ಬೆಂಗಳೂರು: ಸೂರ್ಯನ ಅಧ್ಯಯನ ತುಂಬಾ ಕ್ಲಿಷ್ಟಕರ, ಈ ಹಿನ್ನಲೆ ನಿರ್ದಿಷ್ಟ ಸ್ಥಳದಲ್ಲಿ ಅಂದರೆ, ಭೂಮಿಯಿಂದ 15 ಲಕ್ಷ ದೂರುದಲ್ಲಿ ಈ ಉಪಗ್ರಹ ನಿಂತು ಸೂರ್ಯನ ಅಧ್ಯಯನ ನಡೆಸಲಿದೆ. ಇದೇ ಶನಿವಾರ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ಉಡಾವಣೆಗೆ ಸಜ್ಜಾಗಿದ್ದು, ಇದರ ಯಶಸ್ವಿ ಉಡ್ಡಯನಕ್ಕೆ ಸಿದ್ಧತೆ ಸರಾಗವಾಗಿ ನಡೆಸಲಾಗಿದೆ. ಇದಕ್ಕಾಗಿ ಪಿಎಸ್ಎಲ್ವಿ ರಾಕೆಟ್ ಜೋಡಣೆಯ ಕಡೆಯ ಹಂತದ ಪರಿಶೀಲನೆಯನ್ನು ತಂಡ ನಡೆಸಿದೆ ಎಂದು ರಕ್ಷಣಾ ಮತ್ತು ಬಾಹ್ಯಕಾಶ ತಜ್ಞ ಗಿರೀಶ್ ಲಿಂಗಣ್ಣ ತಿಳಿಸಿದ್ದಾರೆ.ಈ ಬಗ್ಗೆ ರಕ್ಷಣಾ ಮತ್ತು ಬಾಹ್ಯಕಾಶ ತಜ್ಞ ಗಿರೀಶ್ ಲಿಂಗಣ್ಣ ಸಂಪೂರ್ಣ ಮಾಹಿತಿ ನೀಡಿದ್ದಾರೆ.ಭಾರತದ ಚಂದ್ರಯಾನ 3 ಯಶಸ್ವಿಯಾಗಿರುವ ಬೆನ್ನಲ್ಲೇ ಇದೀಗ ಸೂರ್ಯನತ್ತ ದೃಷ್ಟಿ ನೆಟ್ಟಿರುವ ಇಸ್ರೋ, ಮೊದಲ ಬಾರಿ ಸೂರ್ಯನ ಅಧ್ಯಯನಕ್ಕೆ ಆದಿತ್ಯ-ಎಲ್1 ಯೋಜನೆ ರೂಪಿಸಿದೆ.
ಭೂಮಿ ಕಡೆ ಬಿರುಗಾಳಿ ಬರುವುದನ್ನು ಅರ್ಥೈಸಿಕೊಳ್ಳಲು, ಸೂರ್ಯನ ನಿರಂತರವಾಗಿ ವೀಕ್ಷಣೆ ಮಾಡಲಾಗಿದೆ. ಸೂರ್ಯನ ಮೇಲೆ ಪ್ರಾರಂಭವಾಗುವ ಮತ್ತು ಭೂಮಿಯ ಕಡೆಗೆ ಬರುವ ಪ್ರತಿಯೊಂದು ಚಂಡಮಾರುತವು ಎಲ್-1 ಎಂಬ ವಿಶೇಷ ಬಿಂದುವಿನ ಮೂಲಕ ಹೋಗುತ್ತದೆ. ಕಕ್ಷೆಯಲ್ಲಿ ಉಪಗ್ರಹವನ್ನು ಇರಿಸುವುದರಿಂದ ಎಲ್1 ಸೂರ್ಯನನ್ನು ಯಾವುದೇ ಅಡೆತಡೆ ಇಲ್ಲದೇ ನೋಡಲು ಸಹಾಯ ಮಾಡುತ್ತದೆ.ಆದಿತ್ಯ ಎಲ್1 ಸೂರ್ಯನ ಅಧ್ಯಯನ ಮಾಡಲು ಭೂಮಿಯಿಂದ ಸರಾಸರಿ 15 ಲಕ್ಷ ದೂರದಲ್ಲಿನ ಲ್ಯಾಂಗರೇಜ್ ಪಾಯಿಂಟ್ನ ವಿಶೇಷ ಸ್ಥಳದಲ್ಲಿ ಇರಿಸಲಾಗುವುದು. ಈ ಪಾಯಿಂಟ್ನಲ್ಲಿ ಸೂರ್ಯ ಮತ್ತು ಭೂಮಿಯ ಗುರುತ್ವಾಕರ್ಷಣೆಯನ್ನು ಸಮತೋಲನ ಮಾಡಬಹುದು. ವಸ್ತುಗಳು ತುಲನಾತ್ಮಕವಾಗಿ ಸ್ಥಿರವಾಗಿರಲು ಅನುವು ಮಾಡಿಕೊಡುತ್ತದೆ.
