ಮಂಗಳೂರು: ಬಿಜೈ ನಿವಾಸಿ ಕ್ಲಿಫರ್ಡ್ ಮತ್ತುಕ್ವೀನಿ ಲಸ್ರಾದೊ ದಂಪತಿಗಳ ಮಗಳಾದ ಸೋನಿಯಾ ಕ್ಯಾಥಿ ಲಸ್ರಾದೊ ಇವರು ಅಮೆರಿಕದ ಡರ್ಹಮ್ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ‘ಫ್ರೆಂಡ್ಸ್ ಫಾರೆವರ್ ಇಂಟರ್ ನ್ಯಾಷನಲ್’(ಎಫ್ಎಫ್ಐ) ಸಂಸ್ಥೆಯು ನಡೆಸುತ್ತಿರುವ 10 ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸಲ್ಪಟ್ಟಿದ್ದರು. ಈ ಸಂಸ್ಥೆಯು ಶಾಲಾ ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ವೃತ್ತಿಪರ ನಾಯಕತ್ವದ ಗುಂಪುಗಳು, ನಾಗರಿಕ ಸಂಸ್ಥೆಗಳು ಇತ್ಯಾದಿಗಳೊಂದಿಗೆ ಕೆಲಸ ಮಾಡುತ್ತದೆ. ಇದು ವೈಯಕ್ತಿಕ ನಾಯಕತ್ವ ಮತ್ತು ಸಮುದಾಯದ ಮಟ್ಟದ ಕ್ರಿಯಾಶೀಲತೆಯನ್ನು ಗಮನಿಸುವ ಒಂದು ವಿಶ್ವವಿದ್ಯಾಲಯೋತ್ತರ ಸಂಸ್ಥೆಯಾಗಿದೆ.
ಎಫ್ಎಫ್ಐ ಲಾಭರಹಿತ ಸಂಸ್ಥೆಯಾಗಿದ್ದು, ಎರಡು ಮಹಾದ್ವೀಪಗಳಲ್ಲಿ ೫ ಕ್ಯಾಂಪಸುಗಳನ್ನು ಹೊಂದಿದೆ. ಇಲ್ಲಿ ರಾಷ್ಟ್ರೀಯ ಮತ್ತುಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಸಂಸ್ಕೃತಿಗಳನ್ನು ಪರಿಚಯಿಸುವ ಪ್ರವಾಸಗಳನ್ನು ಏರ್ಪಡಿಸಲಾಗುತ್ತದೆ. ಯಾವುದೇ ಜಾತಿ, ಮತ, ಆರ್ಥಿಕ ಸ್ಥಿತಿಗತಿಗಳನ್ನು ಲೆಕ್ಕಿಸದೆ ಅಭ್ಯರ್ಥಿಗಳನ್ನು ಅಯ್ಕೆ ಮಾಡಲಾಗುತ್ತದೆ. ಈ ವರ್ಷಈ ಕಾರ್ಯಕ್ರಮವು ಉತ್ತರ ಐರ್ಲೆಂಡಿನ ಬೆಲ್ಫಾಸ್ಟ್ನಲ್ಲಿ ಆಗಸ್ಟ್ 9 ರಿಂದ 19 ರವರೆಗೆ ನಡೆಯಿತು. ಪ್ರವಾಸ ಆಸ್ಟ್ರಿಯಾ, ಬ್ರೆಜಿಲ್, ಕೆನಡಾ, ಭಾರತ, ಮಂಗೋಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಟರ್ಕಿಯಿಂದ ಆಯ್ಕೆಯಾದ ತಲಾ ಒಬ್ಬ ಪ್ರತಿನಿಧಿಯನ್ನು ಹೊಂದಿತ್ತು. ಸೋನಿಯಾ ಭಾರತದ ಪ್ರತಿನಿಧಿಯಾಗಿದ್ದರು.
ಈ ಕಾರ್ಯಕ್ರಮವು ಪ್ರತಿಭಾಗಿಗಳಿಗೆ ತಮ್ಮನ್ನು, ತಮ್ಮ ಸಮುದಾಯದಲ್ಲಿನ ಚಟುವಟಿಕೆಗಳನ್ನು, ಆ ಚಟುವಟಿಕೆಗಳನ್ನು ಎದುರಿಸಲು ಅಗತ್ಯವಾದ ಕೌಶಲ್ಯಗಳು ಮತ್ತು ದೃಢಚಿತ್ತತೆಯನ್ನು ವಿಕಸಿಸುವ ಪ್ರಾಮುಖ್ಯ ನೀಡುತ್ತದೆ. ಈ ಪ್ರಬಲ ಹಂತವು ಎಫ್ಎಫ್ಐ ಅಂತರ್ವಿದ್ಯಾಲಯ ಶಿಕ್ಷಾ ಯೋಜನೆಗಳ ಸಾರ, ಅರ್ಥಪೂರ್ಣ ಸೇವಾ-ಕಲಿಕೆ ಕಾರ್ಯಕ್ರಮಗಳು, ಅಧಿಕೃತ ಸಮುದಾಯ ಸಂವಹನ ಮತ್ತು ಸಹಯೋಗದ ನಾಯಕತ್ವವನ್ನುಒತ್ತುನೀಡುವ ಚಟುವಟಿಕೆಗಳನ್ನು ಒಳಗೊಂಡಿದೆ.
