ಮುಂಬೈ : ಬಿಎಸ್‌ಇ ಸೆನ್ಸೆಕ್ಸ್ 180.96 ಪಾಯಿಂಟ್ಸ್ ಅಥವಾ ಶೇಕಡಾ 0.28 ರಷ್ಟು ಕುಸಿದು 65,252.34 ಕ್ಕೆ ತಲುಪಿದೆ. ದಿನದ ವಹಿವಾಟಿನಲ್ಲಿ ಇದು ಗರಿಷ್ಠ 65,913.77 ಮತ್ತು ಕನಿಷ್ಠ 65,181.94 ಕ್ಕೆ ತಲುಪಿತ್ತು. ಹಾಗೆಯೇ ಎನ್‌ಎಸ್‌ಇ ನಿಫ್ಟಿ 57.30 ಪಾಯಿಂಟ್ಸ್ ಅಥವಾ ಶೇಕಡಾ 0.29 ರಷ್ಟು ಕುಸಿದು 19,386.70 ಕ್ಕೆ ತಲುಪಿದೆ.ಮೂರು ದಿನಗಳ ಏರಿಕೆಯ ನಂತರ ಗುರುವಾರದ ವಹಿವಾಟಿನಲ್ಲಿ ಭಾರತದ ಬೆಂಚ್ಮಾರ್ಕ್ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿದವು. ಪ್ರಮುಖವಾಗಿ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ಷೇರುಗಳ ಮಾರಾಟದ ಭರಾಟೆಯಿಂದ ಮಾರುಕಟ್ಟೆಗಳು ಇಳಿಕೆಯಲ್ಲಿ ಕೊನೆಗೊಂಡಿವೆ.ಗುರುವಾರದ ವಹಿವಾಟಿನಲ್ಲಿ ಭಾರತೀಯ ಷೇರು ಮಾರುಕಟ್ಟೆಗಳು ಇಳಿಕೆಯಲ್ಲಿ ಕೊನೆಗೊಂಡಿವೆ.
ಯುಎಸ್ ಷೇರುಗಳಲ್ಲಿನ ಲಾಭ ಮತ್ತು ಏಷ್ಯಾದ ಮಾರುಕಟ್ಟೆಗಳಿಂದ ಸಕಾರಾತ್ಮಕ ಸೂಚನೆಗಳ ನಂತರ ಸೆನ್ಸೆಕ್ಸ್ ಮತ್ತು ನಿಫ್ಟಿ ದಿನದ ಆರಂಭದಲ್ಲಿ ಸಕಾರಾತ್ಮಕವಾಗಿ ಪ್ರಾರಂಭವಾದವು. ಆದಾಗ್ಯೂ ಐಟಿ, ತೈಲ ಮತ್ತು ಬ್ಯಾಂಕಿಂಗ್ ಷೇರುಗಳಲ್ಲಿನ ನಷ್ಟವು ಸೂಚ್ಯಂಕಗಳನ್ನು ಇಳಿಕೆಗೆ ತಂದಿತು.
ಜಾಗತಿಕ ತೈಲ ಬೆಂಚ್ಮಾರ್ಕ್ ಬ್ರೆಂಟ್ ಕಚ್ಚಾ ತೈಲವು ಶೇಕಡಾ 0.10 ರಷ್ಟು ಏರಿಕೆಯಾಗಿ ಬ್ಯಾರೆಲ್ಗೆ 83.29 ಡಾಲರ್ಗೆ ತಲುಪಿದೆ. ಬಿಎಸ್‌ಇ ಬೆಂಚ್ ಮಾರ್ಕ್ ಬುಧವಾರ 213.27 ಪಾಯಿಂಟ್ ಅಥವಾ ಶೇಕಡಾ 0.33 ರಷ್ಟು ಏರಿಕೆ ಕಂಡು 65,433.30 ಕ್ಕೆ ತಲುಪಿತ್ತು. ನಿಫ್ಟಿ 47.55 ಪಾಯಿಂಟ್ ಅಥವಾ ಶೇಕಡಾ 0.25 ರಷ್ಟು ಏರಿಕೆ ಕಂಡು 19,444 ಕ್ಕೆ ತಲುಪಿತ್ತು.
