ಕೀವ್ : ಉಕ್ರೇನಿಯನ್ ಡ್ರೋನ್ಗಳು ರಷ್ಯಾದ ಭೂಪ್ರದೇಶಕ್ಕೆ ಬಂದು ಅಪ್ಪಳಿಸಿವೆ.ರಷ್ಯಾದ ಪ್ಸ್ಕೋವ್ ನಗರದ ವಿಮಾನ ನಿಲ್ದಾಣದ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆದಿದ್ದು, 4 ವಿಮಾನಗಳಿಗೆ ಹಾನಿಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ. ಆದರೆ ಈ ಬಗ್ಗೆ ಖಚಿತವಾಗಿಲ್ಲ.
ರಷ್ಯಾದ ಬೆಲ್ಗೊರೊಡ್ ಪ್ರದೇಶದ ಗಡಿಯಾಚೆಗೆ ಮತ್ತು ಮಾಸ್ಕೋ ಕಡೆಗೆ ಡ್ರೋನ್ಗಳ ಉಡಾವಣೆ ಮತ್ತು ಆಕ್ರಮಣಗಳು ಅತಿಯಾಗಿದೆ. ಈ ಡ್ರೋನ್ ದಾಳಿಯಿಂದಾಗಿ ನಾಲ್ಕು Il-76 ವಿಮಾನಗಳು ಹಾನಿಗೊಳಗಾಗಿವೆ. ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಎರಡು ವಿಮಾನಗಳು ಬೆಂಕಿಯಿಂದ ಸಿಡಿದಿವೆ ಎಂದು ಅಲ್ಲಿಯ ಮಾಧ್ಯಮಗಳು ವರದಿ ಮಾಡಿವೆ. ರಷ್ಯಾದ ಎಸ್ಟೋನಿಯಾ ಮತ್ತು ಲಾಟ್ವಿಯಾ ನಗರದ ಸಮೀಪವಿರುವ ವಿಮಾನ ನಿಲ್ದಾಣದಲ್ಲಿ ಡ್ರೋನ್ ದಾಳಿ ನಡೆದಿದ್ದು, ಪರಿಣಾಮ ನಾಲ್ಕು ವಿಮಾನಗಳು ಹಾನಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವರದಿಗಳ ಪ್ರಕಾರ ಯಾವುದೇ ಸಾವು – ನೋವು ಹಾಗೂ ಗಾಯಗಳಾಗಿಲ್ಲ ಎಂದು ತಿಳಿಸಿದ್ದಾರೆ.
ರಷ್ಯಾದ ಮಾಧ್ಯಮಗಳು ಪೋಸ್ಟ್ ಮಾಡಿದ ವಿಡಿಯೋಗಳಲ್ಲಿ ವಿಮಾನ ನಿಲ್ದಾಣದಲ್ಲಿ ದಟ್ಟವಾದ ಕಪ್ಪು ಹೊಗೆಯನ್ನು ಕಾಣಬಹುಹುದು. ಉಕ್ರೇನ್ ಗಡಿಯ ಉತ್ತರಕ್ಕೆ ಸುಮಾರು 700 ಕಿಲೋಮೀಟರ್ (400 ಮೈಲುಗಳು) ಮತ್ತು ಮಾಸ್ಕೋದ ಪಶ್ಚಿಮಕ್ಕೆ 700 ಕಿಲೋಮೀಟರ್ (400 ಮೈಲುಗಳು) ದೂರದಲ್ಲಿರುವ ಪ್ಸ್ಕೋವ್ ಪ್ರದೇಶದ ವಿಮಾನ ನಿಲ್ದಾಣದಲ್ಲಿ ರಾತ್ರಿ ದಾಳಿ ನಡೆದಿದ್ದು, ಹೆಚ್ಚು ಹಾನಿ ಉಂಟಾಗಿದೆ.
ಉಕ್ರೇನ್ ಪ್ರತಿದಾಳಿ ನಡೆಸುತ್ತಿರುವುದರಿಂದ ಇತ್ತೀಚೆಗೆ ರಷ್ಯಾದ ಮೇಲೆ ವೈಮಾನಿಕ ದಾಳಿಗಳು ಉಲ್ಬಣಗೊಂಡಿವೆ. ಪೂರ್ವ ಮತ್ತು ದಕ್ಷಿಣ ಉಕ್ರೇನ್ನಲ್ಲಿ ಮುಂಚೂಣಿಯಲ್ಲಿರುವ ರಷ್ಯಾದ ಮಿಲಿಟರಿ ಆಸ್ತಿಗಳನ್ನು ಕೀವ್ ಹೆಚ್ಚು ಗುರಿಪಡಿಸಿಕೊಂಡು ದಾಳಿ ನಡೆಸುತ್ತಿದೆ. ಕಪ್ಪು ಸಮುದ್ರದಲ್ಲಿ ರಷ್ಯಾದ ಹಡಗುಗಳ ವಿರುದ್ಧ ನೌಕಾ ಡ್ರೋನ್ಗಳನ್ನು ಬಳಸಿರುವುದಾಗಿ ಉಕ್ರೇನ್ ಹೇಳಿಕೊಂಡಿದೆ. ರಷ್ಯಾದಲ್ಲಿ ಆಳವಾದ ವಾಯುನೆಲೆಗಳಲ್ಲಿ ನಿಲುಗಡೆ ಮಾಡಲಾದ ಬಾಂಬರ್ ವಿಮಾನಗಳನ್ನು ಹೊಡೆದುರುಳಿಸಲು ಕೀವ್ ಕಳೆದ ವಾರ ಡ್ರೋನ್ಗಳನ್ನು ಬಳಸಿದೆ ಎಂದು ಉಕ್ರೇನಿಯನ್ ಮಾಧ್ಯಮಗಳು ಹೇಳಿವೆ. ( ಪಿಟಿಐ)
ಪ್ಸ್ಕೋವ್ ಗವರ್ನರ್ ಮಿಖಾಯಿಲ್ ವೆಡೆರ್ನಿಕೋವ್ ಅವರು ವಿಮಾನ ನಿಲ್ದಾಣಕ್ಕೆ ಆದ ಹಾನಿಯನ್ನು ಮನಗಂಡು ಅಲ್ಲಿಂದ ಹೊರಡುವ ಎಲ್ಲಾ ವಿಮಾನಗಳನ್ನು ಒಂದು ದಿನದ ಮಟ್ಟಿಗೆ ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ. ಸಾಮಾನ್ಯ ಕಾರ್ಯಾಚರಣೆಗಳು ಗುರುವಾರ ಪುನರಾರಂಭಗೊಳ್ಳುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಾಗೆಯೇ, ಡ್ರೋನ್ ದಾಳಿ ಹಿನ್ನೆಲೆ ಮೂರು ಪ್ರಮುಖ ಮಾಸ್ಕೋ ವಿಮಾನ ನಿಲ್ದಾಣಗಳಾದ ಶೆರೆಮೆಟಿಯೆವೊ, ವ್ನುಕೊವೊ ಮತ್ತು ಡೊಮೊಡೆಡೊವೊ ದಲ್ಲಿ ಸಹ ಒಳಬರುವ ಮತ್ತು ಹೊರಹೋಗುವ ವಿಮಾನಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿತ್ತು