ಉಡುಪಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ವತಿಯಿಂದ ರಕ್ಷಾ ಬಂಧನ ಪ್ರಯುಕ್ತ ಉಡುಪಿ ನಗರದಾದ್ಯಂತ ರಾಷ್ಟ್ರ ರಕ್ಷೆಯ ಸಂಕಲ್ಪದೊಂದಿಗೆ ಸಾಮೂಹಿಕ ರಕ್ಷಾ ಬಂಧನ ಕಾರ್ಯಕ್ರಮವನ್ನು ನಗರದ ವಿವಿಧ ಸರ್ಕಾರಿ ಕಚೇರಿಗಳಲ್ಲಿ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ, ಮಣಿಪಾಲ ಪೊಲೀಸ್ ಠಾಣೆ, ಅಂಚೆ ಕಚೇರಿ, ಉಡುಪಿ ನಗರ ಪೊಲೀಸ್ ಠಾಣೆ, ಜಿಲ್ಲಾ ನ್ಯಾಯಾಲಯ, ಉಪನೊಂದವನಾಧಿಕಾರಿ ಕಚೇರಿ, ಮಿನಿ ವಿಧಾನಸೌಧ ಉಡುಪಿ (ತಾಲೂಕು ಕಚೇರಿ), ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಮಾನ್ಯ ಶಾಸಕರು ಸೇರಿದಂತೆ ವಿವಿಧ ಸರ್ಕಾರಿ ಅಧಿಕಾರಿಗಳಿಗೆ ರಾಷ್ಟ್ರ ಮೊದಲು ಎನ್ನುವ ಸಂಕಲ್ಪದೊಂದಿಗೆ ರಕ್ಷೆಯನ್ನು ಕಟ್ಟಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕರಾದ ಗಣೇಶ್ ಪೂಜಾರಿ, ತಾಲೂಕು ಸಂಚಾಲಕರಾದ ಅಜಿತ್ ಜೋಗಿ, ನಗರ ಕಾರ್ಯದರ್ಶಿ ಶ್ರೀವತ್ಸ ಮತ್ತು ಸಹ ಕಾರ್ಯದರ್ಶಿ ಕಾರ್ತಿಕ್, ಭಾವನ ಮತ್ತು ಪ್ರಮುಖರಾದ ಕೃತಿ, ಭೂಷಣ್, ಸ್ವಸ್ತಿಕ್, ಮನು ಶೆಟ್ಟಿ, ಶಿಶಿರ್ ಇವರೊಂದಿಗೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.