ತೆಂಕಪೇಟೆ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಊರ ಪರವೂರ ಭಜನಾ ಮಂಡಳಿಗಳಿಂದ ಅಹೋ ರಾತ್ರಿ 7 ದಿನಗಳ ಕಾಲ ನಿರಂತರ ಭಜನೆ ನಡೆಯಿತು. 122 ನೇ ಭಜನಾ ಸಪ್ತಾಹ ಮಂಗಲೋತ್ಸವ ಸೋಮಾವಾರ ಕೊನೆಗೊಂಡಿತು. ಧಾರ್ಮಿಕ ಪೂಜಾ ವಿಧಿ-ವಿಧಾನಗಳನ್ನು ದೇವಳದ ಅರ್ಚಕ ವಿನಾಯಕ ಭಟ್ ನಡೆಸಿಕೊಟ್ಟರು.
ಭಜನೆ ಪ್ರಿಯ ಶ್ರೀ ವಿಠೋಬಾ ರುಖುಮಾಯಿ ದೇವರ ಸನ್ನಿಧಿಯಲ್ಲಿ ಜೈ ವಿಠಲ್ ಹರಿ ವಿಠಲ್ ನಾಮ ಪಠಿಸುತ್ತಾ ದೀಪ ಸ್ಥಂಭಕ್ಕೆ ಪ್ರದಕ್ಷಿಣೆ ಹಾಕಲಾಯಿತು. ಮಹಾ ಮಂಗಳಾರತಿ ಬಳಿಕ ನೂರಾರು ಭಕ್ತರು ಉರುಳು ಸೇವೆ (ಮಾಡೆ ಸ್ಥಾನ ) ಹಾಕಿದರು.
ನಗರ ಭಜನೆ, ತೆಪ್ಪಂಗಾಯಿ, ಮೊಸರು ಕುಡಿಕೆ ಬಳಿಕ ದೇವಾಲದ ಹೊರಾಂಗಣದಲ್ಲಿ ದೇವರ ಉತ್ಸವ ನಡೆಯಿತು. ಮಹಾಪೂಜೆ ಬಳಿಕ ಭೋಜನ ಪ್ರಸಾದ ವಿತರಿಸಲಾಯಿತು. ಶ್ರೀ ಲಕ್ಷ್ಮೀ ವೆಂಕಟೇಶ ದೇವರಿಗೆ ತಿರುಪತಿ ಶ್ರೀನಿವಾಸ ವಿಶೇಷ ಅಲಂಕಾರ ಹಾಗೂ ದೇವಾಲಯವನ್ನು ವಿಶೇಷ ಹೂಗಳಿಂದ ಅಲಂಕಾರ ಮಾಡಲಾಗಿತ್ತು.
ಅರ್ಚಕರಾದ ದಯಾಘನ್ ಭಟ್ , ಗಿರೀಶ್ ಭಟ್ , ದೀಪಕ್ ಭಟ್ , ಸುರೇಶ ಭಟ್ , ಲಕ್ಷ್ಮೀನಾರಾಯಣ ಭಟ್ , ಗುರುಪ್ರಸಾದ್ ನಾಯಕ್ , ವಿಠಲ್ ದಾಸ್ ನಾಯಕ್, ದೇವಳದ ಆಡಳಿತ ಮೊಕ್ತೇಸರ ಪಿ ವಿ ಶೆಣೈ , ವಿಶ್ವನಾಥ್ ಭಟ್, ನಾರಾಯಣ ಪ್ರಭು , ಕೈಲಾಶನಾಥ್ ಶೆಣೈ , ಅಶೋಕ್ ಬಾಳಿಗಾ , ದೇವಿದಾಸ್ ಪೈ , ಉಮೇಶ್ ಪೈ , ವಸಂತ ಕಿಣಿ , ರೋಹಿತಾಕ್ಷ ಪಡಿಯಾರ್ , ಪುಂಡಲೀಕ ಕಾಮತ್, ಗಣೇಶ ಕಿಣಿ , ವಿವೇಕ ಶಾನ್ ಬೋಗ್ ,ಸತೀಶ್ ಕಿಣಿ , ಭಾಸ್ಕರ ಶೆಣೈ , ವಿಶಾಲ್ ಶೆಣೈ , ಶ್ಯಾಮ್ ಪ್ರಸಾದ್ ಕುಡ್ವ , ನಿತೇಶ ಶೆಣೈ , ನಾಗೇಶ್ ಪ್ರಭು , ಸಂದೀಪ್ ನಾಯಕ್ , ಪ್ರದೀಪ್ ರಾವ್ , ಸತೀಶ್ ಕಾಮತ್ , ಜಯಪ್ರಕಾಶ್ ಕಿಣಿ , ಆಡಳಿತ ಮಂಡಳಿಯ ಸದಸ್ಯರು ಹಾಗು ಜಿ.ಸ್.ಬಿ. ಯುವಕ ಮಂಡಳಿ, ಮಹಿಳಾ ಮಂಡಳಿ ಸದಸ್ಯರು ,ಶ್ರೀ ಶಾರದಾ ಮೊಹೋತ್ಸವ ಸಮಿತಿ ಸದಸ್ಯರು , ಹರಿಪ್ರಸಾದ್ ಮಿತ್ರ ವೃಂದ ಸದಸ್ಯರು ಹಾಗೂ ಸಾವಿರಾರು ಸಮಾಜ ಬಾಂಧವರು ಉಪಸ್ಥಿತರಿದ್ದರು.