ಬುಡಾಪೆಸ್ಟ್, ಹಂಗೇರಿ : ಫೈನಲ್ನಲ್ಲಿ ಎರಡನೇ ಪ್ರಯತ್ನದಲ್ಲಿ ಅವರು 88.17 ಮೀಟರ್ ದೂರ ಜಾವೆಲಿನ್ ಎಸೆದು ಪದಕ ಗೆದ್ದರು. ವಿಶ್ವ ಚಾಂಪಿಯನ್ ಆದ ನಂತರ ನೀರಜ್ ಚೋಪ್ರಾ ಅವರ ಮೊದಲ ಪ್ರತಿಕ್ರಿಯೆ ನೀಡಿದ್ದಾರೆಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.
ಈ ಐತಿಹಾಸಿಕ ಚಿನ್ನದ ಪದಕ ಗೆದ್ದ ನಂತರ ಮಾಧ್ಯಮದ ಮುಂದೆ ಮಾತನಾಡಿದ ನೀರಜ್ ಚೋಪ್ರಾ ಒಂದು ಕ್ಷಣ ಬಾವುಕರಾದರು. ‘ನಾನು ಈಗ ಏನು ಹೇಳಲಿ, ಈ ಒಂದು ಪದಕ ಮಾತ್ರ ಉಳಿದುಕೊಂಡಿತ್ತು. ಅದು ಕೂಡ ಇಂದು ಪೂರ್ಣಗೊಂಡಿದೆ. 90 ಮೀಟರ್ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ. ನನಗೆ ಚಿನ್ನದ ಪದಕವೇ ಮುಖ್ಯವಾಗಿತ್ತು. ಈಗ ನಾವು ಪಡೆದಿದ್ದೇವೆ ಎಂದರು.
ಮತ್ತೊಂದೆಡೆ ನೀರಜ್ ಚೋಪ್ರಾ ಅವರು ದೇಶದ ಜನರಿಗೆ ಧನ್ಯವಾದ ಸಲ್ಲಿಸಿದ್ದಾರೆ. ನೀವು ರಾತ್ರಿ ಸಮಯದಲ್ಲಿ ಎಚ್ಚರಗೊಂಡು ನನ್ನ ಪಂದ್ಯ ವೀಕ್ಷಿಸಿ ಬೆಂಬಲಿಸಿದ್ದಕ್ಕೆ ತಮ್ಮಲ್ಲೆರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಈ ಪದಕ ಇಡೀ ಭಾರತದ್ದು,ಒಲಿಂಪಿಕ್ ಚಾಂಪಿಯನ್ ಆಗಿದ್ದೆ. ಈಗ ವಿಶ್ವ ಚಾಂಪಿಯನ್ ಆಗಿದ್ದೇನೆ. ನಾವು ಈಗ ಏನು ಬೇಕಾದರೂ ಮಾಡಬಹುದು. ನೀವು ಸಹ ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಶ್ರಮ ವಹಿಸಿ, ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂದು ಹೇಳಿದರು.
ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಇತಿಹಾಸ ಬರೆದಿದ್ದಾರೆ. ಸರಿ ಸುಮಾರು 50 ವರ್ಷಗಳ ಬಳಿಕ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಂಗೇರಿಯ ರಾಜಧಾನಿ ಬುಡಾಪೆಸ್ಟ್ನಲ್ಲಿರುವ ರಾಷ್ಟ್ರೀಯ ಅಥ್ಲೆಟಿಕ್ಸ್ ಸೆಂಟರ್ನಲ್ಲಿ ನಡೆದ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ 88.ಜಾವೆಲಿನ್ ಎಸೆಯುವ ಸಂದರ್ಭದಲ್ಲಿ ನೀರಜ್ ಅವರ ತೊಡೆಸಂದು ಗಾಯವು ಅವರಿಗೆ ಕಾಡುತ್ತಿತ್ತು.
ಇದರಿಂದಾಗಿ ಅವರು ಟ್ರ್ಯಾಕ್ನಲ್ಲಿ ತಮ್ಮ ಪ್ರದರ್ಶನವನ್ನು ಉತ್ತಮವಾಗಿ ನೀಡಲು ಸಾಧ್ಯವಾಗಲಿಲ್ಲ. ಈ ಐತಿಹಾಸಿಕ ಚಿನ್ನದ ಪದಕ ಗೆದ್ದ ನಂತರ ಮಾತನಾಡಿದ ನೀರಜ್ ಚೋಪ್ರಾ, ಫಸ್ಟ್ ಥ್ರೋ ತುಂಬಾ ಚೆನ್ನಾಗಿ ಎಸೆಯುತ್ತೇನೆ ಎಂದು ಅಂದುಕೊಂಡಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ. ಫಸ್ಟ್ ಥ್ರೋ ಸರಿ ಹೋಗದ ಕಾರಣ ಸೆಕೆಂಡ್ ಥ್ರೋ ಜಾಗೂರಕನಾಗಿ ಮುಂದೆ ಓಡುತ್ತಿದ್ದೆ. ಶೇಕಡಾ 100 ರಷ್ಟು ವೇಗದಲ್ಲಿ ನಾನು ಎಫೆಕ್ಟ್ ಹಾಕಬೇಕು. ವೇಗವಾಗಿ ಓಡದಿದ್ರೆ ಕೊರತೆ ಕಂಡು ಬರುತ್ತದೆ. ಹಾಗಾಗಿ ನಾನು ಸಂಪೂರ್ಣ ಫಿಟ್ ಆಗಿರಬೇಕು ಮತ್ತು ಶೇಕಡಾ 100 ರಷ್ಟು ವೇಗವಾಗಿ ಓಡಬೇಕು. ನಾನು ಅದೇ ಕೆಲಸ ಮಾಡಿದೆ, ಕೊನೆಗೂ ನನಗೆ ಜಯ ಒಲಿದು ಬಂತು ಎಂದು ಹೇಳಿದರು.