ರೋಟರಿ ಮಣಿಪಾಲ ಹಿಲ್ಸ್ ವತಿಯಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶಭಕ್ತಿ ಗೀತೆ ಸ್ಪರ್ಧಾ ಕಾರ್ಯಕ್ರಮ

ಮಣಿಪಾಲ: ರೋಟರಿ ಮಣಿಪಾಲ ಹಿಲ್ಸ್, ಹುಡ್ಕೋ ಫ್ರೆಂಡ್ಸ್ ಹಾಗೂ ಮಣಿಪಾಲ ಕೆರೋಕೆ ಯವರ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಾರ್ವಜನಿಕರಿಗಾಗಿ ಜಿಲ್ಲಾಮಟ್ಟದ ದೇಶ ಭಕ್ತಿ ಗೀತೆ ಸ್ಪರ್ಧೆ ಸತತ 5ನೇ ವರ್ಷ ಆಯೋಜಿಸಲಾಗಿದ್ದು, ಸುಮಾರು ನೂರಕ್ಕೂ ಮಿಕ್ಕಿ ಸ್ಪರ್ಧಾಳುಗಳು ಭಾಗವಹಿಸಿದ್ದರು.

ಮಾಜಿ ರೋಟರಿ ಜಿಲ್ಲಾ ರಾಜ್ಯಪಾಲ ಹಾಗೂ ಯುವ ಉದ್ಯಮಿ ರೋ. ಅಭಿನಂದನ್ ಶೆಟ್ಟಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ನಾಗರಿಕರಲ್ಲಿ ದೇಶಭಕ್ತಿಯನ್ನು ಜಾಗೃತಿಗೊಳಿಸುವ ಕಾರ್ಯಕ್ರಮವನ್ನು ಶ್ಲಾಘಿಸಿದರು.

ಶಾಸಕ ಯಶ್ ಪಾಲ್ ಸುವರ್ಣ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಟಪಾಡಿಯ ಯಶಸ್ವೀ ಕೈಗಾರಿಕೋದ್ಯಮಿ ರೋ.ಸತ್ಯೇಂದ್ರ ಪೈ ಮಾತನಾಡಿದರು.

ರೋಟರಿ ಅಧ್ಯಕ್ಷ ರೋ. ಸಿ ರಮಾನಂದ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.

ವೇದಿಕೆಯಲ್ಲಿ ರೋಟರಿ ವಲಯ ಸೇನಾನಿ ರೋ. ತಾರಾ ಶೆಟ್ಟಿ, ಹುಡ್ಕೋ ಫ್ರೆಂಡ್ಸ್ ಅಧ್ಯಕ್ಷ ಸಚಿನ್ ಕಾಮತ್ ಹಾಗೂ ಮಣಿಪಾಲ ಕೆರೋಕೆಯ ಮುಖ್ಯಸ್ಥ ಉಮೇಶ್ ಉಪಸ್ಥಿತರಿದ್ದರು.

ರೋ. ಮಾಲತಿ ರಾವ್ ಮತ್ತು ರೋ. ಪಿ ಆರ್ ನಾಯಕ್ ಅತಿಥಿಗಳನ್ನು ಪರಿಚಯಿಸಿದರು. ಹುಡ್ಕೋ ಫ್ರೆಂಡ್ಸ್ ನ ಭರತ್ ವಂದಿಸಿದರು. ರೊ. ನಾರಾಯಣ ಭಟ್ ನಿರೂಪಿಸಿದರು.

ಕಲ್ಯಾಣಪುರ ಲಕ್ಷ್ಮೀ ನಾರಾಯಣ ನಾಯಕ ಅಪರೂಪದ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ಬಿಡುಗಡೆಯಾದ ಅಂಚೆ ಚೀಟಿಗಳನ್ನು ಪ್ರದರ್ಶಿಸಿದರು.

ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಭಾಧ್ಯಕ್ಷ ರೋ. ಸಿ ರಮಾನಂದ ಭಟ್ ಸ್ವಾಗತಿಸಿದರು. ಮುಖ್ಯ ಅತಿಥಿಗಳಾದ ಉಡುಪಿ ನಗರ ಸಭಾ ಸದಸ್ಯೆ ಕಲ್ಪನಾ ಸುಧಾಮ ಹಾಗೂ ಸ್ಥಳೀಯ ಮಾತೃಮಂಡಳಿಯ ಅಧ್ಯಕ್ಷೆ ವಿನಯಾ ಕಾಮತ್ ವಿಜೇತರಿಗೆ ಫಲಕಗಳನ್ನು ಹಾಗೂ ಬಹುಮಾನಗಳ ಪ್ರಾಯೋಜಕರು ನಗದು ಬಹುಮಾನಗಳನ್ನು ವಿತರಿಸಿದರು. ತೀರ್ಪುಗಾರರರಿಗೆ ಹಾಗೂ ಅತಿಥಿಗಳಿಗೆ ಸ್ಮರಣಿಕೆಗಳನ್ನು ನೀಡಲಾಯಿತು. ಸದಾನಂದ್ ವಂದಿಸಿದರು. ರೋ. ಸುಪರ್ಣಾ ಶೆಟ್ಟಿನಿರೂಪಿಸಿದರು.