3,289 ಕೋಟಿ ಮೌಲ್ಯದ ಆರ್ಡರ್​ ಪಡೆದ ಬಿಇಎಲ್​: ಚಂದ್ರಯಾನ-3ರ ಎಫೆಕ್ಟ್

ಬೆಂಗಳೂರು: ನವರತ್ನ ರಕ್ಷಣಾ ಸಾರ್ವಜನಿಕ ವಲಯದ ಉದ್ಯಮ ಭಾರತ್​​ ಎಲೆಕ್ಟ್ರಿಕಲ್​ ಲಿಮಿಟೆಡ್​​ (ಬಿಇಎಲ್​) ಈ ವರ್ಷದ ಅಂದರೆ 2023 ಜುಲೈ ಮತ್ತು ಆಗಸ್ಟ್​​ನಲ್ಲಿ 3,289 ಕೋಟಿ ಮೊತ್ತದ ಹೊಸ ರಕ್ಷಣ ಮತ್ತು ರಕ್ಷಣೆತ್ತರ ಆರ್ಡರ್​ ಅನ್ನು ಪಡೆಯುವ ಮೂಲಕ ಸಾಧನೆ ಮಾಡಿದೆ.
ಉದ್ಯಮದ ವಿವಿಧ ರೀತಿಯ ಎಲೆಕ್ಟ್ರಾನಿಕ್​ ಸಾಧನಗಳ ಪೂರೈಕೆಯನ್ನು ಈ ಆರ್ಡರ್​​ ಹೊಂದಿದೆ. ಇದರಲ್ಲಿ ಕಡಿಮೆ ಮಟ್ಟದ ಲೈಟ್​ ವೈಟ್​ ರಾಡಾರ್​​, ಸೋನಾರ್ಸ್​, ಐಎಫ್​ಎಫ್​ ವ್ಯವಸ್ಥೆ, ಸ್ಟಾಟ್​ಕೊಮ್​ ವ್ಯವಸ್ಥೆ, ಇಒ/ಐಆರ್​ ಪೇಲೋಡ್​, ಟಿಆರ್​ಎಂ/ಡಿಟಿಆರ್​ಎಂಗಳು, ಜಾಮರ್​​, ಎನಕ್ರಿಪ್ಟರ್ಸ್​​, ಡಾಟಾ ಲಿಂಕ್​ ಸಿಸ್ಟಂ, ಫೈರ್​​ ಕಂಟ್ರೊಲ್​ ಸಿಸ್ಟಂ, ಡೈರೆಕ್ಟ್​​ ಎನರ್ಜಿ ಸಿಸ್ಟಂಗಳಿಗೆ ರಾಡಾರ್​, ಸೆಮಿ ರಗ್ಡ್​​ ಟೆಲಿಫೋನ್​ ಎಕ್ಸ್​ಚೆಂಜ್​, ಸಾಫ್ಟ್​ವೇರ್​ ಡಿಫೈನ್ಡ್​​ ರೆಡಿಯೋಗಳು ಮತ್ತು ಇತರ ವಿವಿಧ ರೀತಿಯ ರೇಡಿಯೋ, ಎಲೆಕ್ಟ್ರಾನಿಕ್​ ವೊಟಿಂಗ್​​ ಮೆಷಿನ್​, ಎಎಂಸಿ ಮತ್ತು ಬಿಡಿಭಾಗಗಳು ಹೊಂದಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 3,289 ಕೋಟಿ ಸೇರಿದಂತೆ ಈ ವರ್ಷದ ಆರ್ಥಿಕ ವರ್ಷದಲ್ಲಿ ಬಿಇಎಲ್​ 11,380 ಕೋಟಿ ರೂ ಆರ್ಡರ್​ ಪಡೆದಿದೆ.

