ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 420 ಮೀಟರ್ ಉದ್ದದ ಎಲಿವೇಟೆಡ್ ವಾಕ್ ವೇ ಆರಂಭವಾಗಿದೆ.ಹಿರಿಯ ನಾಗರಿಕ ಮತ್ತು PRM (ಕಡಿಮೆ ಚಲನಶೀಲತೆ ಹೊಂದಿರುವ ವ್ಯಕ್ತಿಗಳು) ನೂತನ ಎಲಿವೇಟೆಡ್ ವಾಕ್ ವೇ ಬಹಳ ಪ್ರಯೋಜನವಾಗಲಿದೆ. ರಾತ್ರಿ ವೇಳೆಯಲ್ಲೂ ಯಾವುದೇ ಭಯವಿಲ್ಲದೆ ಓಡಾಡಲು ಸುರಕ್ಷತೆಯ ವಾತಾವರಣದ ಅನುಭವನ್ನು ವಾಕ್ ವೇಯಲ್ಲಿ ಸೃಷ್ಠಿ ಮಾಡಲಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ 420 ಮೀಟರ್ ಉದ್ದದ ಎಲಿವೇಟೆಡ್ ವಾಕ್ ವೇ ಪ್ರಾರಂಭವಾಗಿದೆ. ಇದರ ಮೂಲಕ ಪ್ರಯಾಣಿಕರು ಟರ್ಮಿನಲ್ 1 ರಿಂದ ಪಾರ್ಕಿಂಗ್ 4 ಕಡೆಗೆ ಸುಲಭವಾಗಿ ಹೋಗಬಹುದು.
ಆ.31ರಿಂದ ಹೊಸ ಟರ್ಮಿನಲ್ನಿಂದ ವಿಮಾನ ಹಾರಾಟ: ಕಳೆದ ಜನವರಿ 15 ರಿಂದ ಕೆಲವು ವಿಮಾನಗಳ ಹಾರಾಟ ಮಾತ್ರ ಶುರುವಾಗಿತ್ತು. ಆದರೆ ಆಗಸ್ಟ್ 31ರಿಂದ ಹೊಸ ಟರ್ಮಿನಲ್ನಿಂದ ದೇಶಿಯ ಹಾಗೂ ಅಂತಾರಾಷ್ಟ್ರೀಯ ಎಲ್ಲಾ ವಿಮಾನಗಳ ಹಾರಾಟ ನಡೆಯಲಿದೆ. ಸಂಸ್ಥೆಗಳಾದ ಸ್ಟಾರ್ ಏರ್, ವಿಸ್ತಾರ, ಏರ್ ಏಶಿಯಾ ವಿಮಾನಗಳು ಮಾತ್ರ ಟಿ2(ಟರ್ಮಿನಲ್-2) ನಿಂದ ಹಾರಾಟ ನಡೆಸುತ್ತಿದ್ದವು. ಆಗಸ್ಟ್ 31ರಂದು ಬೆಳಗ್ಗೆ 10:45ರಿಂದ ಈ ಟರ್ಮಿನಲ್ನಿಂದ ಎಲ್ಲಾ ವಿಮಾನಗಳ ಹಾರಾಟಕ್ಕೆ ಸಿದ್ಧತೆ ನಡೆದಿದೆ. ಈ ಕುರಿತು ವಿಮಾನ ನಿಲ್ದಾಣದ ಆಡಳಿತ ಮಂಡಳಿ ಪ್ರಯಾಣಿಕರಿಗೆ ಮಾಹಿತಿ ನೀಡುವ ನಾಮಫಲಕ, ಫ್ಲೆಕ್ಸ್ ಅಳವಡಿಸಿದೆ.
ಅನುಪಮಾ ಹೊಸ್ಕೆರೆ ಅವರ ಮರದ ತೊಗಲುಗೊಂಬೆಗಳು, ಕೃಷ್ಣರಾಜ್ ಚೋನಾಟ್ ಅವರ ಬೋರ್ಡಿಂಗ್ ಪಿಯರ್ ಕಲಾಕೃತಿ, ಬಿದ್ರಿ ಕ್ರಾಫ್ಟ್ ಗಾಥಾ ಮತ್ತು ಎಂ.ಎ. ರೌಫ್ ಅವರ ಕಲಾ ಕೃತಿಗಳು, ಚರ್ಮದ ತೊಗಲು ಗೊಂಬೆಗಳು, ಫೋಲಿ ಡಿಸೈನ್ ಮತ್ತು ಗುಂಡುರಾಜು ಅವರ ಕಲಾಕೃತಿಗಳು ಪ್ರಯಾಣಿಕರ ಗಮನ ಸೆಳೆಯುತ್ತಿವೆ.