ನವದೆಹಲಿ: ಕೋವಿಡ್ 19 ಬಳಿಕ ಅದರ ಉಪತಳಿಗಳು ಪತ್ತೆಯಾಗುತ್ತಲೇ ಇದೆ.ಇದೀಗ ಸಾರ್ಸ್ ಕೋವ್ 2ನ ಹೊಸ ಉಪತಳಿ ಪತ್ತೆಯಾಗಿದೆ. ಪ್ರಧಾನ ಮಂತ್ರಿ ಅವರ ಪ್ರಧಾನ ಕಾರ್ಯದರ್ಶಿಯಾದ ಪಿಕೆ ಮಿಶ್ರಾ, ನೇತೃತ್ವದಲ್ಲಿ ಸಂಬಂಧಿಸಿದ ಅಧಿಕಾರಿಗಳಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದು, ಜಾಗತಿಕ ಮತ್ತು ರಾಷ್ಟ್ರ ಮಟ್ಟದಲ್ಲಿನ ಕೋವಿಡ್ ಪರಿಸ್ಥಿತಿಗಳ ಕುರಿತು ಅವಲೋಕನ ನಡೆಸಲಾಯಿತು. ಇದೇ ವೇಳೆ, ಹೊಸ ಉಪ ತಳಿಯು ಸಾರ್ವಜನಿಕ ಆರೋಗ್ಯದ ಮೇಲೆ ಬೀರುವ ಪರಿಣಾಮ ಕುರಿತು ಚರ್ಚಿಸಲಾಯಿತು.ಬ್ರಿಟನ್, ಯುರೋಪ್ ಸೇರಿದಂತೆ ಹಲವೆಡೆ ಪತ್ತೆಯಾಗಿರುವ ಈ ಹೊಸ ತಳಿ ಕುರಿತು ಪ್ರಧಾನಮಂತ್ರಿಗಳ ಸಚಿವಾಲಯ ಮುನ್ನೆಚ್ಚರಿಕೆ ವಹಿಸಿದ್ದು, ಈ ಸಂಬಂಧ ಪರಿಸ್ಥಿತಿ ಅವಲೋಕನ ಕುರಿತು ಉನ್ನತ ಮಟ್ಟದ ಸಭೆ ನಡೆಸಲಾಗಿದೆ.ಸಭೆಯಲ್ಲಿ ಜಾಗತಿಕ ಮತ್ತು ರಾಷ್ಟ್ರ ಮಟ್ಟದಲ್ಲಿನ ಕೋವಿಡ್ ಪರಿಸ್ಥಿತಿಗಳ ಕುರಿತು ಅವಲೋಕನ ನಡೆಸಲಾಯಿತು. ಇದೇ ವೇಳೆ, ಹೊಸ ಉಪ ತಳಿಯು ಸಾರ್ವಜನಿಕ ಆರೋಗ್ಯದ ಮೇಲೆ ಬೀರುವ ಪರಿಣಾಮ ಕುರಿತು ಚರ್ಚಿಸಲಾಯಿತು.
ಕಳೆದ ಏಳು ದಿನಗಳಿಂದ ಜಾಗತಿಕವಾಕವಾಗಿ 2,96,219 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ. ಇದು ಸುಮಾರು ಜಾಗತಿಕ ಜನಸಂಖ್ಯೆಯ ಶೇ 17ರಷ್ಟಿದೆ. ಭಾರತದಲ್ಲಿ ನಿತ್ಯ ಹೊಸ ಕೋವಿಡ್ ಪ್ರಕರಣಗಳು ಕೇವಲ 50ಕ್ಕಿಂತ ಕಡಿಮೆ ದಾಖಲಾಗುತ್ತಿದೆ. ವಾರದ ಕೋವಿಡ್ ಪಾಸಿಟಿವ್ ಪ್ರಕರಣಗಳು ಶೇ 0.2ಕ್ಕಿಂತ ಕಡಿಮೆ ಇದೆ. ಇದೇ ವೇಳೆ, ಭಾರತದಲ್ಲಿರುವ ವಿವಿಧ ರೂಪಾಂತರಗಳ ಜೀನೋಮ್ ತಳಿಗಳ ಕುರಿತು ಒಂದು ಅವಲೋಕನ ನೀಡಲಾಯಿತು.