ಹಿಂದೂಸ್ತಾನ್​ ಶಿಪ್​ಯಾರ್ಡ್​ ಲಿಮಿಟೆಡ್​​ (ಎಚ್​ಎಸ್​ಎಲ್​) ನಿಂದ 1,075 ಕೋಟಿ ಮೌಲ್ಯದ ಆರ್ಡರ್​​ನ ಲೆಟರ್​ ಆಫ್​ ಇಂಡೆಂಟ್​ (ಎಲ್​ಒಐ) ಅನ್ನು ಇದು ಒಳಗೊಂಡಿದೆ. ಇದರಲ್ಲಿ ಸಿಎಂಎಸ್​, ಕಮ್ಯೂನಿಕೇಷನ್​ ಸಿಸ್ಟಂ, ಇಬ್ಲ್ಯೂ ಸಿಸ್ಟಂ ಮತ್ತು ಫ್ಲಿಟ್​​ ಸಪೋರ್ಟ್​ ಶಿಪ್ಸ್​​ಗೆ ಇತರ ಸೆನ್ಸಾರ್ಗಳ ಪೂರೈಕೆ ಹೊಂದಿದೆ ಎಂದು ಬೆಂಗಳೂರಿನ ಮುಖ್ಯ ಕಚೇರಿಯ ಬಿಇಎಲ್​ ತಮ್ಮ ಹೇಳಿಕೆಯಲ್ಲಿ ತಿಳಿಸಿದೆ. ಈ ಅಧಿಕ ಮೌಲ್ಯದ ಆರ್ಡರ್​​ಗಳು ಸಾರ್ವಜನಿಕ ವಲಯದ ಉದ್ಯಮಕ್ಕೆ ಭವಿಷ್ಯದಲ್ಲಿ ಹೆಚ್ಚು ಅಭಿವೃದ್ಧಿಗೆ ಕಾರಣವಾಗಲಿದೆ.

ಏನಿದು ಬಿಇಎಲ್​​​: ಭಾರತ ಸರ್ಕಾರಿ ಸ್ವಾಮ್ಯದ ಏರೋಸ್ಪೇಸ್​ ಮತ್ತುರಕ್ಷಣಾ ಎಲೆಕ್ಟ್ರಾನಿಕ್​ ಕಂಪನಿ ಇದಾಗಿದೆ. ಇದು ಏರೋಸ್ಪೆಸ್​​ ಅಪ್ಲೆಕೇಷನ್​ ಮತ್ತು ಪ್ರಾಥಮಿಕ ಸುಧಾರಿತ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ತಯಾರಿಸುತ್ತದೆ. ಭಾರತ ರಕ್ಷಣಾ ಸಚಿವಾಲಯದ 9 ಸಾರ್ವಜನಿಕ ವಲಯದ ಉದ್ಯಮದಲ್ಲಿ ಬಿಇಎಲ್​ ಒಂದಾಗಿದೆ. ಬೆಂಗಳೂರಿನಲ್ಲಿ ಇದರ ಮುಖ್ಯ ಕಚೇರಿ ಇದೆ. (ಪಿಟಿಐ)ಈ ಆರ್ಡರ್​​ಗಳು 8,091 ಕೋಟಿ ಮೌಲ್ಯದ ಆರ್ಡರ್​​ಗೆ ಹೆಚ್ಚುವರಿ ಸೇರ್ಪಡೆಯಾಗಿದೆ. ಈಗಾಗಲೇ ಈ 8,091 ಕೋಟಿ ಆರ್ಡರ್​ ಅನ್ನು ಸ್ವೀಕರಿಸಲಾಗಿದೆ. ಇದರ ಇತ್ತೀಚಿನ ಬೆಳವಣಿಗೆ ಜೊತೆಗೆ ಬಿಇಎಲ್​ ಒಟ್ಟಾರೆಯಾಗಿ 11,380 ಕೋಟಿಯ ಆರ್ಡರ್​ ಅನ್ನು 2023-24ರ ಆರ್ಥಿಕ ವರ್ಷದಲ್ಲಿ ಇಲ್ಲಿಯವರೆಗೆ ಪಡೆದಿದೆ ಎಂದು ವರದಿ ತಿಳಿಸಿದೆ.