ಸೆನ್ಸೆಕ್ಸ್ನಲ್ಲಿ ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಶೇ 4.99 ರಷ್ಟು ಕುಸಿದಿದೆ. ರಿಲಯನ್ಸ್ ಇಂಡಸ್ಟ್ರೀಸ್, ಪವರ್ ಗ್ರಿಡ್, ಲಾರ್ಸನ್ ಅಂಡ್ ಟೂಬ್ರೊ, ಜೆಎಸ್ಡಬ್ಲ್ಯೂ ಸ್ಟೀಲ್, ಎಚ್ಸಿಎಲ್ ಟೆಕ್ನಾಲಜೀಸ್, ಎನ್ಟಿಪಿಸಿ, ಟಾಟಾ ಸ್ಟೀಲ್, ವಿಪ್ರೋ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ಸಹ ಕುಸಿದವು. ಇಂಡಸ್‌ಇಂಡ್ ಬ್ಯಾಂಕ್, ಇನ್ಫೋಸಿಸ್, ಅಲ್ಟ್ರಾಟೆಕ್ ಸಿಮೆಂಟ್, ಐಸಿಐಸಿಐ ಬ್ಯಾಂಕ್, ನೆಸ್ಲೆ ಮತ್ತು ಆಕ್ಸಿಸ್ ಬ್ಯಾಂಕ್ ಲಾಭ ಗಳಿಸಿದವು.
ಚಂದ್ರಯಾನ -3 ರ ಯಶಸ್ಸಿನ ಹಿನ್ನೆಲೆಯಲ್ಲಿ ಬಾಹ್ಯಾಕಾಶ ಮತ್ತು ವಿಮಾನ ತಂತ್ರಜ್ಞಾನಕ್ಕೆ ಸಂಬಂಧಿಸಿದ ಷೇರುಗಳು ಆರಂಭಿಕ ವಹಿವಾಟಿನಲ್ಲಿ ಶೇಕಡಾ 20 ರಷ್ಟು ಏರಿಕೆಯಾಗಿದ್ದವು. ಅಂತಿಮವಾಗಿ ಈ ಷೇರುಗಳು ಮಿಶ್ರ ಪ್ರವೃತ್ತಿಯಲ್ಲಿ ಕೊನೆಗೊಂಡವು. ಸೆಂಟಮ್ ಎಲೆಕ್ಟ್ರಾನಿಕ್ಸ್ ಮತ್ತು ಪಾರಸ್ ಡಿಫೆನ್ಸ್ ಷೇರುಗಳು ಶೇ 7 ಮತ್ತು ಶೇ 6ರಷ್ಟು ಏರಿಕೆ ಕಂಡರೆ, ಎಂಟಿಎಆರ್ ಟೆಕ್ನಾಲಜೀಸ್ ಶೇ 4ರಷ್ಟು ಏರಿಕೆ ಕಂಡಿವೆ. ಮಿಧಾನಿ, ಹಿಂದೂಸ್ತಾನ್ ಏರೋನಾಟಿಕ್ಸ್ ಮತ್ತು ಇಂಡೋ ನ್ಯಾಷನಲ್ ಷೇರುಗಳು ಶೇ 2ರಷ್ಟು ಕುಸಿದವು.
ಏಷ್ಯಾದ ಮಾರುಕಟ್ಟೆಗಳಲ್ಲಿ ಸಿಯೋಲ್, ಟೋಕಿಯೊ, ಶಾಂಘೈ ಮತ್ತು ಹಾಂಗ್ ಕಾಂಗ್ ಸಕಾರಾತ್ಮಕ ಮಟ್ಟದಲ್ಲಿ ಕೊನೆಗೊಂಡವು. ಯುರೋಪಿಯನ್ ಮಾರುಕಟ್ಟೆಗಳು ಲಾಭದಲ್ಲಿ ವಹಿವಾಟು ನಡೆಸುತ್ತಿವೆ. ಯುಎಸ್ ಮಾರುಕಟ್ಟೆಗಳು ಬುಧವಾರ ಲಾಭದೊಂದಿಗೆ ಕೊನೆಗೊಂಡವು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬುಧವಾರ ₹ 614.32 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರದ ಅಂಕಿ ಅಂಶಗಳು ತಿಳಿಸಿವೆ.