ಇದು ಕನ್ನಡ ಚಿತ್ರರಂಗದ ಜನಪ್ರಿಯ ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್ ಆಯಕ್ಷನ್ ಕಟ್ ಹೇಳಿರುವ ಎರಡನೆಯ ಚಿತ್ರ. ಇದಕ್ಕೂ ಮೊದಲು ಅವರು ಕೆಲವು ವರ್ಷಗಳ ಹಿಂದೆ ಕೋಮಲ್ ನಟನೆಯ ‘ನಮೋ ಭೂತಾತ್ಮ’ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಅದೊಂದು ರಿಮೇಕ್ ಸಿನಿಮಾವಾಗಿತ್ತು. ಇದೀಗ ‘ನಮೋ ಭೂತಾತ್ಮ 2’ ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.ಆಗಸ್ಟ್ 4ರಂದು ತೆರೆಕಂಡು ಪ್ರೇಕ್ಷಕರನ್ನು ಮೆಚ್ಚಿಸುವುದರ ಜೊತೆಗೆ ಪರಭಾಷಾ ಚಿತ್ರಗಳ ಪೈಪೋಟಿಯ ನಡೆಯುವೂ ಚಿತ್ರವು ಉತ್ತಮ ಪ್ರದರ್ಶನ ಕಾಣುತ್ತಿರುವ ಸಂತಸ ಚಿತ್ರತಂಡಕ್ಕಿದೆನಟ ಕೋಮಲ್ ಅಭಿನಯದ ‘ನಮೋ ಭೂತಾತ್ಮ 2’ ಚಿತ್ರವು ಯಶಸ್ವಿಯಾಗಿ 25ನೇ ದಿನದತ್ತ ಮುನ್ನುಗ್ಗುತ್ತಿದೆ.
‘ನಮಾಡಿಕೊಂಡಿದ್ದಾರೆ.
“ಬಹುಶಃ ಪರಭಾಷೆಗಳ ದೊಡ್ಡ ಚಿತ್ರಗಳ ಪೈಪೋಟಿ ಇಲ್ಲದೇ ಇರುತ್ತಿದ್ದರೆ ಚಿತ್ರ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿತ್ತು. ಆಗಸ್ಟ್ 4ರಂದು ಯಾವುದೇ ಚಿತ್ರವೂ ಬಿಡುಗಡೆ ಇರಲಿಲ್ಲ ಎಂಬ ಕಾರಣಕ್ಕೆ ಆ ವಾರ ಚಿತ್ರ ಬಿಡುಗಡೆಗೆ ಪ್ಲಾನ್ ಮಾಡಿದೆವು. ಆದರೆ, ಅದರ ಮರುವಾರವೇ ಜೈಲರ್ ಸೇರಿದಂತೆ ನಾಲ್ಕು ದೊಡ್ಡ ಪರಭಾಷಾ ಚಿತ್ರಗಳು ಬಿಡುಗಡೆಯಾದವು. ಇದರಿಂದ ನಮಗೆ ಚಿತ್ರಮಂದಿರಗಳ ಸಮಸ್ಯೆ ಎದುರಾಯಿತು. ನಮಗೆ ಚಿತ್ರ ನಿರ್ಮಾಣ ಹೊಸದು. ಯಾವುದಕ್ಕೂ ರಾಜಿ ಆಗದೇ ಚಿತ್ರಕ್ಕೆ ಏನು ಬೇಕೋ ಅದನ್ನೆಲ್ಲ ಪೂರೈಸಿ ಒಂದು ಹೊಸ ತಂಡ ಕಟ್ಟಿಕೊಂಡು ಈ ಚಿತ್ರ ಮಾಡಿದ್ದೇವೆ. ಚಿತ್ರ ನೋಡಿದವರೆಲ್ಲಾ ಒಳ್ಳೆಯ ಮಾತುಗಳನ್ನಾಡುತ್ತಿದ್ದಾರೆ. ಒಂದು ಸ್ವಂತ ಪ್ರಯತ್ನಕ್ಕೆ ಸಿಕ್ಕ ಪ್ರೋತ್ಸಾಹದಿಂದ ಇನ್ನಷ್ಟು ಏನಾದರೂ ಮಾಡುವ ಹುಮ್ಮಸ್ಸು ಬರುತ್ತದೆ” ಎಂದು ಹೇಳಿದರು.
