಲರಾಗಿ ಸೇವೆ ಸಲ್ಲಿಸಿರುವ ಇವರು, ಅರೆ ಕಾಲಿಕ ಉಪನ್ಯಾಸಕರಾಗಿ, ಶಿರಿಯಾರ ಗ್ರಾ.ಪಂ ಉಪಾಧ್ಯಕ್ಷರಾಗಿ ಹಾಗೂ ಸಾಮಾಜಿಕ ನ್ಯಾಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ೩೦ ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಾಮಾಣಿಕತೆ, ದಕ್ಷತೆ ಮತ್ತು ನಿಸ್ವಾರ್ಥವಾಗಿ ಸರ್ವರಿಗೂ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಶ್ರಮ ವಹಿಸಿದ್ದಾರೆ.