ಶ್ರೀಚಕ್ರ ಪೀಠ ಸುರಪೋಜಿತ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ವೈಭವದ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆ ಸಂಪನ್ನ

ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರ ಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ವಿಶೇಷ ಸಾನಿಧ್ಯವಾದ ಕುಬೇರ ಚಿತ್ರಲೇಖ ಸಹಿತವಾದ ಮಹಾಲಕ್ಷ್ಮಿಯ ಸನ್ನಿಧಾನದಲ್ಲಿ ಶ್ರಾವಣ ಶುಕ್ರವಾರದಂದು ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆಯು ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಬಹು ವಿಜೃಂಭಣೆಯಿಂದ ಸಂಪನ್ನಗೊಂಡಿತು.


ಪೂಜೆಯ ಅಂಗವಾಗಿ ಶ್ರೀ ದುರ್ಗಾ ಆದಿಶಕ್ತಿ ದೇವಿ ಹಾಗೂ ಕುಬೇರ ಚಿತ್ರಲೇಖ ಸಹಿತವಾದ ಮಹಾಲಕ್ಷ್ಮಿಯ ಸನ್ನಿಧಾನವನ್ನು ಕನ್ಯಾಕುಮಾರಿಯಿಂದ ವಿಶೇಷವಾಗಿ ತರಿಸಲಾಗಿದ್ದ ತಾವರೆಯ ಹೂವಿನಿಂದ ಮನಮೋಹಕವಾಗಿ ಅಲಂಕರಿಸಲಾಗಿತ್ತು.


ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮಾ ನಾಗರಾಜ ಅವರು ದೀಪ ಪ್ರಜ್ವಲಿಸುವುದರೊಂದಿಗೆ ವ್ರತ ಪೂಜೆಗೆ ಚಾಲನೆ ನೀಡಲಾಯಿತು.. ಶ್ರೀ ಲಕ್ಷ್ಮಿಯ ಅನುಗ್ರಹಕ್ಕಾಗಿ ವಿಶೇಷವಾಗಿ ಸುಮಂಗಲಿಯರು ನೆರವೇರಿಸುವ ಈ ಪೂಜೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತರುಗಳು ಪಾಲ್ಗೊಂಡರು.


ಶ್ರೀಮತಿ ಚಂದ್ರಕಲಾ ಅವರಿಂದ ವಿಶೇಷ ಸಂಗೀತ ಹಾಗೂ ಇಶಾನ್ ಕುಮಾರ್ ಅವರಿಂದ ಕ್ಷೇತ್ರದ ವಿಶೇಷ ಸೇವೆಯಾದ ನೃತ್ಯ ಸೇವೆ ದುರ್ಗಾ ಆದಿಶಕ್ತಿ ದೇವಿಗೆ ಅಭಿಮುಖವಾಗಿ ಸಮರ್ಪಿಸಲ್ಪಟ್ಟಿತು.. ಪೂಜೆಯ ಅಂಗವಾಗಿ ಸುಹಾಸಿನಿ ಕನ್ನಿಕಾ ಆರಾಧನೆ ನೆರವೇರಿತು.
ಕ್ಷೇತ್ರದ ಮಹಾಪ್ರಸಾದವಾದ ಅನ್ನಪ್ರಸಾದವನ್ನು ಮಧ್ಯಾಹ್ನ ಹಾಗೂ ರಾತ್ರಿ ಸಹಸ್ರ ಸಂಖ್ಯೆಗೂ ಅಧಿಕ ಭಕ್ತರುಗಳು ಸ್ವೀಕರಿಸಿದರು. ಕ್ಷೇತ್ರದ ಪ್ರಧಾನ ಅರ್ಚಕ ಅನಿಶ್ ಆಚಾರ್ಯ ಆನಂದಬಾಯರಿ ಹಾಗೂ ಸ್ವಸ್ತಿಕ್ ಆಚಾರ್ಯ ದೇವಿಯನ್ನು ವಿಶೇಷವಾಗಿ ಅಲಂಕರಿಸಿದರು ರಾತ್ರಿಯ ಪೂಜೆಯಲ್ಲಿ ಸೋನೆ ತಿಂಗಳಲ್ಲಿ ಬೆಳಗುವ ಸೋನಾರತಿಯನ್ನು ವೀಕ್ಷಿಸಲು ಭಕ್ತ ಸಮೂಹ ಕ್ಷೇತ್ರದ ಆವರಣದಲ್ಲಿ ಕಿಕ್ಕಿ ರಿದು ತುಂಬಿತ್ತು ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.