ಸೂರ್ಯನನ್ನು ಅರಿಯುವುದು ಕ್ಲಿಷ್ಟಕರ: ಭೂಮಿಯ ಕೇಂದ್ರದಿಂದ ಸೂರ್ಯ ಸುಮಾರು 15 ಕೋಟಿ ಕಿ.ಮೀ ದೂರದಲ್ಲಿದೆ. ಸೂರ್ಯನ ವಾತಾವರಣವೂ ಇಡೀ ಸೌರ ಮಂಡಲದ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲಿನ ಬದಲಾವಣೆಗಳು ಉಪಗ್ರಹವನ್ನು ಬೇರೆ ಕಡೆ ಚಲನೆ ಮಾಡುವಂತೆ ಮಾಡಬಹುದು. ಇದು ಎಲೆಕ್ಟ್ರಾನಿಕ್ ಉಪಕರಣವನ್ನು ಹಾನಿ ಮಾಡಬಹುದು. ಇದು ಭೂಮಿಯ ಮೇಲೆ ಪವರ್ ಸಮಸ್ಯೆಗೆ ಕಾರಣವಾಗಬಹುದು. ಹೀಗಾಗಿ ಸೂರ್ಯನ ಘಟನಾವಳಿಗಳನ್ನು ಅರಿಯುವುದು ಕಷ್ಟಸಾಧ್ಯ ಎಂದಿದ್ದಾರೆ.
ಆದಿತ್ಯ ಎಲ್1 ಬಾಹ್ಯಕಾಶ ನೌಕೆ ಸೂರ್ಯನ ಚಿತ್ರವನ್ನು ಪಡೆಯಲಿದೆ ಎಂದು ಮಾಹಿತಿ ನೀಡಿದರು. ಆದಿತ್ಯ ಎಲ್ 1 ಬಾಹ್ಯಕಾಶ ನೌಕೆ ಸೂರ್ಯನಿಂದ ಗಮನಾರ್ಹ ದೂರವಾಗಿ ಸ್ಥಳಕ್ಕೆ ತಲುಪಲಿದೆ. ಈ ಯೋಜನೆ ಮೂಲಕ ಇಸ್ರೋ, ಸೂರ್ಯನ ಹೊರಮೇಲ್ಮೈ ವಾತಾವರಣವನ್ನು ಅಧ್ಯಯನ ಮಾಡಲಿದೆ. ಜೊತೆಗೆ ಸೂರ್ಯನ ಹೊರ ಸೂಸುವಿಕೆ, ಅದು ಉತ್ಪಾದಿಸುವ ಗಾಳಿ ಬಗ್ಗೆಯೂ ತಿಳಿಯಲಿದೆ. ಇಷ್ಟೇ ಅಲ್ಲದೇ ಇದು ಸೂರ್ಯ ಬಿಡುಗಡೆ ಮಾಡುವ ಶಕ್ತಿ ಮತ್ತು ಸ್ಪೋಟಗಳನ್ನು ವರದಿ ಮಾಡಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.