ಬಿಂಡಿ(ಮಧ್ಯಪ್ರದೇಶ): ಪ್ರೀತಿ ಮತ್ತು ರಕ್ಷಣೆಯ ಬಂಧವಾಗಿರುವ ರಾಖಿ ಸಹೋದರ ಮತ್ತು ಸಹೋದರಿಯರ ನಡುವಿನ ಮುರಿಯಾಲಾಗದ ಸಂಬಂಧವನ್ನು ಮತ್ತಷ್ಟು ಗಟ್ಟಿ ಮಾಡುವುದು ಸುಳ್ಳಲ್ಲ.ಇಂತಹ ಹಬ್ಬವನ್ನು ಮತ್ತಷ್ಟು ಸ್ಮರಣಿಯವಾಗಿಸಲು ಭಾರತೀಯ ಜನತಾ ಪಕ್ಷದ ನಾಯಕ ಮತ್ತು ಸಾಮಾಜಿಕ ಕಾರ್ಯಕರ್ತ ಅಶೋಕ್ ಭಾರಧ್ವಾಜ್ ಮುಂದಾಗಿದ್ದಾರೆ. ಇದಕ್ಕಾಗಿ ಅವರು ವಿಶ್ವದ ಬೃಹತ್ ಗಾತ್ರದ ರಾಖಿ ತಯಾರಿಸಲು ಮುಂದಾಗಿದ್ದಾರೆ. ಈಗಾಗಲೇ ಭಾರಧ್ವಾಜ್ ಹೆಸರು ಗಿನ್ನೆಸ್ ಸೇರಿದಂತೆ ಅನೇಕ ದಾಖಲೆಗಳನ್ನು ಅಚ್ಚೊತ್ತಿದ್ದು, ಇದೀಗ ಒಎಂಜಿ ಬುಕ್ ಆಫ್ ರೆಕಾರ್ಡ್ನಲ್ಲಿ ಆಗಸ್ಟ್ 31ರ 2023ರಂದು ಸೇರಲಿದೆ. ಇದುವರೆಗೂ ಅತಿ ದೊಡ್ಡ ರಾಖಿಯನ್ನು ಯಾರು ತಯಾರಿಸಿಲ್ಲ. ಇದೀಗ ಬಿಜೆಪಿ ನಾಯಕರೊಬ್ಬರು ಈ ಸಾಹಸ ನಡೆಸಿದ್ದಾರೆ.
ಬಿಂಡಿ ಜಿಲ್ಲೆಯ ಮೆಹ್ಗೊನ್ ಗ್ರಾಮದ ಅಶೋಕ್ ಭಾರಧ್ವಾಜ್, ಒಂದು ದಿನ ಬಿಜೆಪಿ ಸಹ ಕಾರ್ಯಕರ್ತರ ಜೊತೆಗೆ ಮಧ್ಯ ಪ್ರದೇಶ ಮುಖ್ಯಮಂತ್ರಿ ಅವರು ಜಾರಿಗೆ ತಂದಿರುವ ಲಾಡ್ಲಿ ಬೆಹನ್ ಯೋಜನಾ ಕುರಿತು ಮಾತನಾಡುತ್ತಿದ್ದೆವು. ಈ ವೇಳೆ ನಾವು ರಾಜ್ಯ ಮಹಿಳೆಯರಿಂದ ಅಕ್ಕ-ತಂಗಿ ರೀತಿಯಲ್ಲಿಯೇ ಕೈಗೆ ರಾಖಿ ಕಟ್ಟಿಸಿಕೊಳ್ಳುವ ಕುರಿತು ಮಾತನಾಡಿದೆವು. ಬಳಿಕ ನಾವು ಹಾಗೇ ವಿಶ್ವದ ಬೃಹತ್ ಗಾತ್ರದ ರಾಖಿ ಬಗ್ಗೆ ಹುಡುಕಿದೆವು. ಆಗ ನಾವು ವಿಶ್ವದ ದೊಡ್ಡ ಗಾತ್ರದ ರಾಖಿ ತಯಾರಿಸಲು ಮುಂದಾದೆವು ಎಂದರು.