ಸದ್ಯ ಮಾಸ್ಟರ್ ಮುರಳಿ ಅವರ ಜೊತೆ ಇನ್ನೂ ಮೂರು ಕಥೆಗಳಿವೆಯಂತೆ. “ನಮೋ ಭೂತಾತ್ಮ 2 ಚಿತ್ರದ ಕೊನೆಯಲ್ಲಿ ಎಂಡಿಂಗ್ ಅನ್ನೋದು ಇರಲಿಲ್ಲ. ಮುಂದುವರೆದ ಭಾಗವನ್ನು ಮತ್ತೊಂದು ಸಿನಿಮಾ ಹೇಳಲಿದೆ ಎಂಬ ವಿಚಾರ ಗೊತ್ತಾಗುತ್ತದೆ. ಹೀಗಾಗಿ ‘ನಮೋ ಭೂತಾತ್ಮ 3’ ಮಾಡುವ ಯೋಚನೆ ಇದೆ. ಆದರೆ ಸದ್ಯಕ್ಕಿಲ್ಲ. ಒಂದು ವರ್ಷದ ನಂತರ ಈ ಬಗ್ಗೆ ಆಲೋಚಿಸುತ್ತೇನೆ. ಅದಕ್ಕೂ ಮೊದಲು ಇನ್ನೂ ಮೂರು ಕಥೆಗಳಿವೆ. ಎಲ್ಲಾ ವಿಭಿನ್ನ ಸ್ಟೋರಿಗಳು. ಈ ಪೈಕಿ ಒಂದು ಚಿತ್ರದ ಕೆಲಸಗಳು ಮುಂದಿನ ತಿಂಗಳಿನಿಂದ ಶುರುವಾಗುವ ಸಾಧ್ಯತೆ ಇದೆ” ಎಂದು ತಿಳಿಸಿದರು.
ನೃತ್ಯಪಟುವಾಗಿ ಗುರುತಿಸಿಕೊಂಡಿದ್ದ ಮುರಳಿ ಮಾಸ್ಟರ್ ಯಶವಂತ್ ಚಿತ್ರದ ಮೂಲಕ ನೃತ್ಯ ನಿರ್ದೇಶಕರಾದರು. ಅಲ್ಲಿಂದ ಇಲ್ಲಿಯವರೆಗೂ ಸುಮಾರು 600ಕ್ಕೂ ಹೆಚ್ಚು ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಪುನೀತ್ ರಾಜ್ಕುಮಾರ್, ಗಣೇಶ್, ಯಶ್, ಸುದೀಪ್, ದರ್ಶನ್, ಶರಣ್, ಧ್ರುವ ಸರ್ಜಾ ಸೇರಿದಂತೆ ಕನ್ನಡ ಚಿತ್ರರಂಗದ ಸ್ಟಾರ್ ನಟರ ಸಿನಿಮಾಗಳಿಗೆ ನೃತ್ಯ ನಿರ್ದೇಶನ ಮಾಡುವ ಮೂಲಕ ತಮ್ಮದೇ ಛಾಪು ಮೂಡಿಸಿದ್ದಾರೆ.
ಚಿತ್ರದ ಕುರಿತು ಮಾತನಾಡಿರುವ ಮುರಳಿ ಮಾಸ್ಟರ್, “‘ನಮೋ ಭೂತಾತ್ಮ 2’ ಚಿತ್ರವು ಯಶಸ್ವಿಯಾಗಿ 25ನೇ ದಿನದತ್ತ ಮುನ್ನುಗ್ಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಈ ಕಥೆ ರೆಡಿಮಾಡಿಟ್ಟುಕೊಂಡಿದ್ದೆ. ಕಳೆದ ವರ್ಷ ಇದೇ ಸಮಯಕ್ಕೆ ಚಿತ್ರದ ತಯಾರಿ ಶುರುವಾಯಿತು. ಈ ವರ್ಷ ಆಗಸ್ಟ್ನಲ್ಲಿ ಚಿತ್ರ ಬಿಡುಗಡೆಯಾಗಿದೆ. ಸಿನಿಮಾ ನೋಡಿದವರೆಲ್ಲ ಮೆಚ್ಚಿಕೊಂಡಿದ್ದಾರೆ. ನಗಿಸುತ್ತಾ, ಹೆದರಿಸುತ್ತಾ ಒಂದು ಸಂದೇಶವನ್ನು ಹೇಳುವ ಪ್ರಯತ್ನ ಮಾಡಿದ್ದು, ಜನರಿಗೆ ಮೆಚ್ಚುಗೆಯಾಗಿದೆ. ಅದರಲ್ಲೂ ಚಿತ್ರದ ದ್ವಿತಿಯಾರ್ಧ ಮತ್ತು ಕ್ಲೈಮ್ಯಾಕ್ಸ್ ಭಾಗವನ್ನು ಎಲ್ಲರೂ ಬಹಳವಾಗಿ ಮೆಚ್ಚಿಕೊಂಡಿದ್ದಾರೆ” ಎಂದು ಹರ್ಷ ವ್ಯಕ್ತಪಡಿಸಿದರು.