ಈ ದೇಶಗಳಿಂದ ಬಂದ ಪ್ರತಿನಿಧಿಗಳು ಹತ್ತು ದಿನಗಳ ಕಾಲ ಯಾವುದೇ ತಂತ್ರಜ್ಞಾನವಿಲ್ಲದೆ, 100% ಸಸ್ಯಆಧಾರಿತ ಆಹಾರವನ್ನು ಸೇವಿಸಿದರು. ದೈನಂದಿನ ವೇಳಾಪಟ್ಟಿಯಲ್ಲಿ ತಮ್ಮ ಜೀವನದ ನಕ್ಷೆಗಳ ಮೂಲಕ ತಮ್ಮನ್ನು ಅರಿಯುವ ಅಧಿವೇಶನಗಳು, ತಮ್ಮ ಸಂವಾದ ಯೋಗ್ಯತೆಯನ್ನುಅಭಿವೃದ್ಧಿ ಪಡಿಸುವ ಕಾರ್ಯಕ್ರಮಗಳೂ ಸೇರಿದ್ದವು. ಪ್ರತಿ ಪ್ರತಿನಿಧಿ ತಮ್ಮ ದೇಶದ ಚಿತ್ರಗಳೊಂದಿಗೆ ತಮ್ಮ ಸಂಸ್ಕೃತಿಯ ಬಗ್ಗೆ ಮಾತನಾಡಿದರು. ಕ್ಲಾಸ್ರೂಂ ತರಬೇತಿಯೊಂದಿಗೆ, ಧ್ಯಾನ, ಪರ್ವತಾರೋಹಣ, ಹೈಕಿಂಗ್, ಆಟಗಳು, ಬೀಚ್ ಭೇಟಿಯಲ್ಲಿ ಭಾಗವಹಿಸುವ ದೈಹಿಕ ಚಟುವಟಿಕೆಗಳು ಜರುಗಿತು. ನಗರದ ಯುವ ಗುಂಪುಗಳೊಂದಿಗೆ ಭೇಟಿಯಾಗಿ ಯಾವ ರೀತಿಯಲ್ಲಿ ಆ ಯುವ ಗುಂಪುಗಳು ಸಮುದಾಯದ ಸೇವೆ ಮಾಡುತ್ತವೆ ಎಂಬುದನ್ನುಅರಿತರು. ಗ್ರಾಮೀಣ ಸಮುದಾಯಗಳಿಗೆ ಆರೋಗ್ಯ ಸೇವೆಗಳನ್ನು ನೀಡುವ ಸಂಸ್ಥೆಗಳೊಂದಿಗೆ ಚರ್ಚೆಗಳನ್ನು ನಡೆಸಿದರು, ಉತ್ತರ ಐರ್ಲೆಂಡ್ ಅಸೆಂಬ್ಲಿ ಮತ್ತುಅಂತಹ ಅನೇಕ ಚಟುವಟಿಕೆಗಳನ್ನು ಭೇಟಿ ಮಾಡುವ ಮೂಲಕ ರಾಜಕೀಯ ಜೀವನದ ಒಂದು ನೋಟವನ್ನು ಪಡೆದುಕೊಂಡರು. ನೇತೃತ್ವ ಕಾರ್ಯಕ್ರಮವಾಗಿ, ಪ್ರತಿಭಾಗಿಗಳಿಗೆ ಅವರ ಸಮುದಾಯಗಳಲ್ಲಿನ ಚಟುವಟಿಕೆಗಳಿಗೆ ಸೃಜನಾತ್ಮಕ, ಸಹಾಯಕ ಮತ್ತು ಕ್ರಿಯಾತ್ಮಕ ಪರಿಹಾರಗಳನ್ನು ರಚಿಸುವ ಮೌಲ್ಯಯುತ ಶಿಕ್ಷಣ ನೀಡಲಾಗಿತ್ತು.
ಎಫ್ಎಫ್ಐ ಗ್ಲೋಬಲ್ ಅಲ್ಯೂಮ್ನಿ ಅಧಿಕಾರಿಗಳು ಅಧಿವೇಶನಗಳಿಗೆ ಸಹಕಾರವನ್ನು ಒದಗಿಸಿದ್ದರು.
ಸೋನಿಯಾ ಲಸ್ರಾದೊ ಪ್ರಸ್ತುತ ಮಂಗಳೂರಿನ ಸೈಂಟ್ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ 1 ಪಿಯುಸಿ ವಿಜ್ಞಾನ ವಿದ್ಯಾರ್ಥಿನಿಯಾಗಿದ್ದಾರೆ. ‘ಫ್ರೆಂಡ್ಸ್ ಫಾರೆವರ್ ಇಂಟರ್ ನ್ಯಾಶನಲ್ ಗ್ರೂಪ್’ಭಾಗವಹಿಸಿದ ಎಲ್ಲಾ ಅಭ್ಯರ್ಥಿಗಳಿಗೆ ಸಮುದಾಯದಲ್ಲಿನ ಕಾರ್ಯಗಳಿಗೆ ಮಾರ್ಗದರ್ಶನ ಮತ್ತು ಸಹಾಯ ಮಾಡುವುದನ್ನು ಮುಂದುವರೆಸಿದೆ.