ಈ ಉನ್ನತ ಮಟ್ಟದ ಸಭೆಯಲ್ಲಿ ನೀತಿ ಆಯೋಗದ ಸದಸ್ಯ ವಿನೋದ್ ಪೌಲ್, ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ, ಪಿಎಂಒ ಸಲಹೆಗಾರರಾದ ಅಮಿತ್ ಖರೆ, ಆರೋಗ್ಯ ಕಾರ್ಯದರ್ಶಿ ಸುಧಂಶ್ ಪಂತ್ ಮತ್ತಿತ್ತರ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.ಸುದೀರ್ಘ ಚರ್ಚೆಯ ಬಳಿಕ ಮಾತನಾಡಿರುವ ಅಧಿಕಾರಿ ಮಿಶ್ರಾ, ಭಾರತದಲ್ಲಿ ಕೋವಿಡ್ ಪರಿಸ್ಥಿತಿ ಸ್ಥಿರವಾಗಿದೆ. ದೇಶದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳು ಕೂಡ ಯಾವುದೇ ರೀತಿಯ ಪರಿಸ್ಥಿತಿ ಎದುರಿಸಲು ಸಜ್ಜಾಗಿದೆ. ರಾಜ್ಯಗಳು ಐಎಲ್ಐ/ಎಸ್ಎಆರ್ಐ ಪ್ರಕರಣಗಳ ಮೇಲ್ವಿಚಾರಣೆ ಮಾಡುವ ಅಗತ್ಯವಿದೆ. ಜೀನೋಮ್ ಅನುಕ್ರಮ ಹೆಚ್ಚಿಸುವಾಗ ಮತ್ತು ಹೊಸ ರೂಪಾಂತರಗಳ ಮೇಲೆ ನಿಗಾ ವಹಿಸಲು ಪರೀಕ್ಷೆಗೆ ಸಾಕಷ್ಟು ಮಾದರಿಗಳನ್ನು ಕಳುಹಿಸಬೇಕು ಎಂದು ಸೂಚನೆ ನೀಡಿದರು.
54 ಹೊಸ ಪ್ರಕರಣ ಪತ್ತೆ: ಸೋಮವಾರ ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಭಾರತದಲ್ಲಿ 54 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಈ ಮೂಲಕ ಭಾರತದಲ್ಲಿನ ಒಟ್ಟಾರೆ ಕೋವಿಡ್ ಪ್ರಕರಣಗಳ ಸಂಖ್ಯೆ 4,49,96,653 ಆಗಿದೆ. ಇನ್ನು ಸಾವಿನ ಪ್ರಕರಣ 5,13,926 ಆಗಿದೆ. ಇಲ್ಲಿಯವರೆಗೆ 2,20,67 ಕೋಟಿ ಕೋವಿಡ್ ಲಸಿಕೆ ನೀಡಲಾಗಿದೆ.ಜಾಗತಿಕ ಕೋವಿಡ್ ಪರಿಸ್ಥಿತಿಗಳ ಕುರಿತು ಆರೋಗ್ಯ ಕಾರ್ಯದರ್ಶಿ ಮಾಹಿತಿ ನೀಡಿದರು. ಈ ವೇಳೆ ಸಾರ್ಸ್ ಕೋವ್-2 ವೈರಸ್ನ BA.2.86 (ಪಿರೊಲ) ಮತ್ತು EG.5 (ಎರಿಸ್) ಕುರಿತು ಮಾಹಿತಿ ನೀಡಿದರು. ಸದ್ಯ ಈ ಎರಿಸ್ ವೈರಸ್ ಅನೇಕ ದೇಶದಲ್ಲಿ ಪತ್ತೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ, ಜಗತ್ತಿನ 50 ದೇಶಗಳಲ್ಲಿ ಏರಿಸ್ ಸೋಂಕು ಪತ್ತೆಯಾಗುತ್ತಿರುವ ಕುರಿತು ಎಚ್ಚರಿಸಿದೆ. ಇನ್ನು ನಾಲ್ಕು ದೇಶದಲ್ಲಿ BA.2.86 (ಪಿರೊಲ) ಸೋಂಕು ಪತ್ತೆಯಾಗಿದೆ.