ಕುಂದಾಪುರ: ಕೋಟ ಮೂರ್ತೆದಾರರ ಸ.ಸಂ.ದ 2023-24 ರಿಂದ 2027-28 ಸಾಲಿನ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಸಂಘದ ನಿರ್ದೇಶಕ ಸ್ಥಾನಕ್ಕೆ ರಾಮ ಪೂಜಾರಿ, ಪಿ.ಕೃಷ್ಣ ಪೂಜಾರಿ, ಜಯರಾಮ ಪೂಜಾರಿ, ಕೆ.ಕೊರಗ ಪೂಜಾರಿ, ಮಂಜುನಾಥ ಪೂಜಾರಿ, ರಾಜು ಪೂಜಾರಿ, ಜಿ.ಸಂಜೀವ ಪೂಜಾರಿ, ಕೃಷ್ಣ ಪೂಜಾರಿ ಪಾರಂಪಳ್ಳಿ, ಭಾರತಿ ಎಸ್ ಪೂಜಾರಿ, ಪ್ರಭಾವತಿ ಡಿ ಬಿಲ್ಲವ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ನೂತನ ಮಂಡಳಿ ಅಧ್ಯಕ್ಷರಾಗಿ ಕೆ.ಕೊರಗ ಪೂಜಾರಿ, ಉಪಾಧ್ಯಕ್ಷರಾಗಿ ಜಯರಾಮ್ ಪೂಜಾರಿ, ಪುನರಾಯ್ಕೆಗೊಂಡಿದ್ದು, ಸಂಘದ ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ದಿ ಅಧಿಕಾರಿ ಜ್ಯೋತಿ ಡಿ. ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು ಎಂದು ಸಿಇಒ ಜಗದೀಶ್ ಕೆಮ್ಮಣ್ಣು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.