ರಕ್ಷಾ ಬಂಧನ್ ದಿನ ಐದು ಬುಕ್ ಆಫ್ ರೆಕಾರ್ಡ್ಗಳ ಜನರು ನಮ್ಮ ಮನೆಗೆ ಭೇಟಿ ನೀಡಲಿದ್ದು, ಈ ರಾಖಿಯನ್ನು ಬೃಹತ್ ರಾಖಿ ಎಂದು ಘೋಷಣೆ ಮಾಡಲಿದ್ದಾರೆ. ವೇದಿಕೆಯಲ್ಲಿ ಪ್ರದರ್ಶಿಸಲಿದ್ದಾರೆ. ಈ ಘೋಷಣೆ ಬಳಿಕ ಈ ರಾಖಿಯನ್ನು ಪ್ರದರ್ಶನಕ್ಕೆ ಇಡಲಾಗುವುದು. ಜನರು ಬಂದು ನೋಡಬಹುದಾಗಿದೆ. ರಕ್ಷಾ ಬಂಧನ್ನಿಂದ ಜನ್ಮಾಷ್ಠಮಿವರೆಗೆ ಪ್ರದರ್ಶನಕ್ಕೆ ಇಡಲಾಗುವುದು.
ರಾಖಿಯನ್ನು ಫೋಮ್, ಮರದ ಹಲಗೆಗಳು, ಬಟ್ಟೆ ಮತ್ತು ಇತರ ವಸ್ತುಗಗಳಿಂದ ಮಾಡಲಾಗಿದೆ. ರಾಖಿಯ ಹೊರಗಿನ ವೃತ್ತದ ವ್ಯಾಸವು 25 ಅಡಿ ಇದ್ದು ಮುಂದಿನ ವೃತ್ತದ ವ್ಯಾಸವು 15 ಅಡಿಗಳು ಮತ್ತು 10 ಅಡಿ ಅಷ್ಟಿದೆ. ಇದು ಕೇವಲ ನನಗೆ ಮಾತ್ರ ದೊಡ್ಡ ಸಾಧನೆಯಲ್ಲ, ಸಂಪೂರ್ಣ ಮಧ್ಯ ಪ್ರದೇಶದ ಸಾಧನೆ. ಕಾರಣ ಇದಕ್ಕಿಂತ ದೊಡ್ಡ ಸಾಧನೆ ಮತ್ತು ದಾಖಲೆಗಳನ್ನು ಮಾಡಿದರೂ ಮೊದಲ ಸಾಧನೆ ದಾಖಲಾಗಿರುತ್ತದೆ. ಇದು ನಮಗೆ ಹೆಮ್ಮೆ ತರುತ್ತದೆ ಎಂದಿದ್ದಾರೆ.
ಈ ಚರ್ಚೆಯ ಬಳಿಕ ನಾವು ವಿಶ್ವದ ಬೃಹತ್ ರಾಖಿ ಮಾಡಲು ರಾಜಸ್ಥಾನದ ಕಲಾವಿದರನ್ನು ಕೂಡ ಸಂಪರ್ಕಿಸಿದೆವು. ದೆಹಲಿಯ ಏಜೆನ್ಸಿಯೊಂದು ಇದರ ನಿರ್ಮಾಣಕ್ಕೆ ಒಪ್ಪಿತು. 10ಕ್ಕೂ ಹೆಚ್ಚು ಜನರು ಸೇರಿ ಈ ರಾಖಿ ನಿರ್ಮಾಣ ಮಾಡಲಾಗಿದೆ. ಇದೀಗ ಈ ರಾಖಿ ಆಗಸ್ಟ್ 31ರಂದು ಗಿನ್ನೆಸ್ ಮತ್ತು ಒಎಂಜಿ ಬುಕ್ ಆಫ್ ರೆಕಾರ್ಡ್, ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಲಿದೆ. ವಿಶ್ವದ ಬೃಹತ್ ರಾಖಿಯ ಪ್ರಮಾಣಪತ್ರವನ್ನು ಸಂಘಟನೆ ಹಸ್ತಾಂತರಿಸಲಿದೆ.