ಉಡುಪಿ:ಮಾಜಿ ಶಾಸಕ ಗೋಪಾಲ ಭಂಡಾರಿ ನಿಧನಕ್ಕೆ ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಸಂತಾಪ ಸೂಚಿಸಿದ್ದಾರೆ.
ಹಳ್ಳ್ಳಿಯಲ್ಲಿಯೇ ಹುಟ್ಟಿ ಬೆಳೆದು ಬಡವರ ಕಷ್ಟಗಳನ್ನು ಅರಿತು ಅದಕ್ಕೆ ಸ್ಪಂದಿಸಿ ಸಹಾಯ ಮಾಡುತ್ತಾ, ಸಣ್ಣ ಜವಾಬ್ದಾರಿಯಂದ ಹೆಜ್ಜೆ ಹೆಜ್ಜೆಗೂ ಸಾಧನೆ ಮಾಡಿ ಜನಪ್ರಿಯ ಶಾಸಕರಾಗಿ ಸೇವೆ ಮಾಡಿದ ಸರಳ ಸಜ್ಜನಿಕೆಯ ರಾಜಕಾರಣಿ ಆದ ಗೋಪಾಲ ಭಂಡಾರಿಯವರು ನಿಧನರಾಗಿರುವುದು ದುಃಖ ತಂದಿದೆ. ಅವರ ಕುಟುಂಬದವರಿಗೆ ದುಃಖ ಸಹಿಸುವ ಶಕ್ತಿ ಕೊಟ್ಟು, ಅವರ ಆತ್ಮಕ್ಕೆ ಸದ್ಗತಿಯಾಗಲಿ ಎಂದು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಸಂತಾಪ ತಿಳಿಸಿದ್ದಾರೆ