ಉಡುಪಿ: ಕೇಂದ್ರ ಸರ್ಕಾರದ ಸಮಾಚಾರ ಮತ್ತು ಪ್ರಸಾರ ಸಚಿವಾಲಯ, ಕೇಂದ್ರ ಸಂವಹನ ಇಲಾಖೆ ವತಿಯಿಂದ ಉಡುಪಿ ಕೃಷ್ಣಮಠದ ರಾಜಾಂಗಣದ ಆವರಣದಲ್ಲಿ ಸ್ವಾತಂತ್ರ‍್ಯೋತ್ಸವದ ಅಂಗವಾಗಿ “ನಯಾ ಭಾರತ್ ಸಶಕ್ತ್ ಭಾರತ್” ಥೀಮ್‌ನಲ್ಲಿ ಸೆಲ್ಫಿ ಬೂತ್ ಅಳವಡಿಸಿದ್ದು, ಕೃಷ್ಣಾಪುರ ಪರ್ಯಾಯ ಮಠದ ದಿವಾನ ವರದರಾಜ ಭಟ್ ಸೆಲ್ಫಿ ತೆಗೆದುಕೊಂಡರು. ಮುಂದಿನ ಮೂರು ದಿನ ಈ ಸೆಲ್ಫಿ ಬೂತನ್ನು ರಾಜಾಂಗಣದಲ್ಲಿ ಇರಿಸಲಾಗಿದ್ದು, ಸಾರ್ವಜನಿಕರು ಸೆಲ್ಫಿ ತೆಗೆದುಕೊಳ್ಳಬಹುದಾಗಿದೆ.












